inmudalgi
ಸೆಪ್ಟೆಂಬರ್ 20, 2022 Recent Posts, ತಾಲ್ಲೂಕು, ಬೆಳಗಾವಿ
ದಿ.ಪ್ರತಿಭಾಅಕ್ಕಾ ಪಾಟೀಲ ಅವರ ಪುಣ್ಯಸ್ಮರಣೆ ಆಚರಣೆ ಮೂಡಲಗಿ: ರಾಯಭಾಗ ಶಿಕ್ಷಣ ಪ್ರಸಾರಕ ಮಂಡಳದ ಧರ್ಮಟ್ಟಿಯಲ್ಲಿನ ಧರ್ಮಟ್ಟಿ ವಿದ್ಯಾಲಯ ಸಂಯುಕ್ತ ಪದವಿ ಪೂರ್ವ ಮಹಾವಿದ್ಯಾಲಯದಲ್ಲಿ ಶಿಕ್ಷಣ ಪ್ರೇಮಿ ದಿ. ಪ್ರತಿಭಾಅಕ್ಕಾ ವಸಂತರಾವ ಪಾಟೀಲ ಅವರ 20ನೇ ಪುಣ್ಯಸ್ಮರಣೆಯನ್ನು ಆಚರಿಸಿದರು. ಶಾಲೆಯ ಪ್ರಭಾರಿ ಪ್ರಾಚಾರ್ಯ ಎಸ್.ಎಸ್.ಚಿಪ್ಪಲಕಟ್ಟಿ ಅವರು ಪೂಜೆ ಸಲ್ಲಿಸಿ ಪಾಟೀಲರ ಕುರಿತು ಮಾತನಾಡಿ, ಈ ಸಂಧರ್ಭದಲ್ಲಿ ಎಸ್.ಟಿ.ಹೊನ್ನಕುಪಿ, ಪಿ.ವಿ.ಬಾದರಡಿ, ಜಿ.ಬಿ.ಕಮತೆ, ಎಲ್.ಎನ್.ಕುಂಬಾರ, ಎಚ್.ಎಸ್.ಹಿಪ್ಪರಗಿ, ಶ್ರೀಮತಿ ಎಸ್.ಎಸ್.ದಳವಾಯಿ ಮತ್ತಿತರು ಇದ್ದರು.
Read More »
inmudalgi
ಸೆಪ್ಟೆಂಬರ್ 20, 2022 Recent Posts, ತಾಲ್ಲೂಕು, ಬೆಳಗಾವಿ
ಉತ್ತರ ಪ್ರದೇಶದಲ್ಲಿ ಬಾಲಕೀಯರ ಮೇಲೆ ಅತ್ಯಾಚಾರ ಮತ್ತು ಹತ್ಯೆ ಖಂಡಿಸಿ ಮನವಿ ಮೂಡಲಗಿ: ಉತ್ತರ ಪ್ರದೇಶ ಲಖೀಂಪೂರ ಜಿಲ್ಲೆಯಲ್ಲಿ ದಲಿತ ಬಾಲಕಿಯರನ್ನು ಅತ್ಯಾಚಾರ ಮಾಡಿ ಹತ್ಯೆ ಮಾಡಿ ಆರೋಪಿಗಳನ್ನು ತಕ್ಷಣ ಬಂಧಿಸಿ ಗಲ್ಲಿಗೇರಿಸುವಂತೆ ಆಗ್ರಹಿಸಿ ರಾಜ್ಯಪಾಲರಿಗೆ ಮತ್ತು ಮುಡಲಗಿ-ಗೋಕಾಕ ತಾಲೂಕಿನಲ್ಲಿ ಅಕ್ರಮ ಸಾರಾಯಿ ಮಾರಾಟವನ್ನು ಬಂದ ಮಾಡಿಸಬೇಕೆಂದು ಆಗ್ರಹಿಸಿ ಬೆಳಗಾವಿ ಜಿಲ್ಲಾಧಿಕಾರಿಗಳಿಗೆ ಮೂಡಲಗಿ ಪಟ್ಟಣದ ಕಲ್ಮೇಶ್ವರ ವೃತ್ತದಲ್ಲಿ ಕರ್ನಾಟಕ ದಲಿತ ಸಂಘರ್ಷ ಸಮಿತಿಯ ಜಿಲ್ಲಾ ಸಂಘಟನಾ ಸಂಚಾಲಕ ಯಶವಂತ ಮಂಟೂರ …
Read More »
inmudalgi
ಸೆಪ್ಟೆಂಬರ್ 19, 2022 Recent Posts, ತಾಲ್ಲೂಕು, ಬೆಳಗಾವಿ
ಮೂಡಲಗಿ: ಮಕ್ಕಳು, ಗರ್ಭಿಣಿಯರು ಮತ್ತು ಬಾಣಂತಿಯರಲ್ಲಿನ ಅಪೌಷ್ಠಿಕತೆ ನಿವಾರಣೆ ಮಾಡುವ ನಿಟ್ಟಿನಲ್ಲಿ ಎಲ್ಲರೂ ಕೈ ಜೋಡಿಸುವುದು ಅಗತ್ಯ ಹಾಗಾಗಿ ಅಂಗನವಾಡಿ ಕೇಂದ್ರಗಳಲ್ಲಿ ಜನರಿಗೆ ಕಾರ್ಯಕ್ರಮ ಮಾಡುವ ಮೂಲಕ ಜಾಗೃತಿ ಮಾಡಿಸಲಾಗುತ್ತಿದೆ ಎಂದು ಸಮುದಾಯ ಆರೋಗ್ಯ ಕೇಂದ್ರದ ಸಿಬ್ಬಂದಿ ಜಯಶ್ರೀ ಕಂಬಾರ ಹೇಳಿದರು. ಪಟ್ಟಣದ ಜವಳಪ್ಲಾಟ್ ಅಂಗನವಾಡಿ ಕೇಂದ್ರದಲ್ಲಿ ಆಯೋಜಿಸಲಾದ ರಾಷ್ಟ್ರೀಯ ಪೋಷಣ ಅಭಿಯಾನ ಮಾಸಾಚರಣೆ ಕಾರ್ಯಕ್ರಮ ಅಂಗವಾಗಿ ಹಮ್ಮಿಕೊಳ್ಳಲಾದ ಕಿಶೋರಿಯರಿಗೆ ಪೌಷ್ಠಿಕ ಆಹಾರದ ಬಗ್ಗೆ ಅರಿವು ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, …
Read More »
inmudalgi
ಸೆಪ್ಟೆಂಬರ್ 19, 2022 Recent Posts, ತಾಲ್ಲೂಕು, ಬೆಳಗಾವಿ
ಗ್ರಾಮಸ್ಥರ ಅವಶ್ಯಕ ಸೌಲಭ್ಯಗಳನ್ನು ಕಲ್ಪಿಸಿಕೊಡುತ್ತಿರುವ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರ ಕಾರ್ಯ ಶ್ಲಾಘನೀಯ: ಲಕ್ಷ್ಮಣ ಚಂದರಗಿ ಬೆಟಗೇರಿ:ಅರಭಾಂವಿ ಶಾಸಕ ಬಾಲಚಂದ್ರ ಜಾರಕಿಹೊಳಿ ನೇತೃತ್ವ, ಜಿಪಂ ಮಾಜಿ ಸದಸ್ಯ ಡಾ.ರಾಜೇಂದ್ರ ಸಣ್ಣಕ್ಕಿ ಮಾರ್ಗದರ್ಶನದಲ್ಲಿ ಬೆಟಗೇರಿ ಗ್ರಾಮದ ನಾಗರಿಕರಿಗೆ ಈಗಾಗಲೇ ಹಲವಾರು ಮೂಲಭೂತ ಸೌಲಭ್ಯಗಳನ್ನು ಕಲ್ಪಿಸಿಕೊಡಲಾಗಿದೆ ಎಂದು ಗೋಕಾಕ ತಾಲೂಕಿನ ಬೆಟಗೇರಿ ಗ್ರಾಮ ಪಂಚಾಯ್ತಿ ಮಾಜಿ ಅಧ್ಯಕ್ಷ ಲಕ್ಷ್ಮಣ ಚಂದರಗಿ ಹೇಳಿದರು. ಗೋಕಾಕ ತಾಲೂಕಿನ ಬೆಟಗೇರಿ ಗ್ರಾಮ ಪಂಚಾಯತಿ ಸಹಯೋಗದ ಮಹಾತ್ಮಾ ಗಾಂಧಿ …
