ಮೂಡಲಗಿ: ಅಖಂಡ ಭಾರತದ ಸಂಕಲ್ಪದೊಂದಿಗೆ ಪ್ರಾಣತ್ಯಾಗ ಮಾಡಿದ ಜನಸಂಘದ ಪ್ರಥಮ ರಾಷ್ಟ್ರೀಯ ಅಧ್ಯಕ್ಷ ಡಾ.ಶ್ಯಾಮಾ ಪ್ರಸಾದ ಮುಖರ್ಜಿ ಅವರ ಬಲಿದಾನದ ದಿನ ಭಾರತೀಯ ಜನತಾ ಪಾರ್ಟಿ ವತಿಯಿಂದ ರಾಜ್ಯದಾದ್ಯಂತ ಸಮಾಜಮುಖಿ ಕಾರ್ಯಗಳು ನಡೆಯುತ್ತಿವೆ ಎಂದು ಕಾರ್ಯಕ್ರಮದ ರಾಜ್ಯ ಸಂಚಾಲಕರು, ರಾಜ್ಯಸಭಾ ಸದಸ್ಯರು ಹಾಗೂ ರಾಜ್ಯ ಬಿಜೆಪಿ ರೈತ ಮೊರ್ಚಾ ಅಧ್ಯಕ್ಷ ಈರಣ್ಣ ಕಡಾಡಿ ಹೇಳಿದರು.
ಗುರುವಾರ ಜೂ. 23 ರಂದು ಕಲ್ಲೋಳಿ ಪಟ್ಟಣದ ರಾಜ್ಯಸಭಾ ಸಂಸದರ ಜನಸಂಪರ್ಕ ಕಾರ್ಯಾಲಯದಲ್ಲಿ ಡಾ.ಶ್ಯಾಮಪ್ರಸಾದ ಮುಖರ್ಜಿ ಅವರ ಪುಣ್ಯಸ್ಮರಣೆ ಹಿನ್ನೆಲೆ ಅವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಮಾತನಾಡಿದ ಸಂಸದ ಈರಣ್ಣ ಕಡಾಡಿ ಅವರು ಜಮ್ಮು ಕಾಶ್ಮೀರಕ್ಕೆ 370 ನೇ ವಿಧಿಯ ಅಡಿ ನೀಡಿದ್ದ ವಿಶೇಷ ಸ್ಥಾನಮಾನ ತಗೆಯುವಂತೆ ಆಗ್ರಹಿಸಿ ಪ್ರಾಣತ್ಯಾಗ ಮಾಡಿದ ಡಾ.ಶ್ಯಾಮಪ್ರಸಾದ ಮುಖರ್ಜಿ ಅವರ ಬಲಿದಾನ ದಿನದಿಂದ ಜುಲೈ 06 ಜನ್ಮದಿನದ ವರೆಗೆ ಎರಡು ವಾರ ಪರಿಸರ ಸಂರಕ್ಷಣೆ, ಕೆರೆಗಳ ಸ್ವಚ್ಛತೆ, ತೀರ್ಥ ಕ್ಷೇತ್ರಗಳ ಸ್ವಚ್ಛತೆ, ಸಸಿ ನೆಡುವದು, ಲಕ್ಷಾಂತರ ಸಂಖ್ಯೆಯಲ್ಲಿ ಬೀಜದುಂಡೆ ತಯಾರಿಸುವದು ಹಾಗೂ ರಕ್ತದಾನ ಕಾರ್ಯಕ್ರಮ ನಡೆಯಲಿದೆ ಎಂದರು.
ಜಿಲ್ಲಾ ಮಟ್ಟದಲ್ಲಿ ಮಂಡಲ ಹಾಗೂ ಎಲ್ಲ ಬೂತ್ ಮಟ್ಟದಲ್ಲಿ ಪ್ರಜ್ಞಾವಂತ ಸಮಾಜಮುಖಿ ಚಿಂತಕರನ್ನು ಸೇರಿಸಿ ಅವರು ಕಂಡ ನವಯುಗದ ಭಾರತದ ಕಲ್ಪನೆ ಹಾಗೂ ಅವರ ಜೀವನ ಚರಿತ್ರೆ ತಿಳಿಸಿ ಅವರ ಭಾವಚಿತ್ರಕ್ಕೆ ಪುμÁ್ಪರ್ಚಣೆ ಮಾಡುವ ಕಾರ್ಯ ರಾಜ್ಯದಾದ್ಯಂತ ನಡೆಯಲಿದೆ ಎಂದರು.
ಅರಭಾವಿ ಮಂಡಲ ಬಿಜೆಪಿ ರೈತ ಮೋರ್ಚಾ ಕಾರ್ಯದರ್ಶಿ ಅಡಿವೆಪ್ಪ ಕುರಬೇಟ, ಮಾಜಿ ಜಿಲ್ಲಾ ಕೋಶಾಧ್ಯಕ್ಷ ಪರಪ್ಪ ಗಿರೆಣ್ಣವರ, ಹಣಮಂತ ಕಲಕುಟ್ರಿ, ಶಂಕರ ಕೌಜಲಗಿ, ವಿಠ್ಠಲ ಜಟ್ಟೆನ್ನವರ, ದೊಡ್ಡಪ್ಪ ಉಜ್ಜೆನಕೊಪ್ಪ ಸೇರಿದಂತೆ ಅನೇಕ ಕಾರ್ಯಕರ್ತರು ