Breaking News
Home / Recent Posts / ಶರಣ ಶಾಬುಜಿ ಮತ್ತು ಅವಬಾಯಿ ಐಹೊಳೆ ಪುಣ್ಯಸ್ಮರಣೆ; ಸಂಗೀತ, ಭಜನಾ ಗೋಷ್ಠಿ

ಶರಣ ಶಾಬುಜಿ ಮತ್ತು ಅವಬಾಯಿ ಐಹೊಳೆ ಪುಣ್ಯಸ್ಮರಣೆ; ಸಂಗೀತ, ಭಜನಾ ಗೋಷ್ಠಿ

Spread the love

ಮೂಡಲಗಿ: ಸಮೀಪದ ಇಟ್ನಾಳದ ಶಿವಶರಣ ಶಾಬುಜಿ ಐಹೊಳೆ ಅವರ 35ನೇ ಪುಣ್ಯಸ್ಮರಣೆ ಹಾಗೂ ಮಾತೋಶ್ರೀ ಅವಬಾಯಿ ಶಾಬುಜಿ ಐಹೊಳಿ ಅವರ 18ನೇ ಪುಣ್ಯಸ್ಮರಣೆ ಅಂಗವಾಗಿ ಭಾನುವಾರ ಜು.10ರಂದು ಬೆಳಿಗ್ಗೆ 9ಕ್ಕೆ ಇಟ್ನಾಳ ಗ್ರಾಮದಲ್ಲಿ ಜರುಗಲಿದೆ.

ಸಾನ್ನಿಧ್ಯವನ್ನು ಇಟನಾಳದ ಶ್ರೀಸಿದ್ಧಶ್ವರ ಶರಣು ವಹಿಸುವರು. ಎಸ್.ಕೆ. ಕೊಪ್ಪದ ಹಿರಿಯ ಕಲಾವಿದ ರಾಮನಗೌಡ ವಜ್ರಮಟ್ಟಿ ಅಧ್ಯಕ್ಷತೆವಹಿಸುವರು. ಮುಖ್ಯ ಅತಿಥಿಗಳಾಗಿ ನಿವೃತ್ತ ಡಿವೈಎಸ್‍ಪಿ ಗಿರೀಶ ಕಾಂಬಳೆ, ಜಮಖಂಡಿಯ ಕಲಾವಿದ ಡಾ. ಗೋಪಾಲಕೃಷ್ಣ ಹವಾಲ್ದಾರ, ಸಾಹಿತಿ ಬಾಲಶೇಖರ ಬಂದಿ, ಪ್ರೊ. ಎ.ಪಿ. ರಡ್ಡಿ ಭಾಗವಹಿಸುವರು.
ಭಾಗವಹಿಸುವ ಕಲಾವಿದರು: ಆಕಾಶವಾಣಿ ಕಲಾವಿದ ಸದಾಶಿವ ಐಹೋಳೆ, ಶಿವಪುತ್ರಯ್ಯ ಮಠಪತಿ, ದಿನೇಶ ಜುಗಳಿ, ಆನಂದ ಬ್ಯಾಳಿ, ವಿಠ್ಠಳ ಐಹೊಳಿ, ಅಜಿತ ಶಿಂಗೆ, ರಾಮಣ್ಣ ಖೋತ, ಓಂಕಾರ, ಬಸವರಾಜ ಕರಕಂಬಿ, ಮಹಾಂತೇಶ ಹೂಗಾರ, ನಾಗೇಶ ಐಹೊಳೆ, ಕಲ್ಲಪ್ಪ ಸುಣಧೋಳಿ, ಅಶೋಕ ಪೋತರಾಜ, ಬಸವರಾಜ ಮರಗನ್ನವರ, ಪಾಂಡು ಬುದ್ನಿ ಮತ್ತಿತರರು ಭಾಗವಹಿಸುವರು ಎಂದು ಸಮಿತಿ ಅಧ್ಯಕ್ಷ ಮಹಾದೇವ ಐಹೊಳೆ ಮತ್ತು ಸಂಚಾಲಕ ರಾಮಕೃಷ್ಣ ಐಹೊಳೆ ಅವರು ತಿಳಿಸಿದ್ದಾರೆ.


Spread the love

About inmudalgi

Check Also

ಫೆ. 19ರಿಂದ ಹೊನಕುಪ್ಪಿ ಚಂದ್ರಮ್ಮಾದೇವಿ ಜಾತ್ರೆ

Spread the loveಮೂಡಲಗಿ: ‘ಮೂಡಲಗಿ ತಾಲ್ಲೂಕಿನ ಹೊನಕುಪ್ಪಿಯ ಚಂದ್ರಮ್ಮಾದೇವಿ ಜಾತ್ರೆಯು ಫೆ. 19ರಿಂದ ಫೆ. 23ರ ವರೆಗೆ ಜರುಗಲಿದ್ದು, ಜಾತ್ರೆಯಲ್ಲಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