Read More »
inmudalgi
ಸೆಪ್ಟೆಂಬರ್ 19, 2022 Recent Posts, ತಾಲ್ಲೂಕು, ಬೆಳಗಾವಿ
ಸೆ.21 ರಂದು ಬೆಟಗೇರಿ ಪಿಕೆಪಿಎಸ್ ಸಂಘದ ಗೋದಾಮು ನೂತನ ಕಟ್ಟಡ ಉದ್ಘಾಟನೆ ಬೆಟಗೇರಿ:ಗೋಕಾಕ ತಾಲೂಕಿನ ಬೆಟಗೇರಿ ಗ್ರಾಮದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಗೋದಾಮು ನೂತನ ಕಟ್ಟಡದ ಉದ್ಘಾಟನೆ ಸೆ.21ರಂದು ಮುಂಜಾನೆ 10.30ಗಂಟೆಗೆ ಸಂಘದ ಆವರಣದಲ್ಲಿ ನಡೆಯಲಿದೆ. ಭಾಗೋಜಿಕೊಪ್ಪದ ಡಾ.ಶಿವಲಿಂಗ ಮುರುಘರಾಜೇಂದ್ರ ಶಿವಾಚಾರ್ಯ ಮಹಾಸ್ವಾಮಿಜಿ ದಿವ್ಯ ಸಾನಿಧ್ಯ, ಸುಣಧೋಳಿಯ ಅಭಿನವ ಶಿವಾನಂದ ಮಹಾಸ್ವಾಮಿಜಿ ನೇತೃತ್ವ, ಬೆಳಗಾವಿ ಬಿಡಿಸಿಸಿ ಬ್ಯಾಂಕ್ ಅಧ್ಯಕ್ಷ ರಮೇಶ ಕತ್ತಿ ಉದ್ಘಾಟನೆ, ಅರಭಾಂವಿ ಶಾಸಕ ಬಾಲಚಂದ್ರ …
Read More »
inmudalgi
ಸೆಪ್ಟೆಂಬರ್ 19, 2022 Recent Posts, ತಾಲ್ಲೂಕು, ಬೆಳಗಾವಿ
ಮೂಡಲಗಿ ಬಿ.ಪಿ.ಇಡಿ ಕಾಲೇಜಿಗೆ ಉತ್ತಮ ಫಲಿತಾಂಶ ಮೂಡಲಗಿ: ಮೂಡಲಗಿ ಶಿಕ್ಷಣ ಸಂಸ್ಥೆಯ ದೈಹಿಕ ಶಿಕ್ಷಣ ಮಹಾವಿದ್ಯಾಲಯದ 2021-22ನೇ ಸಾಲಿನ ಬಿ.ಪಿಇಡಿ ಅಚಿತಿಮ ಮತ್ತು ಎರಡನೇ ಸೆಮಿಸ್ಟರ್‍ದಲ್ಲಿ ಉತ್ತಮ ಫಲಿತಾಂಶ ಪಡೆದುಕೊಂಡಿದೆ. ನಾಲ್ಕನೇ ಅಂತಿಮ ಸೆಮಿಸ್ಟರ್‍ದಲ್ಲಿ ಬಾಹುಬಲಿ ಕಡಹಟ್ಟಿ ಶೇ.85.08 ಅಂಕಗಳನ್ನು ಪಡೆದು ಮಹಾವಿದ್ಯಾಲಯಕ್ಕೆ ಪ್ರಥಮ, ಶಿವಬಸು ಮಿರ್ಜಿ ಶೇ. 85.04 ಅಂಕಗಳನ್ನು ಪಡೆದುಕೊಂಡು ದ್ವಿತೀಯ ರಂಗವ್ವ ಪಾಟೀಲ ಶೇ. 85.01 ಅಂಕ ಪಡೆದುಕೊಂಡು ತೃತೀಯ ಸ್ಥಾನ ಪಡೆದುಕೊಂಡಿರುವರು. ದ್ವಿತೀಯ ಸೆಮಿಸ್ಟರ್ …
