ಗೋಕಾಕ: ಹೆಣ್ಣು ವೈಜ್ಞಾನಿಕ ಜಗತ್ತಿನಲ್ಲಿ ಪ್ರತಿಯೊಂದು ಕ್ಷೇತ್ರದಲ್ಲೂ ಕಾಲಿರಿಸಿ ತನ್ನ ಸಾಮಥ್ರ್ಯವನ್ನು ತೋರಿಸಿದ್ದಾಳೆ. ಧೈರ್ಯ ಕುಂದದೆ ಮುನ್ನುಗ್ಗಿ ಸಾಧನೆ ಮಾಡಲು ಸ್ಫೂರ್ತಿ ನೀಡುವ ಕೈಗಳು ಸಾಕಷ್ಟು ಇವೆ. ಅದರಲ್ಲೂ ವಿಶೇಷವಾಗಿ ಶಿವಾ ಫೌಂಡೇಶನ್ ಸಂಸ್ಥೆಯ ಕಾರ್ಯ ಶ್ಲಾಘನೀಯ ಎಂದು ಗೋಕಾಕ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷೆ ಭಾರತಿ ಮದಭಾವಿ ಹೇಳಿದರು.
ಅವರು ಇಲ್ಲಿಯ ಶಿವಾ ಫೌಂಡೇಶನ್ ಸಂಸ್ಥೆ ಮತ್ತು ಬೆಂಗಳೂರ ಸ್ನೇಹಾ ಚಾರಿಟೇಬಲ್ ಟ್ರಸ್ಟ್ ಆಶ್ರಯದಲ್ಲಿ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಮತ್ತು ಯುಗಾದಿ ಹಬ್ಬದ ಪ್ರಯುಕ್ತ ಬಡ ವಿಧವಾ ಕುಟುಂಬಗಳಿಗೆ “ಆಹಾರ ಧಾನ್ಯಗಳ ವಿತರಣಾ ಕಾರ್ಯಕ್ರಮದಲ್ಲಿ ಮುಖ್ಯ ಅಥಿತಿಗಳಾಗಿ ಭಾಗವಹಿಸಿ ಮಾತನಾಡಿದರು.
ಬ್ರಹ್ಮಕುಮಾರಿ ಬಿ.ಕೆ.ಮೇಘಾ ಅಕ್ಕನ್ನವರು ಮಾತನಾಡಿ, ಸ್ತ್ರೀ ಎಲ್ಲಾ ಪಾತ್ರಗಳನ್ನು ನಿರ್ವಹಿಸಿ ತಾಳ್ಮೆ, ಸಹನೆ, ಶಾಂತಿ ಹೊಂದಿರುವ ಜೀವಿ, ಕಾಳಿ ಅವತಾರ ತಾಳಿ ದುಷ್ಕರ್ಮಿಗಳ ಸಂಹಾರಕ್ಕೂ ಸಿದ್ದಳು, ಮಹಿಳೆ ಸಾಕಷ್ಟು ಪ್ರಮಾಣದಲ್ಲಿ ಬದಲಾಗಿದ್ದಾಳೆ. ಆತ್ಮ ಪರಮಾತ್ಮನಲ್ಲಿ ಲೀನ ಆಗುವ ವರೆಗೆ ಸಮುದಾಯದ ಬಡ ಜನರಿಗೆ ತಮ್ಮ ಕೈಲಾದಷ್ಟು ಸಹಾಯ ಮಾಡಿ ಪುಣ್ಯ ಗಳಿಸಬೇಕು ಎಂದರು
ಬ್ಯಾಂಕ್ ಆಫ್ ಬರೋಡಾ ಗೋಕಾಕ ಶಾಖೆಯ ವ್ಯವಸ್ಥಾಪಕಿ ಶ್ರೀಮತಿ. ಜೇನ್ ಆಂಥೋನಿ ಮರಿಯಪ್ಪ ಮಾತನಾಡಿ, ಶಿವಾ ಫೌಂಡೇಶನ್ ಸಂಸ್ಥೆಯು ವಿಶೇಷ ಮಕ್ಕಳ ಆರೈಕೆ ಕೇಂದ್ರದ ಮುದ್ದು ಮಕ್ಕಳ ಏಳಿಗೆಗಾಗಿ ಶ್ರಮಿಸುವ ಕಾರ್ಯಕ್ರಮ ಅದ್ಬುತ. ಇವರಿಗೆ ಆ ಭಗವಂತ ಇನ್ನಷ್ಟು ಶಕ್ತಿ ನೀಡಲಿ ಎಂದರು.
ಸಮಾಜ ಸೇವಕಿ ಐಶ್ವರ್ಯ ಯಂಡಿಗೇರಿ ಮಾತನಾಡಿ, ಈ ಶಿವಾ ಫೌಂಡೇಶನ್ ಸಂಸ್ಥೆಯ ಪ್ರತಿಯೊಂದು ಕಾರ್ಯಕ್ಕೂ ನಾನು ಸಹಾಯ ಮಾಡಲು ಸಿದ್ಧಳಿದ್ದೇನೆ. ಮಕ್ಕಳ ಆರೈಕೆ ತುಂಬಾ ಕಷ್ಟದ ಕೆಲಸ ಆದರೂ ನೀವು ಅಚ್ಚು ಕಟ್ಟಾಗಿ ನಡೆಸಿಕೊಂಡು ಹೋಗುತ್ತಿರುವುದು ಹೆಮ್ಮೆಯ ಸಂಗತಿ ಎಂದರು.
