inmudalgi
ಆಗಷ್ಟ್ 13, 2022 Recent Posts, ತಾಲ್ಲೂಕು, ಬೆಳಗಾವಿ
ಮೂಡಲಗಿ: ಸ್ವಾತಂತ್ರ್ಯ ಹೋರಾಟಗಾರರ ಸ್ಮರಣೆಗಾಗಿ ಪ್ರತಿಯೊಬ್ಬರು ತಮ್ಮ ತಮ್ಮ ಮನೆಗಳ ಮೇಲೆ ರಾಷ್ಟ್ರ ಧ್ವಜವನ್ನು ಹಾರಿಸುವುದರ ಮೂಲಕ ರಾಷ್ಟ್ರ ಪ್ರೇಮವನ್ನು ಅಭಿವ್ಯಕ್ತಗೊಳಿಸೋಣ ಎಂದು ರಾಜ್ಯಸಭಾ ಸಂಸದ ಈರಣ್ಣ ಕಡಾಡಿ ಕರೆ ನೀಡಿದರು. ಮೂಡಲಗಿ ನಗರದ ಹಲವು ಗಣ್ಯರಿಗೆ 75ನೇ ವರ್ಷದ ಆಜಾದಿ ಕಾ ಅಮೃತ ಮಹೋತ್ಸವದ ಅಂಗವಾಗಿ ಹರ್ ಘರ್ ತಿರಂಗಾ ಅಭಿಯಾನದಡಿ ತಿರಂಗ ಧ್ವಜಗಳನ್ನು ವಿತರಿಸಿ ಮಾತನಾಡಿದ ಸಂಸದ ಈರಣ್ಣ ಕಡಾಡಿ ಅವರು ಸ್ವಾತಂತ್ರ್ಯದ ಸವಿ ನೆನಪಿಗಾಗಿ ಪ್ರಧಾನಿ …
Read More »
inmudalgi
ಆಗಷ್ಟ್ 13, 2022 Recent Posts, ತಾಲ್ಲೂಕು, ಬೆಳಗಾವಿ
ಮೂಡಲಗಿ : ಗುರುವಾರದಂದು ತಾಲೂಕಿನ ಧರ್ಮಟ್ಟಿ ಗ್ರಾಮದಲ್ಲಿ ಚಿರತೆ ಕಾಣಿಸಿಕೊಂಡು ಎಮ್ಮೆ ಕರವನ್ನು ಬಲಿ ಪಡೆದ ಘಟನೆಯ ಹಿನ್ನೇಲೆಯಲ್ಲಿ ಇಂದು ಶುಕ್ರವಾರ ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ ಸ್ಥಳಕ್ಕೆ ಆಗಮಿಸಿ ಅರಣ್ಯ ಇಲಾಖೆಯ ಅಧಿಕಾರಿಗಳೊಂದಿಗೆ ಚರ್ಚಿಸಿದರು, ಸಾರ್ವಜನಿಕರು ಹಾಗೂ ವಿದ್ಯಾರ್ಥಿಗಳು ಜಾಗೃತೆಯಿಂದ ಇರಬೇಕು. ಚಿರತೆಯನ್ನು ಹಿಡಿಯಲು ಈಗಾಗಲೇ ಅರಣ್ಯ ಇಲಾಖೆಯ ಅಧಿಕಾರಿಗಳಿಗೆ ಕಾರ್ಯಪ್ರವರ್ತರಾಗಿದ್ದಾರೆ, ಬಲೆ ಹಾಕಲಾಗಿದೆ ಮತ್ತು ಚಿರತೆಯ ಹೆಜ್ಜೆ ಜಾಡನ್ನು ಗಮನಿಸಿ ಅದು ಆ ವ್ಯಾಪ್ತಿಯಲ್ಲಿಯೇ ಇರುವದನ್ನು …
Read More »
inmudalgi
ಆಗಷ್ಟ್ 12, 2022 Recent Posts, ತಾಲ್ಲೂಕು, ಬೆಳಗಾವಿ
