Breaking News
Home / Recent Posts / ಹಳ್ಳೂರ ಗ್ರಾಮ ಸ್ವಯಂ ಪ್ರೇರಿತ ಲಾಕ್‌ಡೌನ್..! ನಾಳೆ ಬೆಳ್ಳೆಗೆ 10ರಿಂದ ಸಂಪೂರ್ಣ ಲಾಕ್ , ಯಾರು ಬೀದಿಗಿಳಿಯದಂತೆ ಎಚ್ಚರಿಕೆ , ಗ್ರಾಮದ ಜನಪ್ರತಿನಿಧಿಗಳ ನಿಣರ್ಯ

ಹಳ್ಳೂರ ಗ್ರಾಮ ಸ್ವಯಂ ಪ್ರೇರಿತ ಲಾಕ್‌ಡೌನ್..! ನಾಳೆ ಬೆಳ್ಳೆಗೆ 10ರಿಂದ ಸಂಪೂರ್ಣ ಲಾಕ್ , ಯಾರು ಬೀದಿಗಿಳಿಯದಂತೆ ಎಚ್ಚರಿಕೆ , ಗ್ರಾಮದ ಜನಪ್ರತಿನಿಧಿಗಳ ನಿಣರ್ಯ

Spread the love

ಹಳ್ಳೂರ ಗ್ರಾಮ ಸ್ವಯಂ ಪ್ರೇರಿತ ಲಾಕ್‌ಡೌನ್..!

ನಾಳೆ ಬೆಳ್ಳೆಗೆ 10ರಿಂದ ಸಂಪೂರ್ಣ ಲಾಕ್ , ಯಾರು ಬೀದಿಗಿಳಿಯದಂತೆ ಎಚ್ಚರಿಕೆ , ಗ್ರಾಮದ ಜನಪ್ರತಿನಿಧಿಗಳ ನಿಣರ್ಯ

ಮೂಡಲಗಿ: ಎರಡನೇ ಅಲೆಯ ಮಹಾಮಾರಿ ಕೊರೋನಾ ಇಡೀ ದೇಶಾದ್ಯಂತ ತನ್ನ ಲಕ್ಷಣಗಳನ್ನು ಬದಲಾವಣೆ ಮಾಡಿಕೊಂಡು ಹದ್ದು ಮೀರುತ್ತಿರುವುದರಿಂದ ಹಳ್ಳೂರ ಗ್ರಾಮದ ಜನತೆಯ ಸುರಕ್ಷೆತೆ ದೃಷ್ಟಿಯಿಂದ ಶಾಸಕರ ಮಾರ್ಗದರ್ಶನದಲ್ಲಿ ಸ್ವಯಂ ಪ್ರೇರಿತವಾಗಿ ಗ್ರಾಮವನ್ನು ಲಾಕ್‌ಡೌನ್ ಮಾಡಲಾಗಿದೆ ಎಂದು ಪಿಡಿಓ ಎಚ್ ವೈ ತಾಳಿಕೋಟಿ ಹೇಳಿದರು.

