ಬೆಟಗೇರಿ:ಗೋಕಾಕ ತಾಲೂಕಿನ ಬೆಟಗೇರಿ ಗ್ರಾಮದ ಈಶ್ವರ ಭಜನಾ ಮಂಡಳಿ ಅಧ್ಯಕ್ಷ, ಶರಣ ಜೀವಿ ಬಸಪ್ಪ ಅಡಿವೆಪ್ಪ್ಪ ದೇಯಣ್ಣವರ (63) ಇವರು ಸೋಮವಾರ ಡಿ.29ರಂದು ನಿಧನರಾದರು. ಮೃತರು ಇಬ್ಬರು ಪತ್ನಿಯರು, ಇಬ್ಬರು ಪುತ್ರರು, ಮೂವರು ಪುತ್ರಿಯರು, ಸೊಸೆಯಂದಿರು, ಮೊಮ್ಮಕ್ಕಳು, ಅಳಿಯಂದಿರು ಸೇರಿದಂತೆ ಅಪಾರ ಬಂದು-ಬಳಗವನ್ನಗಲಿದ್ದಾರೆ. ಸಂತಾಪ: ಸುಣಧೋಳಿ ಜಡಿಸಿದ್ದೇಶ್ವರ ಮಠದ ಅಭಿನವ ಶಿವಾನಂದ ಸ್ವಾಮೀಜಿ ಸೇರಿದಂತೆ ಸ್ಥಳೀಯ ಹಾಗೂ ಸುತ್ತಲಿನ ಹಳ್ಳಿಗಳ ಹರ, ಗುರು, ಚರಮೂರ್ತಿಗಳು, ಸಂತರು, ಶರಣರು, ರಾಜಕೀಯ ಮುಖಂಡರು, …
Read More »TimeLine Layout
ಡಿಸೆಂಬರ್, 2025
-
29 ಡಿಸೆಂಬರ್
‘ಶರಣರ ವಚನಗಳು ಸಾರ್ವಕಾಲಿಕ ಮೌಲಿಕ ಚಿಂತನೆಗಳಾಗಿವೆ” – ಪ್ರೊ. ಚಂದ್ರಶೇಖರ ಅಕ್ಕಿ
ಗೋಕಾಕ: ‘ಬಸವಾದಿ ಶರಣರು ತಮ್ಮ ವಚನಗಳ ಮೂಲಕ ಸಾರಿದ ಜೀವನ ಮೌಲ್ಯಗಳು ಸಾರ್ವಕಾಲಿಕ ಶ್ರೇಷ್ಠ ಚಿಂತನೆಗಳಾಗಿವೆ’ ಸಾಹಿತಿ ಪ್ರೊ. ಚಂದ್ರಶೇಖರ ಅಕ್ಕಿ ಹೇಳಿದರು. ತಾಲ್ಲೂಕಿನ ಖನಗಾಂವ ಸರ್ಕಾರಿ ಪದವಿ ಪೂರ್ವ ಮಹಾವಿದ್ಯಾಲಯ ಸಭಾಭವನದಲ್ಲಿ ಸಾಹಿತಿ ಸಾವಿತ್ರಿ ಕಮಲಾಪೂರ ಅವರ ಅಕ್ಕಮಹಾದೇವಿ ವಚನ ವಿಶ್ಲೇಷಣೆ, ಶರಣರ ಜೀವನ ಚರಿತ್ರೆ ಸೇರಿ ಒಟ್ಟು 5 ಪುಸ್ತಕಗಳ ಬಿಡುಗಡೆ ಸಮಾರಂಭದ ಅಧ್ಯಕ್ಷತೆವಹಿಸಿ ಮಾತನಾಡಿದ ಅವರು ಸ್ತ್ರೀ ಸ್ವಾತಂತ್ಯ್ರ ಜೊತೆಗೆ À ಪ್ರಜಾಪ್ರಭುನತ್ವದ ಮೂಲ ಪರಿಕಲ್ಪನೆಯು …
Read More » -
28 ಡಿಸೆಂಬರ್
ಸಾಧನೆಯ ಶಿಖರಕ್ಕೇರಿದ ಮೂಡಲಗಿಯ ಹಾಕಿ ಕಲಿ: ರಾಷ್ಟ್ರ ಮಟ್ಟಕ್ಕೆ ಲಕ್ಷ್ಮೀ ಢವಳೇಶ್ವರ ಆಯ್ಕೆ
