ಕಳ್ಳಿಗುದ್ದಿಯಲ್ಲಿ ಕರೋನಾ ಜಾಗೃತಿ
ಕುಲಗೋಡ:
ಗೋಕಾಕ ತಾಲೂಕಿನ ಸಮೀಪದ ಕಳ್ಳಿಗುದ್ದಿ ಗ್ರಾಮದಲ್ಲಿ ಶನಿವಾರದಂದು ಗ್ರಾಮ ಪಂಚಾಯತಿ ಹಾಗೂ ಕೌಜಲಗಿ ಪ್ರಾಥಮಿಕ ಆರೋಗ್ಯ ಕೇಂದ್ರದ ಸಂಯುಕ್ತ ಆಶ್ರಯದಲ್ಲಿ ಕೊರೋನಾ ಸೊಂಕು ತಡೆಗಟ್ಟುವಿಕೆ ಜಾಗೃತಿ ಕಾರ್ಯಕ್ರಮನ್ನು ಹಮ್ಮಿಕೊಳ್ಳಲಾಗಿತ್ತು.
ಗ್ರಾಮ ಪಂಚಾಯತ ಕಚೇರಿ ಆವರಣದಲ್ಲಿ ಉಚಿತವಾಗಿ ಗ್ರಾಮಸ್ಥರಿಗೆ ಮಾಸ್ಕನ್ನು ಗ್ರಾ.ಪಂ. ಉಪಾಧ್ಯಕ್ಷ ವೆಂಕಣ್ಣ ಮಹಾರಡ್ಡಿ ವಿತರಿಸಿ ಮಾತನಾಡಿ, ಗ್ರಾಮಸ್ಥರು ಕೊರೋನಾ ಬಗ್ಗೆ ಭಯಪಡಬೇಡಿ, ಮನೆ-ಓಣಿ-ಗ್ರಾಮಗಳಲ್ಲಿ ಸ್ವಚ್ಛತೆ ಕಾಪಾಡಿಕೊಳ್ಳಬೇಕೆಂದು ಹೇಳಿದರು.
ಕೊರೋನಾ ಜಾಗೃತಿ ಕುರಿತು ಮಾತನಾಡಿದ ಕೌಜಲಗಿ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ.ರವೀಂದ್ರ ನಾಡಗೌಡರ ಅವರು ಕೆಮ್ಮು, ನೆಗಡಿ, ಜ್ವರ ಬಂದರೆ ಗ್ರಾಮಸ್ಥರು ತಪ್ಪದೆ ಆರೋಗ್ಯ ಕೇಂದ್ರಕ್ಕೆ ಬಿಂದು ಆರೋಗ್ಯ ತಪಾಸಣೆ ಮಾಡಿಕೊಳ್ಳಿ ಆರೋಗ್ಯದ ಬಗ್ಗೆ ನಿರ್ಲಕ್ಷ್ಯ ಬೇಡ. ಕೊರೋನಾ ವೈರಸ್ಸು ಬಹಳ ಸೂಕ್ಷ್ಮವಾಗಿದ್ದು, ಮಹಾಮಾರಕವಾಗಿದೆ. ರವಿವಾರ ಗ್ರಾಮಸ್ಥರೆಲ್ಲರೂ ಸ್ವಯಂ ಕಪ್ರ್ಯೂವನ್ನು ಜಾರಿಗೊಳ್ಳುವಂತೆ ಅನುಸರಣೆ ಮಾಡಿ ಆಹಾರದಲ್ಲಿ ಜಾಗರೂಕತೆಯಿರಲಿ. ಬಿಸಿನೀರು ಕುಡಿದು ಆರೋಗ್ಯ ರಕ್ಷಿಸಿಕೊಳ್ಳಿ ಎಂದು ಹೇಳಿದರು.
ಪಿ.ಕೆ.ಪಿ.ಎಸ್. ಮುಖ್ಯ ವ್ಯವಸ್ಥಾಪಕ ರಮೇಶ ದಳವಾಯಿ, ಗ್ರಾ.ಪಂ. ಸದಸ್ಯರುಗಳಾದ ಕರೆಪ್ಪ ಭೀ. ಅಳಗೋಡಿ, ಹನಮಂತ ಶಿ. ಅಳಗೋಡಿ, ರಾಮಣ್ಣ ಗೂ. ನಾಡಗೌಡರ, ಲಕ್ಷ್ಮಣ ಚನ್ನಾಳ, ಫಕೀರವ್ವ ಅಳಗೋಡಿ, ಲಕ್ಷ್ಮಣ ಕೊರ್ತಿ, ಲಕ್ಷ್ಮಣ ವೆಂ. ಹಿರೇರಡ್ಡಿ, ಅಂಗನವಾಡಿ ಮೇಲ್ವಿಚಾರಕಿ ಎಸ್.ಎಸ್.ನಂದಗಾಂವಿ, ಗ್ರಾ.ಪಂ. ಪಿ.ಡಿ.ಓ. ಅಂಜನಾ ಗಚ್ಚಿ ಹಾಗೂ ಆಶಾ ಮತ್ತು ಅಂಗನವಾಡಿ, ಗ್ರಾಮ ಪಂಚಾಯತಿ, ಪಿ.ಕೆ.ಪಿ.ಎಸ್, ರಡ್ಡೇರಟ್ಟಿ-ಮನ್ನಿಕೇರಿ ಗ್ರಾಮಗಳ ಸಂಘ-ಸಂಸ್ಥೆಗಳ ಸಿಬ್ಬಂದಿ ವರ್ಗ ಹಾಜರಿದ್ದರು.