Breaking News
Home / Recent Posts / ವೀರಶೈವಲಿಂಗಾಯತ ಮಹಿಳಾ ಸಂಘ ಉದ್ಘಾಟನೆ

ವೀರಶೈವಲಿಂಗಾಯತ ಮಹಿಳಾ ಸಂಘ ಉದ್ಘಾಟನೆ

Spread the love

ವೀರಶೈವಲಿಂಗಾಯತ ಮಹಿಳಾ ಸಂಘ ಉದ್ಘಾಟನೆ

ಮೂಡಲಗಿ: ಮಹಿಳೆಯರು ತೊಡಗಿಕೊಂಡು ಸ್ವ ಉದ್ಯೋಗಕ್ಕೆ ಸಿಗುವ ನೇರವನ್ನು ಪಡೆದುಕೊಂಡು ಆರ್ಥಿಕವಾಗಿ ಸಬಲರಾಗಬೇಕು ಎಂದು ವೀರಶೈವಲಿಂಗಾಯತ ಸಂಘದ ಬೆಳಗಾವಿ ಜಿಲ್ಲಾ ಅಧ್ಯಕ್ಷೆ ಶಿಲ್ಪಾ ಗೋಡಿಗೌಡರ ಹೇಳಿದರು.
ಅವರು ಪಟ್ಟಣದ ಶ್ರೀ ಬಸವೇಶ್ವರ ಅರ್ಬನ್ ಸೋಸೈಟಿಯ ಸಭಾಂಗಣದಲ್ಲಿ ವೀರಶೈವ ಲಿಂಗಾಯತ ಸಂಘಟನಾ ವೇದಿಕೆಯ ಮೂಡಲಗಿ ಮಹಿಳಾ ಘಟಕದ ಉದ್ಘಾಟನಾ ಸಮಾರಂಭ ಭಾಗವಹಿಸಿ ಮಾತನಾಡಿ, ಸಂಘಟನೆಗಳಿಂದ ನಮ್ಮ ಭಾರತೀಯ ಸಂಸ್ಕøತಿಯ ಮೆರಗು ಹೆಚ್ಚುತ್ತದೆ ಎಂದರು.
ಇದೆ ಸಮಯದಲ್ಲಿ ಮೂಡಲಗಿ ಸಂಘಟನೆಯ ಪದಾಧಿಕಾರಿಗಳ ನೇಮಕ ಮಾಡಲಾಯಿತು.ಅಧ್ಯಕ್ಷರಾಗಿ
ಮಹಾದೇವಿ ಶಂಕ್ರಯ್ಯ ಹಿರೇಮಠ, ಉಪಾಧ್ಯಕ್ಷರಾಗಿ ಸುರೇಖಾ ಅಂಗಡಿ, ಪ್ರಧಾನ ಕಾರ್ಯದರ್ಶಿಯಾಗಿ ಸೌಮ್ಯಾ ಸೋಮಶೇಖರ ಹಿರೇಮಠ ಆಯ್ಕೆಗೊಂಡರು ಮತ್ತು 13 ಜನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವೀರಶೈವ ಲಿಂಗಾಯತ ಸಂಘಟನೆಯ ರಾಷ್ಟ್ರೀಯ ಕಾರ್ಯದರ್ಶಿ ಶ್ರೀಮತಿ ಗೌರಮ್ಮ ಷಡಕ್ಷರಿ ವಹಿಸಿದ್ದರು.
ಸಮಾರಂಭ ವೇದಿಕೆಯಲ್ಲಿ ಶೀತಲ ಮಠಪತಿ ಮತ್ತು ಡಾ|| ಭಾರತಿ ಕೋಣಿ, ಆಶಾ ಉಮನಾಬಾದಿಮಠ, ಸುಜಾತಾ ಹಿರೇಮಠ, ಕುಸುಮಾ ತೇಲಿ, ಸುಮಿತ್ರಾ ಶೇಡಬಾಳ, ಮಹಾದೇವಿ ಹಿರೇಮಠ ಮತ್ತಿತರರು ಉಪಸ್ಥಿತರಿದ್ದರು . ಸೌಮ್ಯಾ ಹಿರೇಮಠ ನಿರೂಪಿಸಿದರು, ಸೌಜನ್ಯ ಹಿರೇಮಠ ಸ್ವಾಗತಿಸಿದರು, ವಿಜಯಲಕ್ಷ್ಮೀ ಹಿರೇಮಠ ವಂದಿಸಿದರು.


Spread the love

About inmudalgi

Check Also

ತಂದೆ ತಾಯಿ ಮತ್ತು ಗುರು ಭಕ್ತಿ ವಿದ್ಯಾರ್ಥಿಗಳನ್ನು ಸನ್ಮಾರ್ಗಕ್ಕೆ ಕರೆದುಕೊಂದು ಹೋಗುತ್ತದೆ. ಮುಖ್ಯೋಪಾದ್ಯಾಯ — ಚಂದ್ರಕಾಂತ ಬಿ. ಪೂಜೇರಿ

Spread the loveಮೂಡಲಗಿ : ತಂದೆ ತಾಯಿ ಮತ್ತು ಗುರು ಭಕ್ತಿ ವಿದ್ಯಾರ್ಥಿಗಳನ್ನು ಸನ್ಮಾರ್ಗಕ್ಕೆ ಕರೆದುಕೊಂದು ಹೋಗುತ್ತದೆ ವಿದ್ಯಾರ್ಥಿಗಳು ತಂದೆ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