ಮೂಡಲಗಿ: ಪ್ರತಿಭೆ ಎನ್ನುವುದು ಕೇವಲ ಶ್ರೀಮಂತರ ಸೊತ್ತಲ್ಲ, ಅದು ಛಲಗಾರರ ಸ್ವತ್ತು ಎಂಬುದನ್ನು ಬೆಳಗಾವಿ ಜಿಲ್ಲೆಯ ಮೂಡಲಗಿ ತಾಲೂಕಿನ ಶಾಲಾ ಬಾಲಕಿಯೊಬ್ಬಳು ಸಾಬೀತು ಪಡಿಸಿದ್ದಾಳೆ. ಕಡು ಬಡತನ, ಸೌಲಭ್ಯಗಳ ಕೊರತೆಯ ನಡುವೆಯೂ ಹಾಕಿ ಸ್ಟಿಕ್ ಹಿಡಿದು ಮೈದಾನದಲ್ಲಿ ಮಿಂಚಿನ ಸಂಚಲನ ಮೂಡಿಸಿರುವ ಲಕ್ಷ್ಮೀ ಸಂಜು ಢವಳೇಶ್ವರ, ಈಗ 69ನೇ ರಾಷ್ಟ್ರೀಯ ಮಟ್ಟದ 14 ವರ್ಷದೊಳಗಿನ (U-14) ಹಾಕಿ ಚಾಂಪಿಯನ್‍ಶಿಪ್‍ಗೆ ಕರ್ನಾಟಕ ರಾಜ್ಯ ತಂಡದ ಪ್ರತಿನಿಧಿಯಾಗಿ ಆಯ್ಕೆಯಾಗುವ ಮೂಲಕ ಐತಿಹಾಸಿಕ ಸಾಧನೆ …
Read More » -
28 ಡಿಸೆಂಬರ್
ಎಲ್ಲಾ ಜನಾಂಗದ ಪ್ರತೀಕ ಅಯ್ಯಪ್ಪಸ್ವಾಮಿ:ಕೋಡಿಮಠದ ಶ್ರೀಗಳು
ಎಲ್ಲಾ ಜನಾಂಗದ ಪ್ರತೀಕ ಅಯ್ಯಪ್ಪಸ್ವಾಮಿ:ಕೋಡಿಮಠದ ಶ್ರೀಗಳು ಬೆಟಗೇರಿ:ಪ್ರತಿಯೊಬ್ಬರೂ ಭಕ್ತಿ, ಶ್ರೇದ್ಧೆಯಿಂದ ದೇವರ ನಾಮಸ್ಮರಣೆ ಮಾಡಿ ಭಗವಂತನ ಕೃಪಾರ್ಶೀವಾದಕ್ಕೆ ಪಾತ್ರರಾಗಬೇಕು. ಮನುಷ್ಯನಿಗೆ ನೆಮ್ಮದಿ ಮುಖ್ಯ, ಕಠಿಣ ವೃತಾಚರಣೆ ಮೂಲಕ ಅಯ್ಯಪ್ಪಸ್ವಾಮಿ ಮಾಲಾಧಾರಿಗಳು ಅಯ್ಯಪ್ಪನ ನಾಮಸ್ಮರಣೆ ಮಾಡಿದÀರೆ ಅಯ್ಯಪ್ಪಸ್ವಾಮಿ ಕೃಪೆಯಾಗುತ್ತದೆ. ದೇವರ ಮೇಲಿನ ಭಕ್ತಿ ತಮಗೆ ಶಕ್ತಿಯಾಗುತ್ತದೆ ಎಂದು ಸುಕ್ಷೇತ್ರ ಕೋಡಿಮಠದ ಡಾ.ಶಿವಾನಂದ ಶಿವಯೋಗಿ ರಾಜೇಂದ್ರ ಮಹಾಸ್ವಾಮೀಜಿ ಹೇಳಿದರು. ಗೋಕಾಕ ತಾಲೂಕಿನ ಬೆಟಗೇರಿ ಗ್ರಾಮದ ಓಂ ಶ್ರೀಅಯ್ಯಪ್ಪ ಸ್ವಾಮಿ ಸೇವಾ ಸಮಿತಿಯವರ ಆಶ್ರಯದಲ್ಲಿ …
Read More » -
27 ಡಿಸೆಂಬರ್
ಸರಕಾರಿ ಶಾಲೆ ಶತಮಾನೋತ್ಸವ ಕಾರ್ಯಕ್ರಮ ಅತ್ಯಂತ ವಿಜ್ರಂಭsಣೆಯಿಂದ ನಡೆಸುತ್ತಿರುವ ಗ್ರಾಮದ ಜನರ ಕಾರ್ಯ ಅಭಿನಂದನೀಯ – ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ
