inmudalgi
ಜನವರಿ 26, 2022 Recent Posts, ತಾಲ್ಲೂಕು, ಬೆಳಗಾವಿ
ಇಂದು ಲಯನ್ಸ್ ಕ್ಲಬ್‍ದಿಂದ ದೇಶಭಕ್ತಿ ಗಾಯನ ಕಾರ್ಯಕ್ರಮ ಮೂಡಲಗಿ: ಇಲ್ಲಿಯ ಲಯನ್ಸ್ ಕ್ಲಬ್ ಮೂಡಲಗಿ ಪರಿವಾರದಿಂದ 73ನೇ ಗಣರಾಜ್ಯೋತ್ಸವ ಅಂಗವಾಗಿ ಜ. 26ರಂದು ಸಂಜೆ 5ಕ್ಕೆ ಹರ್ಷಾ ದಂತ ಆಸ್ಪತ್ರೆಯ ಸಂಸ್ಕøತಿ ಭವನದಲ್ಲಿ ದೇಶಭಕ್ತಿ ಗಾಯನ ಕಾರ್ಯಕ್ರಮವನ್ನು ಏರ್ಪಡಿಸಿರುವರು. ಯುವ ಗಾಯಕರಾದ ಶಿವಾನಂದ ಬಿದರಿ, ಭರತ ಚಿನ್ನಾಕಟ್ಟಿ, ಮಹಾಲಿಂಗಪುರದ ಮನುಪ್ರಿಯಾ ಹಾಗೂ ಅಪ್ಪಣ್ಣ ಮುಗಳಖೋಡ ಅವರ ತಬಲಾ ಸಾಥದೊಂದಿಗೆ ಗಾಯನ ಇರುವುದು. ಇದರೊಂದಿಗೆ ಪುಟಾಣಿಗಳಿಂದ ದೇಶಭಕ್ತಿಯ ರೂಪಕ ನೃತ್ಯ ಏರ್ಪಡಿಸಿರುವರು. …
Read More »
inmudalgi
ಜನವರಿ 26, 2022 Recent Posts, ತಾಲ್ಲೂಕು, ಬೆಳಗಾವಿ
. ಕೊಪ್ಪಳ: ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯ ನಿರ್ವಾಹಕರು ಅಧಿಕಾರಿಗಳು ಹಾಗೂ ಕಲರವ ಶಿಕ್ಷಕರ ಸೇವಾ ಬಳಗದ ಸದಸ್ಯರಾದ ಪೌಜೀಯಾ ತರುನ್ನಮ್ ಅವರಿಗೆ ರಾಜ್ಯ ಮಟ್ಟದ ಅತ್ಯುತ್ತಮ ಸೇವಾ ಪ್ರಶಸ್ತಿ ಲಭಿಸಿರಿವುದಕ್ಕೆ ಕಲರವ ಶಿಕ್ಷಕರ ಸೇವಾ ಬಳಗದ ವತಿಯಿಂದ ಅವರ ಕಚೇರಿಯಲ್ಲಿ ಅಭಿನಂದಿಸಿದರು. ಜಿಲ್ಲಾ ಪಂಚಾಯತ್ ಸಿಇಒ ಅವರು ಮತದಾರರ ಜಾಗೃತಿಯಲ್ಲಿ ಅತ್ಯುತ್ತಮ ಕಾರ್ಯ ನಿರ್ವಹಿಸಿ ಜಾಗೃತಿ ಮೂಡಿಸುವಲ್ಲಿ ಯಶಸ್ವಿಯಾಗಿದ್ದರ ಪ್ರಯುಕ್ತ ರಾಜ್ಯ ಮಟ್ಟದ ಸ್ವೀಪ್ ಸಮಿತಿಯು ಮೆಚ್ಚುಗೆ ವ್ಯಕ್ತಪಡಿಸಿದ್ದಲ್ಲದೇ,ರಾಜ್ಯ …
Read More »
inmudalgi
ಜನವರಿ 26, 2022 Recent Posts, ತಾಲ್ಲೂಕು, ಬೆಳಗಾವಿ
ಕುಲಗೋಡ ಪೊಲೀಸ್ ಠಾಣೆಯ ಪೊಲೀಸ್ ಪೇದೆ ಬಸಪ್ಪ ಕ್ವಾನ್ಯಾಗೋಳ ಪಿಎಸ್‍ಐ ಹುದ್ದೆಗೆ ಆಯ್ಕೆ ಬೆಟಗೇರಿ: ಸಮೀಪದ ಕುಲಗೋಡ ಪೊಲೀಸ್ ಠಾಣೆಯಲ್ಲಿ ಸುಮಾರು 3 ವರ್ಷಗಳಿಂದ ಸೇವೆ ಸಲ್ಲಿಸುತ್ತಿರುವ ಪೊಲೀಸ್ ಪೇದೆ ಬಸಪ್ಪ ದ್ಯಾವಪ್ಪ ಕ್ವಾನ್ಯಾಗೋಳ ಅವರು ಈಗ ಪಿಎಸ್‍ಐ ಹುದ್ದೆಗೆ ಆಯ್ಕೆಯಾಗಿದ್ದಾರೆ. ಮೂಲತ: ಮುಧೋಳ ತಾಲೂಕಿನ ಬೆಳಗಲಿ ಗ್ರಾಮದವರಾದ ಬಸಪ್ಪ ಕ್ವಾನ್ಯಾಗೋಳ ಅವರು ಕೃಷಿಕ ಕುಟುಂಬದ ದೊಡ್ಡ ಪರಿವಾರದಲ್ಲಿ ಜನಸಿದ ಅವರು, ಕೃಷಿಯಲ್ಲಿ ತಮ್ಮನ್ನು ತೊಡಗಿಸಿಕೊಂಡು ಓದನ್ನು ಮುಂದುವರಿಸಿಕೊಂಡು ಬಂದವರು. …
Read More »
inmudalgi
ಜನವರಿ 25, 2022 Recent Posts, ತಾಲ್ಲೂಕು, ಬೆಳಗಾವಿ
ಗೋಕಾಕ ನಗರಕ್ಕೆ ಆರ್.ಟಿ.ಪಿ.ಸಿ.ಆರ್ ಪ್ರಯೋಗಾಲಯ ಮಂಜೂರು- ಸಂಸದ ಈರಣ್ಣ ಕಡಾಡಿ ಹರ್ಷ ಮೂಡಲಗಿ: ರಾಷ್ಟ್ರೀಯ ಆರೋಗ್ಯ ಅಭಿಯಾನ ಯೋಜನೆಯಡಿ ಕೋವಿಡ್-19 ಪರೀಕ್ಷೆ ಕೈಗೊಳ್ಳಲು ಗೋಕಾಕ ಸಾರ್ವಜನಿಕ ಆಸ್ಪತ್ರೆಯಲ್ಲಿ ಆರ್.ಟಿ.ಪಿ.ಸಿ.ಆರ್ ಪ್ರಯೋಗಾಲಯ ಮಂಜೂರಾಗಿದೆ ಎಂದು ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ ಹರ್ಷ ವ್ಯಕ್ತಪಡಿಸಿದರು. ಮಂಗಳವಾರ ಜ.25 ರಂದು ಪತ್ರಿಕಾ ಹೇಳಿಕೆ ನೀಡಿದ ಸಂಸದ ಈರಣ್ಣ ಕಡಾಡಿ ಅವರು ಸುಮಾರು 53 ಲಕ್ಷ ಜನಸಂಖ್ಯೆ ಹೊಂದಿರುವ ಬೆಳಗಾವಿ ಜಿಲ್ಲೆಯಲ್ಲಿ ಕೋವಿಡ್ ಆರ್.ಟಿ.ಪಿ.ಸಿ.ಆರ್ ಪರೀಕ್ಷಾ …
Read More »
inmudalgi
ಜನವರಿ 25, 2022 Recent Posts, ತಾಲ್ಲೂಕು, ಬೆಳಗಾವಿ
ಮೂಡಲಗಿಯಲ್ಲಿ ಸಬ್ ರಜಿಸ್ಟ್ರರ್ ಕಛೇರಿ ಆರಂಭಕ್ಕೆ ಹಣಕಾಸು ಇಲಾಖೆಯಿಂದ ಅನುಮೋದನೆ : ಶಾಸಕ ಬಾಲಚಂದ್ರ ಜಾರಕಿಹೊಳಿ ಹೇಳಿಕೆ ಮೂಡಲಗಿ : ಮೂಡಲಗಿ ತಾಲೂಕಿನ ಸಾರ್ವಜನಿಕರ ಬಹು ನಿರೀಕ್ಷೆಯ ಉಪ ನೋಂದಣಾಧಿಕಾರಿಗಳ ಕಛೇರಿ ಆರಂಭಕ್ಕೆ ಹಣಕಾಸು ಇಲಾಖೆಯಿಂದ ಅನುಮೋದನೆ ದೊರೆತಿದೆ ಎಂದು ಕೆಎಂಎಫ್ ಅಧ್ಯಕ್ಷ ಮತ್ತು ಶಾಸಕ ಬಾಲಚಂದ್ರ ಜಾರಕಿಹೊಳಿ ತಿಳಿಸಿದರು. ಮೂಡಲಗಿಯಲ್ಲಿ ಹೊಸದಾಗಿ ಉಪನೋಂದಣಾಧಿಕಾರಿಗಳ ಕಛೇರಿಯನ್ನು ಫೆಬ್ರುವರಿ ತಿಂಗಳೊಳಗೆ ಆರಂಭಿಸಲಾಗುವುದು ಎಂದು ಅವರು ಹೇಳಿದರು. ಸತತವಾಗಿ ಎರಡು ವರ್ಷಗಳಿಂದ ಕೋವಿಡ್ …
Read More »
inmudalgi
ಜನವರಿ 24, 2022 Recent Posts, ತಾಲ್ಲೂಕು, ಬೆಳಗಾವಿ
ಬೆಟಗೇರಿ:ಶಾಲಾ ಮಕ್ಕಳ ಬದುಕಿಗೊಂದು ಗುರಿ ಇರಲಿ, ವಿದ್ಯಾರ್ಥಿಗಳು ಸಾಧನೆಯ ಕನಸು ಕಾಣಬಾರದು, ಕನಸನ್ನು ಸಕಾರಗೊಳಿಸಿಕೊಳ್ಳಬೇಕು. ಪ್ರತಿಯೊಬ್ಬರೂ ದೇಶ ಪ್ರೇಮ, ಭಕ್ತಿ ಮೈಗೊಡಿಸಿಕೊಳ್ಳಬೇಕು ಎಂದು ಭಾರತ ದೇಶದ ನೌಕಾ ದಳದ ನಿವೃತ್ತ ರೀರ್ ಆಡ್ಮಿರಲ್ ರಘುವೀರ ಪುರಂದರೆ ಹೇಳಿದರು. ಬೆಟಗೇರಿ ವಿವಿಡಿ ಸರ್ಕಾರಿ ಪ್ರೌಢ ಶಾಲೆಗೆ ಜ.24ರÀಂದು ಭೇಟಿ ನೀಡಿ ಶಾಲಾ ಮಕ್ಕಳಿಗೆ ಎಸ್‍ಎಸ್‍ಎಲ್‍ಸಿ ನಂತರ ಮುಂದೇನು? ವಿಷಯದ ಕುರಿತು ಉಪನ್ಯಾಸ ಹಾಗೂ ವಿದ್ಯಾರ್ಥಿಗಳ ಜೋತೆ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿ, ವಿದ್ಯಾರ್ಥಿಗಳು …
Read More »
inmudalgi
ಜನವರಿ 24, 2022 Recent Posts, ತಾಲ್ಲೂಕು, ಬೆಳಗಾವಿ
ಕೊಪ್ಪಳ: ವಿಕಲಚೇತನ ನೌಕರರ ಸಂಘದ ರಾಜ್ಯಾಧ್ಯಕ್ಷರು ಹಾಗೂ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ನಿರ್ದೇಶಕರಾದ ಬೀರಪ್ಪ ಅಂಡಗಿ ಅವರ ಮೇಲೆ ತಳ್ಳಾಟ ಹಾಗೂ ನೂಕಾಟ ಮಾಡಿವರು ನಡೆದ ಘಟನೆಯ ಕುರಿತಾಗಿ ಕ್ಷಮೆಯಾಚನೆ ಮಾಡಿದ್ದಾರೆ. ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಪದಾಧಿಕಾರಿಗಳ ಸಭೆಗೆ ತೆರಳಿದ ಬೀರಪ್ಪ ಅಂಡಗಿ ಅವರ ಮೇಲೆ ಸಂಘದ ಪದಾಧಿಕಾರಿಗಳಲ್ಲದವರು ಅವರನ್ನು ತಳ್ಳಾಟ ಹಾಗೂ ನೂಕಾಟ ಮಾಡುವುದರ ಮೂಲಕ ಹಲ್ಲೆಗೆ ಮುಂದಾಗಿದ್ದರು.ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಸಭೆಗೆ ಆಹ್ವಾನ …
Read More »
inmudalgi
ಜನವರಿ 24, 2022 Recent Posts, ತಾಲ್ಲೂಕು, ಬೆಳಗಾವಿ
ಕಾರಜೋಳಗೆ ಜಿಲ್ಲಾ ಉಸ್ತುವಾರಿ : ಶಾಸಕ ಬಾಲಚಂದ್ರ ಜಾರಕಿಹೊಳಿ ಹರ್ಷ ಗೋಕಾಕ : ಜಲಸಂಪನ್ಮೂಲ ಸಚಿವ ಗೋವಿಂದ ಕಾರಜೋಳ ಅವರನ್ನು ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವರಾಗಿ ಮುಂದುವರೆಸಿರುವುದಕ್ಕೆ ಕೆಎಂಎಫ್ ಅಧ್ಯಕ್ಷ ಹಾಗೂ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ಹರ್ಷ ವ್ಯಕ್ತಪಡಿಸಿದ್ದಾರೆ. ಗೋವಿಂದ ಕಾರಜೋಳ ಅವರು ಉಸ್ತುವಾರಿ ಸಚಿವರಾಗಿ ಜಿಲ್ಲೆಯಲ್ಲಿ ಉತ್ತಮವಾಗಿ ಕೆಲಸ ನಿರ್ವಹಿಸುತ್ತಿದ್ದಾರೆ. ಮುಂಬರುವ ತಾಪಂ, ಜಿಪಂ ಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಯ್ಕೆಯಾಗಲು ಎಲ್ಲರೂ ಶ್ರಮಿಸಬೇಕು. ಜಿಲ್ಲೆಯನ್ನು …
Read More »
inmudalgi
ಜನವರಿ 24, 2022 Recent Posts, ತಾಲ್ಲೂಕು, ಬೆಳಗಾವಿ
ಜ. 25ರಂದು ಮಾಯಪ್ಪ ರಾಜಾಪುರ ರಚಿಸಿರುವ ‘ಸಂತ ಶಿವರಾಮದಾದಾ ಗೋಕಾಕ’ಚರಿತಾಮೃತ ಲೋಕಾರ್ಪಣೆ ಮೂಡಲಗಿ: ಇಲ್ಲಿಯ ಸಂತ ಸಂಸ್ಕøತಿ ಪ್ರಕಾಶನ ಹಾಗೂ ಅಥಣಿ ತಾಲ್ಲೂಕಿನ ಗಡ್ಡೆ ಶ್ರೀ ಕ್ಷೇತ್ರ ಸಪ್ತಸಾಗರ ಇವರ ಸಂಯುಕ್ತ ಆಶ್ರಯದಲ್ಲಿ ಸಂತ ಮಾಯಪ್ಪ ಸಿದ್ದಪ್ಪ ರಾಜಾಪುರ ಅವರು ರಚಿಸಿರುವ ‘ಸಂತ ಶ್ರೀ ಹ.ಬ.ಪ. ಶಿವರಾಮದಾದಾ ಗೋಕಾಕ’ ಇವರ ಸಂಪೂರ್ಣ ಚರಿತಾಮೃತ ಗ್ರಂಥದ ಲೋಕಾರ್ಪಣೆಯು ಜ. 25, ಮಂಗಳವಾರ ಮಧ್ಯಾಹ್ನ 1ಕ್ಕೆ ಅಥಣಿ ತಾಲ್ಲೂಕಿನ ಸಪ್ತಸಾಗರ ಗಡ್ಡೆ(ಬನ)ದಲ್ಲಿ …
Read More »
inmudalgi
ಜನವರಿ 24, 2022 Recent Posts, ತಾಲ್ಲೂಕು, ಬೆಳಗಾವಿ
ಮೂಡಲಗಿಯ ಜ್ಞಾನದೀಪ್ತಿ ಸಾಹಿತ್ಯ ಪ್ರತಿಷ್ಠಾನದ ಬೆಳದಿಂಗಳ ಸಾಹಿತ್ಯ ಚಿಂತನ ಮಂಥನದಲ್ಲಿ ಕುವೆಂಪು ಸಾಹಿತ್ಯ ಕುರಿತು ಸಾಹಿತಿ ಡಾ. ಮಹಾದೇವ ಜಿಡ್ಡಿಮನಿ ಮಾತನಾಡಿದರು ಮೂಡಲಗಿ: ಕುವೆಂಪು ಅವರು ಕನ್ನಡ ಸಾಹಿತ್ಯಕ್ಕೆ ವೈಚಾರಿಕತೆಯ ಸ್ಪರ್ಷ ನೀಡುವ ಮೂಲಕ ಕನ್ನಡ ಸಾಹಿತ್ಯವನ್ನು ವಿಶ್ವಮಾನ್ಯವಾಗಿ ಬೆಳೆಸಿದ ಯುಗದ ಕವಿ’ ಎಂದು ಸಾಹಿತಿ ಡಾ. ಮಹಾದೇವ ಜಿಡ್ಡಿಮನಿ ಹೇಳಿದರು. ಇಲ್ಲಿಯ ಜ್ಞಾನದೀಪ್ತಿ ಸಾಹಿತ್ಯ ಪ್ರತಿಷ್ಠಾನದ ಬೆಳದಿಂಗಳ ಸಾಹಿತ್ಯ ಚಿಂತನ-ಮಂಥನ ಕಾರ್ಯಕ್ರಮದ ಉಪನ್ಯಾಸ ಸಂಚಿಕೆ 1 ‘ಕುವೆಂಪು ವಿಶ್ವಮಾನವ …
Read More »