Breaking News

TimeLine Layout

ಆಗಷ್ಟ್, 2020

  • 10 ಆಗಷ್ಟ್

    ಮೂಡಲಗಿ ಹಾಗೂ ಗೋಕಾಕ ತಾಲೂಕಿನಲ್ಲಿ ಸೋಮವಾರ ರಂದು ಮತ್ತೆ ಕೊರೋನಾ ಸೋಂಕು ದೃಢ

    ಮೂಡಲಗಿ ಹಾಗೂ ಗೋಕಾಕ ತಾಲೂಕಿನಲ್ಲಿ ಸೋಮವಾರ ರಂದು ಮತ್ತೆ ಕೊರೋನಾ ಸೋಂಕು ದೃಢಪಟ್ಟಿದೆ ಎಂದು ತಾಲೂಕಾ ವೈದ್ಯಾಧಿಕಾರಿ ಡಾ. ಜಗದೀಶ ಜಿಂಗಿ ತಿಳಿಸಿದ್ದಾರೆ. ಗೋಕಾಕ ನಗರದಲ್ಲಿ 10, ಜನರಿಗೆ ಮತ್ತು ಕಲ್ಲೋಳಿ 02, ಸೂಣಧೋಳಿ, 01 ಮಕ್ಕಳಗೇರಿ, 01 ಹಳ್ಳೂರ. 0 ಧೂಪದಾಳ. 01 ಕೊರೋನಾ ಪಾಸಿಟಿವ್ ಪ್ರಕರಣಗಳ ವರದಿ ಬಂದಿದೆ. ಸೋಂಕಿತರು ವಾಸವಾಗಿದ್ದ ಸ್ಥಳಗಳನ್ನು ಸೀಲ್‍ಡೌನ್ ಮಾಡಲಾಗಿದೆ,

    Read More »
  • 9 ಆಗಷ್ಟ್

    ಭಾಷೆ ಭಾವನೆಗಳಿಗೆ ಬಾಯಿಯಿದ್ದಂತೆ: ಡಾ.ವೈ.ಎಮ್.ಭಜಂತ್ರಿ

    ಭಾಷೆ ಭಾವನೆಗಳಿಗೆ ಬಾಯಿಯಿದ್ದಂತೆ: ಡಾ.ವೈ.ಎಮ್.ಭಜಂತ್ರಿ ಗೋಕಾಕ: ಗೋಕಾವಿಯ ದೇಶೀಯ ಭಾಷೆ ವೈವಿಧ್ಯಮಯವಾದುದು, ನಮ್ಮ ಆಡು ಭಾಷೆಯೇ ಬದುಕಿನ ಭಾಷೆಯಾಗಿದೆ. ಭಾಷೆ ದೀಪವಿದ್ದಂತೆ ಮತ್ತು ಭಾಷೆ ಭಾವನೆಗಳಿಗೆ ಬಾಯಿಯಿದ್ದಂತೆ ಎಂದು ಹಂಪಿ ಕನ್ನಡ ವಿಶ್ವವಿದ್ಯಾಲಯದ ಸಿಂಡೆಕೇಟ ಸದಸ್ಯರು ಮತ್ತು ಹುಬ್ಬಳ್ಳಿ ಸರಕಾರಿ ಪದವಿ ಕಾಲೇಜಿನ ಕನ್ನಡ ಅಧ್ಯಾಪಕರಾದ ಡಾ.ವೈ.ಎಮ್. ಭಜಂತ್ರಿ ಹೇಳಿದರು. ಅವರು ಗೋಕಾವಿ ಗೆಳೆಯರ ಬಳಗ ಹಮ್ಮಿಕೊಂಡಿದ್ದ ಕೋವಿಡ್ -19 ಲಾಕ್ಡೌನ್ ಗೂಗಲ್ ಮೀಟಿನಲ್ಲಿ ಸೆಮಿನಾರ್ ಅಲ್ಲ ವೇಬಿನರ್ ವಿಶೇಷ …

    Read More »
  • 9 ಆಗಷ್ಟ್

    ಸೊಸೈಟಿಯಲ್ಲಿ ರಾಜ್ಯಸಭಾ ನೂತನ ಸದಸ್ಯ ಈರಣ್ಣ ಕಡಾಡಿ ಅವರನ್ನು ಸನ್ಮಾನಿಸಿ ಗೌರವ

    ಮೂಡಲಗಿ: ರಾಜ್ಯಸಭೆಗೆ ನೂತನವಾಗಿ ಆಯ್ಕೆಯಾಗಿರುವ ತಾಲ್ಲೂಕಿನ ಕಲ್ಲೋಳಿಯ ಈರಣ್ಣ ಕಡಾಡಿ ಅವರಿಗೆ ಪಟ್ಟಣದ ಬಸವೇಶ್ವರ ಅರ್ಬನ್ ಕ್ರೆಡಿಟ್ ಸೌಹಾರ್ದ ಸೊಸೈಟಿಯಲ್ಲಿ ಸನ್ಮಾನಿಸಿ ಗೌರವಿಸಿದರು. ಅಧ್ಯಕ್ಷತೆವಹಿಸಿದ್ದ ಸೊಸೈಟಿ ಅಧ್ಯಕ್ಷ ಬಿ.ಬಿ. ಬೆಳಕೂಡ ಮಾತನಾಡಿ ‘ಗ್ರಾಮೀಣ ಭಾಗದಲ್ಲಿ ಜನಪರ ಕಾರ್ಯಗಳ ಮೂಲಕ ಗುರುತಿಸಿಕೊಂಡಿರುವ ಈರಣ್ಣ ಕಡಾಡಿ ಅವರು ಕಲ್ಲೋಳಿ ಪಟ್ಟಣಕ್ಕೆ ಬಹದೊಡ್ಡ ಗೌರವ ತಂದಿದ್ದಾರೆ’ ಎಂದರು. ಈರಣ್ಣ ಕಡಾಡಿ ಅವರು ರಾಜ್ಯಸಭಾ ಸದಸ್ಯತ್ವದೊಂದಿಗೆ ರಾಜ್ಯ ರೈತ ಮೋರ್ಚಾದ ಅಧ್ಯಕ್ಷತೆಗೆ ನೇಮಕವಾಗಿದ್ದಾರೆ. ಕಡಾಡಿ ಅವರು …

    Read More »
  • 8 ಆಗಷ್ಟ್

    ಸ್ಥಳೀಯ ಹಿರಿಯ ನಾಗರಿಕರ ನಿರ್ಧಾರಕ್ಕೆ ಕವಡೆಕಾಸಿನ ಕಿಮ್ಮತ್ತು ನೀಡದ ಬೆಟಗೇರಿ ಗ್ರಾಮದ ಜನರು ಹಾಗೂ ವ್ಯಾಪಾರಸ್ಥರು

    ಬೆಟಗೇರಿ:ಸರ್ಕಾರ ಲಾಕ್‌ಡೌನ್ ತೆರವುಗೊಳಿಸಿದರೂ ಸಹ ಕರೋನಾ ಸೋಂಕು ತಡೆಗಟ್ಟುವ ನಿಟ್ಟಿನಲ್ಲಿ ಮುನ್ನೆಚ್ಚರಿಕೆ ಕ್ರಮವಾಗಿ ಗೋಕಾಕ ತಾಲೂಕಿನ ಬೆಟಗೇರಿ ಗ್ರಾಮದಲ್ಲಿ ಪ್ರತಿ ರವಿವಾರ ಸೇರುವ ಸಂತೆಯನ್ನು ರದ್ದುಗೊಳಿಸಲಾಗಿತ್ತು. ಆದರೆ ಶನಿವಾರದಂದು ಅಪಾರ ಜನಸಂದಣಿಯೊoದಿಗೆ ಸಂತೆ ನಡೆದು, ಸ್ಥಳೀಯ ಹಿರಿಯ ನಾಗರಿಕರ ನಿರ್ಧಾರಕ್ಕೆ ಕವಡೆಕಾಸಿನ ಕಿಮ್ಮತ್ತು ಇಲ್ಲದಂತಾದ ಘಟನೆ ಆ.8 ರಂದು ನಡೆದಿದೆ. ಬೆಟಗೇರಿ ಗ್ರಾಮ ಸುತ್ತಲಿನ ಹತ್ತೂರಿನ ಜನರ ವ್ಯಾಪಾರ ವಹಿವಾಟದ ಕೇಂದ್ರ ಸ್ಥಳವಾಗಿದ್ದರಿಂದ ನಿತ್ಯ ನೂರಾರು ಜನ ಇಲ್ಲಿಗೆ ಬಂದು …