ಮೂಡಲಗಿ : ಬರಿದಾದ ಎದೆಯಲ್ಲಿ ಅಕ್ಷರಗಳನ್ನು ಬಿತ್ತಿಬದುಕಿಗೆ ದಾರಿ ತೋರಿದ ನಮ್ಮೋರ ಶಾಲೆ ಶತಮಾನೋತ್ಸವ ಕಾರ್ಯಕ್ರಮ ಅತ್ಯಂತ ವಿಜ್ರಂಭsಣೆಯಿಂದ ನಡೆಸುತ್ತಿರುವ ಮುಸುಗುಪ್ಪಿ ಗ್ರಾಮದ ಜನರ ಕಾರ್ಯ ಅಭಿನಂದನೀಯ ಎಂದು ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ ಹೇಳಿದರು. ಶನಿವಾರ ಸಮೀಪದ ಮುಸಗುಪ್ಪಿಯ ಮಹಾಲಕ್ಷ್ಮಿ ದೇವಸ್ಥಾನದ ಆವರಣದಲ್ಲಿ ನಡೆದ ನಮ್ಮೂರ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಶತಮಾನೋತ್ಸವ ಕಾರ್ಯಕ್ರಮದಲ್ಲಿ ರಾಜ್ಯಸಭಾ ಸಂಸದರ ಅನುದಾನದಲ್ಲಿ ನಿರ್ಮಾಣವಾದ ರಂಗಮಂದಿರ ಉದ್ಘಾಟಿಸಿ ಮಾತನಾಡಿದರು. ಅನ್ನ.ಆರೋಗ್ಯ.ಅಕ್ಷರ ಹಾಗೂ ಆಶ್ರಯ …
Read More » -
27 ಡಿಸೆಂಬರ್
ಅಟಲ್ ಬಿಹಾರಿ ವಾಜಪೇಯಿ ಅವರ ಜನ್ಮದಿನಾಚರಣೆ ಅಂಗವಾಗಿ ಉತ್ತಮ ಆಡಳಿತ ದಿನ ಕಾರ್ಯಕ್ರಮ
ಮೂಡಲಗಿ : ಅಜಾತಶತ್ರು ಅಟಲ್ ಬಿಹಾರಿ ವಾಜಪೇಯಿಯವರು ದೇಶಕ್ಕೆ ನೀಡಿದಂತ ಉತ್ತಮ ಆಡಳಿತ ಹಾಗೂ ಅಭಿವೃದ್ಧಿ ಕಾರ್ಯಗಳು ಅಪಾರವಾಗಿದ್ದು, ಅವರ ಜನ್ಮದಿನವನ್ನು ಉತ್ತಮ ಆಡಳಿತ ದಿನವಾಗಿ ಆಚರಿಸುತ್ತಿದ್ದೇವೆ ಎಂದು ಮಂಜುನಾಥ ಶಿಕ್ಷಣ ಸಂಸ್ಥೆಯ ಅಧ್ಯಕ್ಷರಾದ ಲಕ್ಷ್ಮಣ್ ಅಡಿಹುಡಿ ಹೇಳಿದರು. ಮೂಡಲಗಿ ಪಟ್ಟಣದ ಮಂಜುನಾಥ ಸೈನಿಕ ತರಬೇತಿ ಕೇಂದ್ರದ ಸಭಾ ಭವನದಲ್ಲಿ ಭಾರತ ಸರ್ಕಾರದ ಮೈ ಭಾರತ ಕೇಂದ್ರ ಬೆಳಗಾವಿ ಹಾಗೂ ಸಂಕಲ್ಪ ಕ್ರೀಡಾ ಮತ್ತು ಸಮಾಜ ಸೇವಾ ಸಂಘ ಮೂಡಲಗಿ …
Read More » -
26 ಡಿಸೆಂಬರ್
ಮಹಾ ಸಂಸದ ಮಾನೆ,ವಿರುದ್ಧ ಕೇಂದ್ರ ಗೃಹ ಸಚಿವರಿಗೆ ಪತ್ರ ಬರೆಯುವಂತೆ ಆಗ್ರಹಿಸಿ ರಾಜಸಭಾ ಸದಸ್ಯ ಕಡಾಡಿಗೆ ಕರವೇ ಮನವಿ