Read More »
inmudalgi
ಸೆಪ್ಟೆಂಬರ್ 19, 2022 Recent Posts, ತಾಲ್ಲೂಕು, ಬೆಳಗಾವಿ
ಬೆಟಗೇರಿ ಗ್ರಾಮದಲ್ಲಿ ಪ್ರಧಾನಿ ನರೇಂದ್ರ ಮೋದಿ ಜನ್ಮ ದಿನ ಆಚರಣೆ ಬೆಟಗೇರಿ:ಗೋಕಾಕ ತಾಲೂಕಿನ ಬೆಟಗೇರಿ ಗ್ರಾಮದ ಗ್ರಾಪಂ ಮಾಜಿ ಅಧ್ಯಕ್ಷರಾದ ಲಕ್ಷ್ಮಣ ಚಂದರಗಿ, ಬಸವಂತ ಕೋಣಿ, ಪ್ರಥಮದರ್ಜೆ ಗುತ್ತಿಗೆದಾರ ಬಸವರಾಜ ಕೋಣಿ ಅವರ ನೇತೃತ್ವದಲ್ಲಿ ಸ್ಥಳೀಯ ಡಾ.ಕೃಷ್ಣಶರ್ಮ ಕ್ರೀಕೆಟ್ ಕ್ಲಬ್ ಸದಸ್ಯರು ಕೇಕ್ ಕಟ್ ಮಾಡುವ ಮೂಲಕ ಪ್ರಧಾನಿ ನರೇಂದ್ರ ಮೋದಿಯವರ ಹುಟ್ಟು ಹಬ್ಬವನ್ನು ಸೆ.17ರಂದು ಸಂಭ್ರಮದಿಂದ ಆಚರಿಸಿದರು. ಮುತ್ತೆಪ್ಪ ನೀಲಣ್ಣವರ, ಕಾಳಪ್ಪ ಕಂಬಾರ, ಗುಳಪ್ಪ ಪಣದಿ, ಭರಮಪ್ಪ ಪೂಜೇರಿ, …
Read More »
inmudalgi
ಸೆಪ್ಟೆಂಬರ್ 18, 2022 Recent Posts, ತಾಲ್ಲೂಕು, ಬೆಳಗಾವಿ
*ಮೋದಿ ಜನ್ಮ ದಿನದ ನಿಮಿತ್ತ ಮರ ನೆಡುವ ಚಾಲನೆ ನೀಡಿದ ಸೋನಾಲಿ* ಖಾನಾಪೂರ- ನರೇಂದ್ರ ಮೋದಿಯವರ 72ನೇ ಜನ್ಮದಿನದ ನಿಮಿತ್ತ. ಖಾನಾಪುರದಲ್ಲಿ ಬಿಜೆಪಿ ಕುಂದುಕೊರತೆ ನಿವಾರಣಾ ಕೇಂದ್ರದ ಕಾರ್ಯಕರ್ತರು ಡಾ.ಸೋನಾಲಿ ಸರ್ನೋಬತ್ (ಬಿಜೆಪಿ ಮಹಿಳಾ ಮೋರ್ಚಾ ಗ್ರಾಮಾಂತರ ಉಪಾಧ್ಯಕ್ಷೆ) ಹಣ್ಣು ಮತ್ತು ಹೂವಿನ ಗಿಡಗಳನ್ನು ನೆಟ್ಟರು. ಅವರು ಮೋದಿಜಿಯವರು ಮಾಡಿದ ಯೋಜನೆಗಳು ಮತ್ತು ಹಲವಾರು ಅಭಿವೃದ್ಧಿ ಯೋಜನೆಗಳ ಬಗ್ಗೆ ವಿವರಿಸಿದರು. ಭಾರತಮಾತೆ ಹಾಗೂ ಛತ್ರಪತಿ ಶಿವಾಜಿ ಮಹಾರಾಜರ ಮೂರ್ತಿಗಳಿಗೆ ಪೂಜೆ …
Read More »
inmudalgi
