ವಿದ್ಯುತ್ ವ್ಯತ್ಯಯ
ಮೂಡಲಗಿ: 110 ಕೆವಿ ಮೂಡಲಗಿ ಪಟ್ಟಣ ಹಾಗೂ 110ಕೆವಿ ನಾಗನೂರ ವಿದ್ಯುತ್ ವಿತರಣಾ ಕೇಂದ್ರದಲ್ಲಿ ಮೊದಲನೇಯ ತ್ರೈಮಾಸಿಕ ಕಾರ್ಯ ನಿರ್ವಹಣೆ ಕಾರ್ಯ ಕೈಗೊಳ್ಳಲು ಉದ್ದೇಶಿಸಿರುವುದರಿಂದ ಮೇ.23 ರಂದು ಮು. 10 ಗಂಟೆಯಿಂದ ಸಂಜೆ 5 ಗಂಟೆಯವರೆಗೆ 110 ಕೆವಿ ನಾಗನೂರ ಹಾಗೂ ಮೂಡಲಗಿ ಕೇಂದ್ರದಿಂದ ಸರಬುರಾಜು ಆಗುವ ಮೂಡಲಗಿ ಪಟ್ಟಣ, ವಾಟರ್ ಸಪ್ಲೈ ಹಾಗೂ ಮೂಡಲಗಿ ಮತ್ತು ನಾಗನೂರದ ಎಲ್ಲ 11ಕೆವಿ ನೀರಾವರಿ ಪಂಪಸೆಟ್ ಮಾರ್ಗಗಳ ವಿದ್ಯುತ್ ಪೋರೈಕೆಯಲ್ಲಿ ವ್ಯತ್ಯಯ ಉಂಟಾಗಲಿದೆ ಕಾರಣ ಸಾರ್ವಜನಿಕರು ಸಹಕರಿಸಬೇಕೆಂದು ಹೆಸ್ಕಾಂ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ಎಮ್. ಎಸ್. ನಾಗನ್ನವರ ಕೋರಿದ್ದಾರೆ.
IN MUDALGI Latest Kannada News