ಮೂಡಲಗಿ: ಧರ್ಮಟ್ಟಿಯಲ್ಲಿ ಕಾಣಿಸಿಕೊಂಡಿರುವ ಚಿರತೆ ಇನ್ನೂ ಪತ್ತೆಯಾಗದ ಹಿನ್ನೆಲೆಯಲ್ಲಿ 30 ಶಾಲೆಗಳಿಗೆ ಶೆನಿವಾರವೂ ರಜೆಯನ್ನು ಮುಂದುವರಿಸಲಾಗಿದೆ. ಚಿರತೆಯನ್ನು ಸೆರೆಹಿಡಿಯುವ ಕಾರ್ಯಾಚರಣೆ ಮುಂದುವರಿದಿರುವುದರಿಂದ ಮೇಲ್ಕಂಡ ಪಟ್ಟಿಯಲ್ಲಿರುವ ಮೂಡಲಗಿ ವಲಯದ ವ್ಯಾಪ್ತಿಯ ಶಾಲೆಗಳಿಗೆ ಶೆನಿವಾರ(ಆ.13) ರಜೆಯನ್ನು ಮುಂದುವರಿಸಲಾಗಿದೆ ಎಂದು . ಬಿ.ಇ. ಓ. ಅಜೀತ್ ಮನ್ನಿಕೇರಿ. ಯವರು ತಿಳಿಸಿರುತ್ತಾರೆ. ಈ ಪ್ರದೇಶಗಳಿಂದ ಬೇರೆ ಬೇರೆ ಕಡೆಯ ಶಾಲೆಗಳಿಗೆ ಮಕ್ಕಳನ್ನು ಕಳಿಸುವಾಗ ಪಾಲಕರು ಸೂಕ್ತ ಎಚ್ಚರಿಕೆಯನ್ನು ವಹಿಸಬೇಕು ಎಂದು ಅವರು ತಿಳಿಸಿದ್ದಾರೆ.
Read More »
inmudalgi
ಆಗಷ್ಟ್ 11, 2022 Recent Posts, ತಾಲ್ಲೂಕು, ಬೆಳಗಾವಿ
inmudalgi
ಆಗಷ್ಟ್ 11, 2022 Recent Posts, ತಾಲ್ಲೂಕು, ಬೆಳಗಾವಿ
ಮೂಡಲಗಿ: ‘ರಕ್ಷಾ ಬಂಧನವು ಸೋದರತೆ, ಸೌಹಾರ್ದತೆಯನ್ನು ಬಲಪಡಿಸುವುದು, ಸಂಬಂಧಗಳನ್ನು ಗಟ್ಟಿಗೊಳಿಸುವುದು’ ಎಂದು ಮೂಡಲಗಿಯ ಈಶ್ವರಿ ವಿಶ್ವವಿದ್ಯಾಲಯದ ರೇಖಾ ಅಕ್ಕಾಜೀ ಅವರು ಹೇಳಿದರು. ಇಲ್ಲಿಯ ಬ್ರಹ್ಮಕುಮಾರಿ ಈಶ್ವರಿ ವಿಶ್ವವಿದ್ಯಾಲಯದಲ್ಲಿ ಬುಧವಾರ ರಕ್ಷಾ ಬಂಧನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ‘ಭಾರತೀಯ ಹಬ್ಬಗಳು, ಆಚರಣೆಗಳಿಂದ ದೇಶದ ಸಂಸ್ಕøತಿಯು ಶ್ರೀಮಂತವಾಗಿದೆ. ಪರಮಾತ್ಮನ ನಿತ್ಯ ಧ್ಯಾನಿಸುವ ಮೂಲಕ ಬದುಕಿನಲ್ಲಿ ಶಾಂತಿ, ನೆಮ್ಮದಿಯನ್ನು ತಂದುಕೊಳ್ಳಬೇಕು ಎಂದರು. ಭಾಗವಹಿಸಿದ್ದ ಎಲ್ಲ ಭಕ್ತರಿಗೆ ರಕ್ಷಾ ಬಂಧನ ಮಾಡಿದರು. ಸವಿತಾ ಅಕ್ಕಾಜೀ, ಶಿವಪುತ್ರಯ್ಯ …
Read More »
inmudalgi
ಆಗಷ್ಟ್ 11, 2022 Recent Posts, ತಾಲ್ಲೂಕು, ಬೆಳಗಾವಿ