ಸೆಪ್ಟೆಂಬರ್ 17, 2022 Recent Posts, ತಾಲ್ಲೂಕು, ಬೆಳಗಾವಿ
ಗುಣಮಟ್ಟದ ಆಹಾರ ಪದಾರ್ಥ ಸೇವನೆಯಿಂದ ಶಾರೀರಕ ಸದೃಢತೆ ಹೆಚ್ಚುತ್ತದೆ: ವೈ.ಸಿ.ಶೀಗಿಹಳ್ಳಿ ಬೆಟಗೇರಿ:ಪ್ರತಿ ದಿನ ಉತ್ತಮ ಗುಣಮಟ್ಟದ ಆಹಾರ ಪದಾರ್ಥಗಳನ್ನು ಸೇವನೆ ಮಾಡುವುದರಿಂದ ಶಾರೀರಕ ಸದೃಢತೆ ಹೆಚ್ಚುತ್ತದೆಲ್ಲದೇ, ಮನುಷ್ಯನ ಆರೋಗ್ಯ ಉತ್ತಮವಾಗಿರುತ್ತದೆ ಎಂದು ಗೋಕಾಕ ತಾಲೂಕಿನ ಬೆಟಗೇರಿ ಸರ್ಕಾರಿ ಹಿರಿಯ ಪ್ರಾಥಮಿಕ ಕನ್ನಡ ಗಂಡು ಮಕ್ಕಳ ಶಾಲೆಯ ಮುಖ್ಯ ಶಿಕ್ಷಕ ವೈ.ಸಿ.ಶೀಗಿಹಳ್ಳಿ ಹೇಳಿದರು. ಗೋಕಾಕ ತಾಲೂಕಿನ ಬೆಟಗೇರಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಕನ್ನಡ ಗಂಡು ಮತ್ತು ಹೆಣ್ಣು ಮಕ್ಕಳ ಶಾಲೆಯಲ್ಲಿ …
Read More »
inmudalgi
ಸೆಪ್ಟೆಂಬರ್ 17, 2022 Recent Posts, ತಾಲ್ಲೂಕು, ಬೆಳಗಾವಿ
ಬೆಟಗೇರಿ ಚೈತನ್ಯ ಗ್ರುಪ್ಸ್‍ನ ಕನ್ನಡ ಮತ್ತು ಆಂಗ್ಲ ಮಾಧ್ಯಮ ಶಾಲೆಯಲ್ಲಿ ಮಕ್ಕಳ ಸಂತೆ..!! ವರದಿ- ಅಡಿವೇಶ ಮುಧೋಳ. ಬೆಟಗೇರಿ:ತಾಜಾ ತಾಜಾ ಬೆಂಡೆಕಾಯಿ, ಬದನೆಕಾಯಿ, ಸೌತೆಕಾಯಿ, ಹಸಿ ಮೆಣಸಿನಕಾಯಿ, ತಪ್ಪಲ ಪಲ್ಯೆ…ತಗೊಳ್ಳಿ… ತಗೊಳ್ಳಿ… ಎಂದು ಕೂಗುವ ಶಾಲಾ ಮಕ್ಕಳು, ಚೌಕಾಶಿ ಮಾಡುವ ಗ್ರಾಹಕರು… ಇದೇನು.! ಎಲ್ಲಿ ಅನ್ನುತ್ತಿರಾ.? ಇದು ಗೋಕಾಕ ತಾಲೂಕಿನ ಬೆಟಗೇರಿ ಗ್ರಾಮದ ಚೈತನ್ಯ ಗ್ರುಪ್ಸ್‍ನ ಕನ್ನಡ ಮತ್ತು ಆಂಗ್ಲ ಮಾಧ್ಯಮ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳಿಗಾಗಿ ಸೆ.15ರಂದು ಆಯೋಜಿಸಿದ ಮಕ್ಕಳ …
Read More »