    Read More »
  • 8 ಆಗಷ್ಟ್

    ಸಿರಿಸಂಪಿಗೆ ದೇಶೀಯ ನೆಲದ ಸಾಹಿತ್ಯ ಕುಸುಮ: ಶ್ರೀ ಮಾರುತಿ ದಾಸನ್ನವರ

    ಸಿರಿಸಂಪಿಗೆ ದೇಶೀಯ ನೆಲದ ಸಾಹಿತ್ಯ ಕುಸುಮ: ಶ್ರೀ ಮಾರುತಿ ದಾಸನ್ನವರ ಗೋಕಾಕ- ಅಗಷ್ಟ್ ೮: ಚಂದ್ರಶೇಖರ ಕಂಬಾರರ ಕಾವ್ಯ, ಕಥೆ, ಕಾದಂಬರಿ ನಾಟಕ ಕೃತಿಗಳಲ್ಲಿ ಅಡ್ಡಾಡಿದರೆ ದೇಶಿಯ ನೆಲದಲ್ಲೇ ಎಡವಿದಂತೆ, ಎಬ್ಬಿಸಿದಂತೆ, ಕೆಣಕಿದಂತೆ, ಭಾಸವಾಗುತ್ತದೆ. ಅದೇ ವಾಸನೆ ನೀಡುವ “ಸಿರಿಸಂಪಿಗೆ ” ಜಾನಪದ ನೆಲದ ಸುವಾಸನೆ ಬೀರುವ ಹೂವಾಗಿದೆ ಎಂದು ಹೇಳಿದರು. ಅವರು ಗೋಕಾವಿ ಗೆಳೆಯರ ಬಳಗ ಹಮ್ಮಿಕೊಂಡಿದ್ದ ಕೋವಿಡ್ -19 ಲಾಕ್ಡೌನ್ ಗೂಗಲ್ ಮೀಟಿನಲ್ಲಿ ಸೆಮಿನಾರ್ ಅಲ್ಲ ವೇಬಿನರ್ …

    Read More »
  • 8 ಆಗಷ್ಟ್

    ಪ್ರಕಟಣೆ

    ಮೂಡಲಗಿ 08/08/2020 – ಸುಹಾಸಿನಿ ಬಾಳಪ್ಪ ಬಕರೆ(ಭಸ್ಮೆ) ನಾನು ದಿನಾಂಕ 28/೦7/2020 ರಂದು ಸಿದ್ದಾಪುರ ಮತ್ತು ರಾಣೇಬೆನ್ನೂರ್ ಗೆ ಪ್ರಯಾಣಿಸುವಾಗ ನನ್ನ ಬ್ಯಾಗ್ ನಲ್ಲಿದ್ದ ಚೆಕ್, ಖಾಲಿ ಹಾಳೆಗಳು ಮತ್ತು ಪಾಸ್ಬೂಕ್ ಮಾರ್ಗ ಮಾಧ್ಯದಲ್ಲಿ ಬ್ಯಾಗ್ ಹರಿದ ಕಾರಣ ಎಲ್ಲೊ ಕಳೆದುಹೋಗಿವೆ. ಆದ ಕಾರಣ ದಯವಿಟ್ಟು ಯಾರಿಗಾದರೂ ಸಿಕ್ಕರೆ ನನ್ನ ಕೆಳಕಂಡ ವಿಳಾಸಕ್ಕೆ ಸಂಪರ್ಕಿಸಿ. ( ಸುಹಾಸಿನಿ ಬಾಳಪ್ಪ ಬಕರೆ @ಭಸ್ಮೆ, ಲಕ್ಶ್ಮಿ ನಗರ ಮೂಡಲಗಿ 591312 ಜಿಲ್ಲೆ- ಬೆಳಗಾವಿ …

    Read More »
  • 8 ಆಗಷ್ಟ್

    ಮೂಡಲಗಿ ಪಟ್ಟಣದಲ್ಲಿ ಇಂದು ಮತ್ತೆ ಕೊರೋನಾ ಕೇಸ್ ಪತ್ತೆ;