*ಮೂಡಲಗಿ*: ಸ್ವಾತಂತ್ರ್ಯ ಅಮೃತ ಮಹೋತ್ಸವ ಅಂಗವಾಗಿ ಅರಭಾಂವಿ ಬಿಜೆಪಿ ಮಂಡಲ ಗುರುವಾರದಂದು ಹಮ್ಮಿಕೊಂಡಿದ್ದ ಬೈಕ್ ರ್ಯಾಲಿಯು ಪಟ್ಟಣದ ಕಲ್ಮೇಶ್ವರ ವೃತ್ತದಲ್ಲಿ ಸಮಾರೋಪಗೊಂಡಿತು. ಯುವ ಧುರೀಣ ಸರ್ವೋತ್ತಮ ಜಾರಕಿಹೊಳಿ ಅವರು ಕಲ್ಮೇಶ್ವರ ಪುತ್ಥಳಿಗೆ ಮಾಲಾರ್ಪಣೆ ಮಾಡಿ ಗೌರವ ಅರ್ಪಿಸಿದರು. ಗೋಕಾಕ ಎನ್‍ಎಸ್‍ಎಫ್ ಅತಿಥಿ ಗೃಹದಿಂದ ಆರಂಭಗೊಂಡ ಬಿಜೆಪಿ ಕಾರ್ಯಕರ್ತರ ಬೈಕ್ ರ್ಯಾಲಿ ಲೋಳಸೂರು, ಕಲ್ಲೋಳಿ, ನಾಗನೂರ ಮೂಲಕ ಮೂಡಲಗಿ ಪಟ್ಟಣಕ್ಕೆ ಸುಮಾರು 2 ಸಾವಿರಕ್ಕೂ ಹೆಚ್ಚಿನ ಕಾರ್ಯಕರ್ತರು ಭಾಗಿಯಾಗಿದ್ದರು. ಕೆಎಮ್‍ಎಫ್ …
Read More »
inmudalgi
ಆಗಷ್ಟ್ 11, 2022 Recent Posts, ತಾಲ್ಲೂಕು, ಬೆಳಗಾವಿ
ಧರ್ಮಟ್ಟಿಯಲ್ಲಿ ಕಾಣಿಸಿಕೊಂಡ ಚಿರತೆ: ಎಚ್ಚರಿಕೆಯಿಂದಿರಲು ಶಾಸಕ ಬಾಲಚಂದ್ರ ಜಾರಕಿಹೊಳಿ ಮನವಿ. ಮೂಡಲಗಿ: ಗುರುವಾರದಂದು ತಾಲೂಕಿನ ಧರ್ಮಟ್ಟಿ ಗ್ರಾಮದಲ್ಲಿ ಚಿರತೆ ಪ್ರತ್ಯಕ್ಷಗೊಂಡಿದ್ದು, ಸುತ್ತಮುತ್ತಲಿನ ಗ್ರಾಮಸ್ಥರು ಎಚ್ಚರಿಕೆಯಿಂದ ಇರುವಂತೆ ಕೆಎಮ್‍ಎಫ್ ಅಧ್ಯಕ್ಷ ಹಾಗೂ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ಮನವಿ ಮಾಡಿದ್ದಾರೆ. ಧರ್ಮಟ್ಟಿ ಗ್ರಾಮದ ಅನಿಲ ಮಂದ್ರೋಳ್ಳಿ ಅವರ ತೋಟದಲ್ಲಿ ಚಿರತೆ ಕಾಣಿಸಿಕೊಂಡಿದ್ದು, ಚಿಕ್ಕೋಡಿ ತಾಲೂಕಿನಿಂದ ಈ ಚಿರತೆ ಬಂದಿರಬಹುದೆಂದು ಅರಣ್ಯ ಇಲಾಖೆಯಿಂದ ತಿಳಿದು ಬಂದಿದ್ದು, ಸಾರ್ವಜನಿಕರು ಹಾಗೂ ವಿದ್ಯಾರ್ಥಿಗಳು ಜಾಗೃತೆಯಿಂದ ಇರಬೇಕು. …
Read More »
inmudalgi
ಆಗಷ್ಟ್ 11, 2022 Recent Posts, ತಾಲ್ಲೂಕು, ಬೆಳಗಾವಿ
ಕುಲಗೋಡ: 75 ನೆಯ ಸ್ವಾತಂತ್ರ್ಯದ ಅಮೃತ ಮಹೋತ್ಸವದ ಹಿನ್ನೆಲೆಯಲ್ಲಿ ರಾಜ್ಯ ಮತ್ತು ಕೇಂದ್ರ ಸರಕಾರ ಮನೆ ಮನೆಯಲ್ಲಿ ರಾಷ್ಟ್ರ ಧ್ವಜ ಹಾರಿಸುವ “ಹರ್ ಘರ್ ತಿರಂಗ” ಅಭಿಯಾನ ಹಮ್ಮಿಕೊಂಡಿರುವ ಸಂತಸದ ವಿಷಯ. ಅಗಷ್ಟ 13 ಮುಂಜಾನೆ 8 ಗಂಟೆಯ ಒಳಗೆ ಮನೆಯ ಮೇಲೆ ಹಾರಿಸುವ ರಾಷ್ಟ್ರ ಧ್ವಜ ಕಟ್ಟುವ ಪ್ರತಿಯೊಬ್ಬರೂ ಮನೆಯ ಮೇಲೆ,ಮುಂದೆ ಹಾದು ಹೊಗಿರುವ ವಿದ್ಯುತ್ ತಂತಿ ಹಾಗೂ ನಿಮ್ಮ ಮನೆಗೆ ಬಳಸುವ ಸರ್ವಿಸ್ ತಂತಿಗಳಿಂದ ಜಾಗೃತಿ …