ಹಳ್ಳೂರ ಗ್ರಾಮದಲ್ಲಿ ಶುಕ್ರವಾರದಂದು ಪಂಚಾಯತ ಆವರಣದಲ್ಲಿ ಆಯೋಜಿಸದ ಜನಪ್ರತಿನಿಧಿಗಳ ಸಭೆಯಲ್ಲಿ ಮಾತನಾಡಿದ. ದಿನೇ ದಿನೇ ಕೊರೋನಾ ಹಾವಳಿ ಹೆಚ್ಚುತ್ತಿದೆ. ನಿಯಂತ್ರಣಕ್ಕೆ ಎಲ್ಲ ರೀತಿಯ ಕ್ರಮಗಳನ್ನು ಕೈಕೊಳ್ಳುತ್ತಿದ್ದರೂ ಅಲೆಯ ಅರ್ಭಟ ಮುಂದುವರೆದಿದೆ. ಇದಕ್ಕೆ ಸಂಪೂರ್ಣ ಲಾಕ್ ಡೌನ್ ಯೊಂದೇ ಪರಿಹಾರವಾಗಿದ್ದು, ಆದರಿಂದ ಜನಪ್ರತಿನಿಧಿಗಳು ಹಗೂ ಗ್ರಾಮದ ಮುಖಂಡರ ಜೊತೆ ಚರ್ಚಿಸಿ ಮೇ.8ರಂದು ಮುಂಜಾನೆ 10ರಿಂದ ಸ್ವಯಂ ಪ್ರೇರಿತ ಲಾಕ್‌ಡೌನ್ ಮಾಡಲು ನಿರ್ಧರಿಸಲಾಗಿದೆ ಆದರಿಂದ ಸಾರ್ವಜನಿಕರು ಇದಕ್ಕೆ ಸಹಕರಿಸಬೇಕೆಂದು ಹೇಳಿದರು.

ಗ್ರಾಮದ ಸಾರ್ವಜನಿಕರು ನಾಳೆ 10 ಗಂಟೆ ಒಳಗೆ ತಮ್ಮಗೆ ಬೇಕಾದ ದಿನಸಿ ವಸ್ತುಗಳನ್ನು ಖರೀದಿಗೆ ಅವಕಾಶ ಕಲ್ಪಿಸಿಕೊಡಲಾಗಿದೆ. ಇನ್ನೂ ದಿನಸಿ ಅಂಗಡಿ ಮಾಲೀಕರು ಹೂಮ್ ಡಿಲೇವರಿ ಮಾಡುವವರಿಗೆ ಗ್ರಾಮ ಪಂಚಾಯತ ಮುಂಖಾತರ ಗುರುತಿನ ಚೀತಿ ವಿತರಿಸಲಾಗುವುದು. ಲಾಕ್‌ಡೌನ್ ವೇಳೆ ಆಸ್ಪತ್ರೆಗಳು, ಮೆಡಿಕಲ್ ಅಂಗಡಿ, ಹಾಲು ಅಂಗಡಿಗಳಿಗೆ ಮಾತ್ರ ಅವಕಾಶ ಇದ್ದು ಆದರಿಂದ ಮನೆ ಬಿಟ್ಟು ಹೊರಗೆ ಬರಬೇಡಿ ಎಂದು ಸಾರ್ವಜನಿಕರಲ್ಲಿ ಮನವಿ ಮಾಡಿಕೊಂಡಿದ್ದಾರೆ.

ಈ ಸಂದರ್ಭದಲ್ಲಿ ಗ್ರಾಪಂ ಅಧ್ಯಕ್ಷ ಲಕ್ಷ್ಮಣ ಕತ್ತಿ ಹಾಗೂ ಎಲ್ಲ ಸದಸ್ಯರು ಮತ್ತು ಸಿಬ್ಬಂಧಿಗಳು, ಗ್ರಾಮದ ಮುಖಂಡರು ಉಪಸ್ಥಿತಿರಿದ್ದರು.


Spread the love

About inmudalgi

Check Also

ಬೆಟಗೇರಿ ಗ್ರಾಮದಲ್ಲಿ ಕಟ್ಟಾ ವಾರ ಆಚರಣೆ

Spread the loveಬೆಟಗೇರಿ:ಗೋಕಾಕ ತಾಲೂಕಿನ ಬೆಟಗೇರಿ ಗ್ರಾಮದ ಜನ-ಜಾನುವಾರುಗಳಿಗೆ ರೋಗ-ರುಜೀನ ಬರದಂತೆ ಹಾಗೂ ಸಕಾಲಕ್ಕೆ ಮಳೆಯಾಗದಿದ್ದ ಕಾರಣ ಮಳೆಗಾಗಿ ಇದೇ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