ಮಹಾ ಸಂಸದ ಮಾನೆ,ವಿರುದ್ಧ ಕೇಂದ್ರ ಗೃಹ ಸಚಿವರಿಗೆ ಪತ್ರ ಬರೆಯುವಂತೆ ಆಗ್ರಹಿಸಿ ರಾಜಸಭಾ ಸದಸ್ಯ ಕಡಾಡಿಗೆ ಕರವೇ ಮನವಿ ಮೂಡಲಗಿ : ಮಹಾರಾಷ್ಟ್ರ ಸಂಸದ ಧೈರ್ಯಶೀಲ ಮಾನೆ, ವಿರುದ್ಧ ಕ್ರಿಮಿನಲ್ ಮೊಕದ್ದಮೆ ಹಾಕುವ ಕುರಿತು, ಕೇಂದ್ರ ಗೃಹಸಚಿವರಿಗೆ ದೂರು ನೀಡುವಂತೆ ಆಗ್ರಹಿಸಿ ಶುಕ್ರವಾರದಂದು ಕಲ್ಲೋಳ್ಳಿಯಲ್ಲಿ ರಾಜಸಭಾ ಸದಸ್ಯ ಈರಣ್ಣ ಕಡಾಡಿ ಅವರಿಗೆ ಕರ್ನಾಟಕ ರಕ್ಷಣಾ ವೇದಿಕೆಯವರು ಮನವಿ ಅರ್ಪಿಸಿದರು. ಮಹಾರಾಷ್ಟ್ರದ ನಾಯಕರು ಕಳೆದ ಐವತ್ತು ವರ್ಷಗಳಿಂದ ಬೆಳಗಾವಿಯಲ್ಲಿ ಪ್ರಚೋದನಕಾರಿ ಭಾಷಣ …
Read More » -
25 ಡಿಸೆಂಬರ್
ದೇಶವೇ ಮೆಚ್ಚುವ ರೀತಿಯಲ್ಲಿ ನೂರಾರು ಅಭಿವೃದ್ಧಿ ಪರ ಯೋಜನೆಗಳನ್ನು ಸಾಕಾರಗೊಳಿಸುವ ಮೂಲಕ ನಮ್ಮ ಭಾರತದ ಚಿತ್ರಣವನ್ನೇ ಬದಲಾಯಿಸಿ ಹೊಸ ಭಾಷ್ಯ ಬರೆದಿದ್ದರು – ಬೆಳಗಾವಿ ಜಿಲ್ಲಾ ಸಹಕಾರಿ ಯುನಿಯನ್ ಅಧ್ಯಕ್ಷ ಬಸಗೌಡ ಪಾಟೀಲ
ಗೋಕಾಕ್- ಅಟಲ್ ಬಿಹಾರಿ ವಾಜಪೇಯಿಯವರು ಪ್ರಧಾನಿಯಾಗಿದ್ದ ಅವಧಿಯಲ್ಲಿ ಇಡೀ ದೇಶವೇ ಮೆಚ್ಚುವ ರೀತಿಯಲ್ಲಿ ನೂರಾರು ಅಭಿವೃದ್ಧಿ ಪರ ಯೋಜನೆಗಳನ್ನು ಸಾಕಾರಗೊಳಿಸುವ ಮೂಲಕ ನಮ್ಮ ಭಾರತದ ಚಿತ್ರಣವನ್ನೇ ಬದಲಾಯಿಸಿ ಹೊಸ ಭಾಷ್ಯ ಬರೆದಿದ್ದರು ಎಂದು ಬೆಳಗಾವಿ ಜಿಲ್ಲಾ ಸಹಕಾರಿ ಯುನಿಯನ್ ಅಧ್ಯಕ್ಷ ಬಸಗೌಡ ಪಾಟೀಲ (ಮೆಳವಂಕಿ) ಹೇಳಿದರು. ಗುರುವಾರ, ಇಲ್ಲಿಯ ಎನ್ಎಸ್ಎಫ್ ಕಚೇರಿಯಲ್ಲಿ ಅರಭಾವಿ ಬಿಜೆಪಿ ಮಂಡಲ ಹಮ್ಮಿಕೊಂಡಿದ್ದ ಸುಶಾಸನ ದಿನದ ಪ್ರಯುಕ್ತ ಸಸಿ ನೆಡುವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ …
Read More » -
