ಮೂಡಲಗಿ: ಸಮಾಜದಲ್ಲಿ ಆರ್ಥಿಕವಾಗಿ ಹಿಂದುಳಿದವರಿಗೆ ಅಗತ್ಯ ಆರೋಗ್ಯ ಸೇವೆಗಳು ದೊರೆಯುವಂತಾಗಲು ಸರ್ಕಾರದ ಪ್ರಾಥಮಿಕ ಆರೋಗ್ಯ ಕೇಂದ್ರಗಳು ಸುಸಜ್ಜಿತವಾಗಿರಬೇಕಾದ ಅಗತ್ಯವಿದೆ. ಆ ಮೂಲಕ ಬಡಜನತೆ ಒಳ್ಳೆಯ ಸೇವೆ ನೀಡಲು ಸಾಧ್ಯವಾಗುವುದು ಎಂದು ರಾಜ್ಯಸಭಾ ಸಂಸದ ಈರಣ್ಣ ಕಡಾಡಿ ಹೇಳಿದರು.
ಬುಧವಾರ ಜೂ-22 ರಂದು 2022-23ನೇ ಸಾಲಿನ ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಜಿಲ್ಲಾ ಖನಿಜ ನಿಧಿ ಯೋಜನೆಯಡಿ ಕಲ್ಲೋಳಿ ಪಟ್ಟಣದಲ್ಲಿರುವ ಪ್ರಾಥಮಿಕ ಆರೋಗ್ಯ ಕೇಂದ್ರದ ಆವರಣಕ್ಕೆ ಕೌಂಪೌಂಡ ವಾಲ್ ನಿರ್ಮಾಣ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿ ಮಾತನಾಡಿದ ಸಂಸದ ಈರಣ್ಣ ಕಡಾಡಿ ಅವರು ಕಲ್ಲೊಳಿ ಪಟ್ಟಣದಲ್ಲಿರುವ ಪ್ರಾಥಮಿಕ ಆರೋಗ್ಯ ಕೇಂದ್ರದ ಆವರಣಕ್ಕೆ ಕೌಂಪೌಂಡ ವಾಲ್ ನಿರ್ಮಾಣ ಕಾಮಗಾರಿಗೆ ಜಿಲ್ಲಾ ಖನಿಜ ನಿಧಿ ಯೋಜನೆಯಡಿ 19.69 ಲಕ್ಷ ರೂ ಅನುದಾನ ಬಿಡುಗಡೆಯಾಗಿದೆ ಎಂದರು.
ಕೇಂದ್ರ ಹಾಗೂ ರಾಜ್ಯ ಸರ್ಕಾರದಿಂದ ಕಲ್ಲೋಳಿ ಪಟ್ಟಣದ ಸಮಗ್ರ ಅಭಿವೃದ್ದಿಗೆ ಹಲವಾರು ಯೋಜನೆಗಳನ್ನು ಜಾರಿಗೆ ತರಲು ಪರಿಶ್ರಮ ಹಾಕುತ್ತಿದ್ದು, ಪಟ್ಟಣದ ಸಮಗ್ರ ಅಭಿವೃದ್ಧಿಗೆ ಸಾರ್ವಜನಿಕರು ಪಕ್ಷ ಬೇದ ಮರೆತು ಸಹಕಾರ ನೀಡಬೇಕೆಂದು ವಿನಂತಿಸಿದರು.
ಗೋಕಾಕ ತಾಲೂಕಾ ಆರೋಗ್ಯಾಧಿಕಾರಿ ಡಾ. ಮುತ್ತಣ್ಣ ಕೊಪ್ಪದ, ಬಸವರಾಜ ಕಡಾಡಿ, ರಾವಸಾಬ ಬೆಳಕೂಡ, ಮಹಾದೇವ ಮದಭಾಂವಿ, ಹಣಮಂತ ಸಂಗಟಿ, ಪ್ರಭು ಕಡಾಡಿ, ಶಿವಪ್ಪ ಬಿ.ಪಾಟೀಲ, ಅಡಿವೆಪ್ಪ ಕುರಬೇಟ, ಮಂಜುಳಾ ಹಿರೇಮಠ, ಗಿರಿಮಲ್ಲಪ್ಪ ಸಂಸುದ್ದಿ, ಶ್ರೀಶೈಲ ತುಪ್ಪದ, ಹಣಮಂತ ಕೌಜಲಗಿ, ಈರಣ್ಣ ಮುನ್ನೋಳಿಮಠ, ಮಹಾಂತೇಶ ಬಿ.ಪಾಟೀಲ. ಭೀಮಶೆಪ್ಪ ಖಾನಾಪುರ, ಮಹಾದೇವ ಖಾನಾಪುರ, ಪರಗೊಂಡ ಪಾಟೀಲ, ಶ್ರೀಕಾಂತ ಕಡಲಗಿ, ಶಿವಗೊಂಡ ವ್ಯಾಪಾರಿ, ಶಿವಾನಂದ ಹೆಬ್ಬಾಳ, ತುಕಾರಾಮ ಪಾಲ್ಕಿ, ಸಿದ್ದಪ್ಪ ಹೆಬ್ಬಾಳ, ಕೃಷ್ಣಾ ಮುಂಡಿಗನಾಳ, ಭೀಮರಾಯ ಕಡಾಡಿ, ಪರಪ್ಪ ಗಿರೆಣ್ಣವರ. ಮುಖ್ಯಾಧಿಕಾರಿ ಪಾಂಡು ಬಂಗೆಣ್ಣವರ, ವೈದ್ಯಾಧಿಕಾರಿ ಡಾ. ವಿಜಯಲಕ್ಷ್ಮೀ ಸೇರಿದಂತೆ ಬಿಜೆಪಿ ಕಾರ್ಯಕರ್ತರು ಆಶಾ ಮತ್ತು ಅಂಗನವಾಡಿ ಕಾರ್ಯಕರ್ತೆಯರು, ಸಿಬ್ಬಂದಿಗಳು ಉಪಸ್ಥಿರಿದ್ದರು.