Read More »
inmudalgi
ಆಗಷ್ಟ್ 10, 2022 Recent Posts, ತಾಲ್ಲೂಕು, ಬೆಳಗಾವಿ
‘ಸಹಕಾರ ಸಂಸ್ಥೆಗಳ ಪ್ರಗತಿಗೆ ವಿಶ್ವಾಸ ಮುಖ್ಯ’ ಮೂಡಲಗಿ: ‘ಜನರ ವಿಶ್ವಾಸ ಮತ್ತು ಉತ್ತಮ ಸೇವೆಯಿಂದ ಸಹಕಾರ ಸಂಸ್ಥೆಗಳು ಪ್ರಗತಿಯಾಗುತ್ತವೆ’ ಎಂದು ಅರಭಾವಿಯ ದುರದುಂಡಿಶ್ವರ ಮಠದ ಪೀಠಾಧಿಪತಿ ಸಿದ್ದಲಿಂಗ ಸ್ವಾಮೀಜಿ ಹೇಳಿದರು. ಬುಧವಾರ ಇಲ್ಲಿಯ ಮೂಡಲಗಿ ಕೋ.ಆಪ್‍ರೇಟಿವ್ ಬ್ಯಾಂಕ್‍ದ ನೂತನ ಕಟ್ಟಡದ ಉದ್ಘಾಟನೆಯನ್ನು ನೆರವೇರಿಸಿ ಮಾತನಾಡಿದ ಅವರು ಮೂಡಲಗಿ ಕೋ.ಆಪ್‍ರೇಟಿವ್ ಬ್ಯಾಂಕು ಸಹಕಾರಿ ರಂಗದಲ್ಲಿ ಉತ್ತಮವಾಗಿ ಬೆಳದಿರುವುದು ಶ್ಲಾಘನೀಯವಾಗಿದೆ ಎಂದರು. ಮೂಡಲಗಿಯ ದತ್ತಾತ್ರೇಯಬೋಧ ಸ್ವಾಮೀಜ, ಸುಣಧೋಳಿ ಶಿವಾನಂದ ಸ್ವಾಮೀಜಿ, ಭಾಗೋಜಿಕೊಪ್ಪದ ಡಾ. …
Read More »
inmudalgi
ಆಗಷ್ಟ್ 10, 2022 Recent Posts, ತಾಲ್ಲೂಕು, ಬೆಳಗಾವಿ
ಮೂಡಲಗಿ: ಶ್ರೀ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣನರ ಕಂಚಿನ ಮೂರ್ತಿಯ ರಥಕ್ಕೆ ಮೂಡಲಗಿ ಪಟ್ಟಣದ ಶ್ರೀ ಕಲ್ಮೇಶ್ವರ ವೃತ್ತದಲ್ಲಿ ಬುಧವಾರದಂದು ಭವ್ಯ ಸ್ವಾಗತ ಕೋರಲಾಯಿತು. ಶ್ರೀ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣನ ಮೂರ್ತಿಯ ರಥಕ್ಕೆ ಕಹಾಮಾ ಅಧ್ಯಕ್ಷ ಹಾಗೂ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರ ಆಪ್ತ ಸಹಾಯಕ ಮಲ್ಲಿಕಾರ್ಜುನ ಯಕ್ಷಂಬಿ ಹಾಗೂ ಮೂಡಲಗಿ ಪುರಸಭೆಯ ಅಧ್ಯಕ್ಷ ಹನುಮಂತ ಗುಡ್ಲಮನಿ, ತಾಲೂಕಾ ಕುರುಬರ ಸಂಘದ ಅಧ್ಯಕ್ಷ ಡಾ.ಎಸ್.ಎಸ್.ಪಾಟೀಲ ಮಾಲಾರ್ಪಣೆ ಮಾಡಿ ಬರಮಾಡಿಕೊಂಡರು. ಈ ಸಂದರ್ಭದಲ್ಲಿ …
Read More »