ಶಕ್ತಿ ಮಹಿಳಾ ಸಂಘದ ಅಧ್ಯಕ್ಷೆ ಲಲಿತಾ ಹೊಸಮನಿ ಮಾತನಾಡಿ, ಮಹಿಳಾ ದಿನಾಚರಣೆ ಇಂದು ಮಾತ್ರ ಅಲ್ಲ. ಬೆಳಿಗ್ಗೆ ರಂಗೋಲಿ ಹಾಕಿ ಶುರು ಮಾಡಿದರೆ ರಾತ್ರಿ ನಮ್ಮ ಮನೆಯ ಗ್ಯಾಸ್ ಸಿಲಿಂಡರ್ ಬಂದ್ ಮಾಡಿ ಮಲುಗುವವರೆಗೆ ಎμÉ್ಟೂೀ ಕಾರ್ಯಗಳನ್ನು ಮಾಡುವ ನಾವು ಬದುಕಿನ ಪ್ರತಿಯೊಂದು ಕ್ಷಣವೂ ಅಮೂಲ್ಯವಾದದ್ದು ನಿರಂತರವಾಗಿ ಆನಂದಿಸಬೇಕು ಎಂದರು.
ಬೆಂಗಳೂರ ಸ್ನೇಹಾ ಗ್ರಾಮ ಚಾರಿಟೇಬಲ್ ಟ್ರಸ್ಟ್‍ದ ಲಕ್ಷ್ಮೀಕಾಂತ ರೆಡ್ಡಿ ಮಾತನಾಡಿ, ನಮ್ಮ ಸ್ನೇಹ ಗ್ರಾಮ ಸಂಸ್ಥೆಯೊಂದಿಗೆ ಸಹಕಾರ ನೀಡುತ್ತಿರುವ ಎಲ್ಲರಿಗೂ ಅಭಿನಂದಿಸುವುದಾಗಿ ಹೇಳಿದರು.
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಗೋಕಾಕ ಕೆ.ಎಲ್.ಇ ಶಾಲೆಯ ಅನುಪಾ ಕೌಶಿಕ್ ಮಾತನಾಡಿ, ಶಿವಾ ಫೌಂಡೇಶನ್ ಸಂಸ್ಥೆ ಕಳೆದ 5 ವರ್ಷಗಳಿಂದ ಸಮುದಾಯಕ್ಕೆ ಸಾರ್ಥಕ ಸೇವೆ ಸಲ್ಲಿಸುತ್ತಿರುವುದು ಅಭಿನಂದನಾರ್ಹ ವಿಷಯ.
ಬಡ ಕುಟುಂಬಗಳಿಗೆ ಆಹಾರ ದಾನ್ಯ ವಿತರಣೆ ಮಾಡುವ ಮೂಲಕ ಅರ್ಥಪೂರ್ಣವಾಗಿ ಮಹಿಳಾ ದಿನಾಚರಣೆಯನ್ನು ಆಚರಿಸುತ್ತಿದ್ದಾರೆ ಎಂದರು.
ಸಮಾರಂಭದಲ್ಲಿ ಶಿವಾ ಫೌಂಡೇಶ ಕಾರ್ಯದರ್ಶಿ ಗಿರಿಜಾ ಪೂಜೇರಿ, ಸಂತೋಷ ಬೆಟಗೇರಿ, ಮಾರುತಿ ತುರಾಯಿದಾರ, ವಿಶಾಲ ದೇವರ, ಶಾನೂರ ಹಿರೇಹೊಳಿ ಮತ್ತಿತರರು ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ 30ಜನ ವಿಧವಾ ಫಲಾನುಭವಿಗಳಿಗೆ ಅಗತ್ಯವಿರುವ ದಿನ ಬಳಕೆ ಆಹಾರ ಧಾನ್ಯಗಳನ್ನು ವಿತರಣೆ ಮಾಡುವ ಮೂಲಕ ಅರ್ಥಪೂರ್ಣವಾಗಿ ಮಹಿಳಾ ದಿನಾಚರಣೆಯನ್ನು ಆಚರಿಸಿದರು,
ಈ ಕಾರ್ಯಕ್ರಮದಲ್ಲಿ ವಿಶೇಷ ಮಕ್ಕಳ ಆರೈಕೆ ಕೇಂದ್ರದ ಮಕ್ಕಳು ಪ್ರಾರ್ಥಿಸಿ ತಮ್ಮ ಅನಿಸಿಕೆಗಳನ್ನು ಹಂಚಿಕೊಂಡರು. ಸರಕಾರಿ ಪ.ಪೂ ಮಹಾವಿದ್ಯಾಲಯದ ವಿದ್ಯಾರ್ಥಿನಿಯರು ಸ್ವಾಗತಿಸಿ ನಿರೂಪಿಸಿದರು. ಶಿವಾ ಫೌಂಡೇಶನ್ ಅಧ್ಯಕ್ಷ ರಮೇಶ ಪೂಜೇರಿ ಪ್ರಾಸ್ತಾವಿಕವಾಗಿ ಮಾತನಾಡಿದರು, ವೆಂಕಟೇಶ ನಾಯಿಕ ವಂದಿಸಿದರು.