24 ಡಿಸೆಂಬರ್
ರಾಜ್ಯದ ಅಭ್ಯರ್ಥಿಗಳಿಗೆ ಸುವರ್ಣಾವಕಾಶ: ಮಂಗಳೂರು ಎ.ಆರ್.ಓ ಅಗ್ನಿವೀರ ಉಚಿತ ಫಿಸಿಕಲ್ ತರಬೇತಿ
ಮೂಡಲಗಿ: ಮುಂದೆ ನಡೆಯಲಿರುವ ಮಂಗಳೂರು ಎ.ಆರ್.ಓ. ಅಗ್ನಿವೀರ ಸೇನಾ ನೇಮಕಾತಿ ರ್ಯಾಲಿಯಲ್ಲಿ ಭಾಗವಹಿಸಲಿರುವ ಅಭ್ಯರ್ಥಿಗಳಿಗೆ ಬೆಳಗಾವಿ ಜಿಲ್ಲೆಯ ಮೂಡಲಗಿ ತಾಲೂಕಿನ ಮಂಜುನಾಥ ಸೈನಿಕ ತರಬೇತಿ ಕೇಂದ್ರದಲ್ಲಿ ಸಿ.ಬಿ.ಟಿ. ಪರೀಕ್ಷೆಯಲ್ಲಿ ಉತ್ತೀರ್ಣರಾದ ಭಾವಿ ಅಗ್ನಿವೀರರಿಗೆ ಉಚಿತ ದೈಹಿಕ ತರಬೇತಿ ಶಿಬಿರವನ್ನು ಹಮ್ಮಿಕೊಳ್ಳಲಾಗಿದೆ ಎಂದು ಸಂಸ್ಥೆಯ ಅಧ್ಯಕ್ಷರು ತಿಳಿಸಿದ್ದಾರೆ. ಸರ್ಕಾರದಿಂದ ಮಾನ್ಯತೆ ಪಡೆದು ಯಶಸ್ವಿಯಾಗಿ 22 ನೇ ವರ್ಷದಲ್ಲಿ ಮುನ್ನಡೆಯುತ್ತಿರುವ ಅಕಾಡೆಮಿಯಿಂದ ಇತ್ತೀಚೆಗೆ ನಡೆದ ಬೆಳಗಾವಿ ಎ.ಆರ್.ಓ. ದ ನೇಮಕಾತಿಯಲ್ಲಿ 78 ಅಭ್ಯರ್ಥಿಗಳು …
Read More » -
24 ಡಿಸೆಂಬರ್
ಬೆಟಗೇರಿ: ಡಿ.27ರಂದು 28ನೇ ವರ್ಷದ ಶ್ರೀಅಯ್ಯಪ್ಪ ಸ್ವಾಮಿ ಮಹಾಪೂಜೆ
ಬೆಟಗೇರಿ:ಗೋಕಾಕ ತಾಲೂಕಿನ ಬೆಟಗೇರಿ ಗ್ರಾಮದ ಓಂ ಶ್ರೀಅಯ್ಯಪ್ಪ ಸ್ವಾಮಿ ಸೇವಾ ಸಮಿತಿಯವರ ಆಶ್ರಯದಲ್ಲಿ 28ನೇ ವರ್ಷದ ಓಂ ಶ್ರೀಅಯ್ಯಪ್ಪ ಸ್ವಾಮಿ ಮಹಾಪೂಜೆ, ಧರ್ಮಸಭೆ, ಅನ್ನಸಂತರ್ಪನೆ, ಹಾಗೂ ದಾನಿಗಳಿಗೆ ಸತ್ಕಾರ ಸಮಾರಂಭ ಡಿ.27ರಂದು ಸ್ಥಳೀಯ ಅಯ್ಯಪ್ಪ ಸ್ವಾಮಿ ದೇವಸ್ಥಾನದ ಸನ್ನಿದಾನದಲ್ಲಿ ನಡೆಯಲಿದೆ. ಅಂದು ಮುಂಜಾನೆ 10 ಗಂಟೆಗೆ ಸುತ್ತಲಿನ ಹಲವು ನಗರ ಪಟ್ಟಣ, ಹಳ್ಳಿಗಳಿಂದ ಆಗಮಿಸಿದ ಅಯ್ಯಪ್ಪ ಸ್ವಾಮಿ ಮಾಲಾಧಾರಿ, ಸಂತ, ಶರಣ, ಗಣ್ಯರನ್ನು ಬರಮಾಡಿಕೊಳ್ಳುವದು, ಸಂಜೆ 4 ಗಂಟೆಗೆ ಸುಮಂಗಲೆಯರಿಂದ …
Read More »
IN MUDALGI Latest Kannada News