    ಮೂಡಲಗಿ ಪಟ್ಟಣದಲ್ಲಿ ಇಂದು 1 ಕೊರೋನಾ ಕೇಸ್ ಪತ್ತೆ; ಮೂಡಲಗಿ: ಪಟ್ಟಣದ ಲಕ್ಷ್ಮಿ ನಗರದಲ್ಲಿ ಮತ್ತೊಂದು ಕೊರೋನಾ ಪಾಸಿಟಿವ್ ಕೇಸು ಪತ್ತೆಯಾಗಿದ್ದು ಜನರಲ್ಲಿ ಆತಂಕ ಹೆಚ್ಚಾಗಿದೆ. ಲಕ್ಷ್ಮಿ ನಗರದ ಮಹಿಳೆಗೆ ಸೋಂಕು ದೃಢಪಟ್ಟಿದ್ದುನ್ನು ಆರೋಗ್ಯ ಇಲಾಖೆಯ ಮೂಲಗಳಿಂದ ಅಧಿಕೃತ ಪ್ರಕಟಣೆಯೊಂದೇ ಬಾಕಿ ಉಳಿದಿದೆ. ಕೊರೋನಾ ಕೇಸುಗಳು ಮೂಡಲಗಿ ನಗರಕ್ಕೆ ಒಂದೊಂದಾಗಿ ಹೆಜ್ಜೆಯಿಡುತ್ತಿದ್ದು ಇದೇ ರೀತಿಯಾದರೆ ಇನ್ನೂ ಕೇಸುಗಳು ಹೆಚ್ಚಾಗುವ ಸಂಭವವಿದ್ದು ಜನರಲ್ಲಿ ಜಾಗೃತಿಯಾಗಬೇಕಾಗಿದೆ. ಇವತ್ತು ಪತ್ತೆಯಾದ ಸೋಂಕಿತರ ಮನೆಯ ಸುತ್ತಮುತ್ತ …

    Read More »
  • 8 ಆಗಷ್ಟ್

    ಸೊಂಕಿತರ ಸುರಕ್ಷತೆ ಮತ್ತು ಆರೈಕೆಗಾಗಿ ಬಾಲಚಂದ್ರ ಜಾರಕಿಹೊಳಿ ಅವರು ತಮ್ಮ ಸ್ವಂತ ಹಣವನ್ನು ಇದಕ್ಕಾಗಿ ವ್ಯಯಿಸುತ್ತಿದ್ದಾರೆ

    ಘಟಪ್ರಭಾ : ಕೊರೋನಾ ರೋಗಿಗಳ ಆರೈಕೆಗಾಗಿ ಶಾಸಕ ಹಾಗೂ ಕಹಾಮ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಅವರು ತಮ್ಮ ಸ್ವಂತ ವೆಚ್ಚದಲ್ಲಿ ಗೋಕಾಕ ಹಾಗೂ ಮೂಡಲಗಿ ತಾಲೂಕುಗಳಲ್ಲಿ ಕೇಂದ್ರಿಕೃತ ಆಮ್ಲಜನಕ ಘಟಕಗಳನ್ನು ಪ್ರಾರಂಭಿಸಿದ್ದಾರೆಂದು ಗೋಕಾಕ ತಹಶೀಲ್ದಾರ ಪ್ರಕಾಶ ಹೊಳೆಪ್ಪಗೋಳ ತಿಳಿಸಿದರು. ಇತ್ತೀಚೆಗೆ ಇಲ್ಲಿಯ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಕೊರೋನಾ ಸೊಂಕಿತರಿಗಾಗಿ ಆರಂಭಿಸಲಾದ ಕೇಂದ್ರಿಕೃತ ಆಮ್ಲಜನಕ ಘಟಕದ ಆರಂಭೋತ್ಸವಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಸೊಂಕಿತರ ಸುರಕ್ಷತೆ ಮತ್ತು ಆರೈಕೆಗಾಗಿ ಬಾಲಚಂದ್ರ …

    Read More »
  • 7 ಆಗಷ್ಟ್

    ಗ್ರಾಮೀಣ ಭಾಗದಲ್ಲಿ “ಸ್ವಯಂ ಸೇವಕರು” ಮತ್ತು “ಕರೋನಾ ವಾಯಿರಸ್” ತಂಡಗಳನ್ನು ರಚಿಸಿಕೊಂಡು ಜಾಗೃತಿ ಮೂಡಿಸುವದು ಮತ್ತು ಮನೆ ಮನೆ ಮತ್ತೊಮ್ಮೆ ತೆರಳಿ ಸದಸ್ಯರನ್ನು ತಪಾಸಣೆ ಮಾಡಿ

    ಮೂಡಲಗಿ: ಕರೋನ ಮಹಾಮಾರಿ ರೋಗವು ವಿಶ್ವದಲ್ಲೆಡೆ ಮೂಲೆ ಮೂಲೆಯಲ್ಲಿ ಹರಡುತಿದ್ದು ಗ್ರಾಮೀಣ ಭಾಗದಲ್ಲಿ ರೋಗದ ಬಗ್ಗೆ ಕಟ್ಟು ನಿಟ್ಟಾಗಿ ಜಾಗೃತಿ ಮೂಡಿಸುವುದು ಅತಿ ಅವಶ್ಯಕವಾಗಿರುತ್ತದೆ ಎಂದು ತಾಲೂಕಿನ ಕಲ್ಲೋಳಿಯ ಜೈ ಹನುಮಾನ ಯುವಜನಾ ಸೇವಾ ಸಂಘದ ಪದಾಧಿಕಾರಿಗಳು ಮೂಡಲಗಿ ತಹಶಿಲ್ದಾರ ಮೂಖಾಂತರ ಬೆಳಗಾವಿ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದ್ದರು. ಸಮುದಾಯ ಮಟ್ಟದಲ್ಲಿ ಹರಡದಂತೆ ಮುಂದಿನ ಕ್ರಮ ತೆಗೆದುಕೊಳ್ಳಬೇಕು, ಗ್ರಾಮೀಣ ಭಾಗದಲ್ಲಿ “ಸ್ವಯಂ ಸೇವಕರು” ಮತ್ತು “ಕರೋನಾ ವಾಯಿರಸ್” ತಂಡಗಳನ್ನು ರಚಿಸಿಕೊಂಡು ಜಾಗೃತಿ …

    Read More »
  • 7 ಆಗಷ್ಟ್

    ಈರಣ್ಣ ಕಡಾಡಿ ಅವರಿಗೆ ಸನ್ಮಾನ’

     ಕಲ್ಲೋಳಿ: ಪಟ್ಟಣದ ಶ್ರೀ ರಾಮಲಿಂಗೇಶ್ವರ ಶಿಕ್ಷಣ ಸಂಸ್ಥೆಯ ಹಾಗು ಶ್ರೀ ಬಸವೇಶ್ವರ ಅರ್ಬನ್ ಸೌಹಾರ್ದ ಸಹಕಾರಿ ವತಿಯಿಂದ ಶನಿವಾರ ಅ-೦೮ ರಂದು ನೂತನ ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ ಅವರಿಗೆ ಸಂಸ್ಥೆಯ ಸಭಾಭವನದಲ್ಲಿ ಸನ್ಮಾನ ಸಮಾರಂಭ ನಡೆಯಲಿದೆ. ಬಸಗೌಡ ಪಾಟೀಲ‌, ಬಿ.ಬಿ.ಬೆಳಕೂಡ,ಬಿ.ಎಸ.ಕಡಾಡಿ, ಬಿ.ಆರ್. ಕಡಾಡಿ,ಶಿವರುದ್ರ ಪಾಟೀಲ, ರಾಯಪ್ಪ ಪಾಟೀಲ,ಶಿವಪ್ಪ ಜಗದಾಳಿ,ಮಹಾಂತೇಶ ಕಪ್ಪಲಗುದ್ದಿ,ಸಾತಪ್ಪ ಖಾನಾಪುರ,ಮಲ್ಲಪ್ಪ ಖಾನಾಪೂರ ಸೇರಿದಂತೆ ನಿರ್ದೇಶಕರು,ಸಿಬ್ಬಂದಿ ವರ್ಗ ಉಪಸ್ಥಿತಿ ಇರುವರು.

    Read More »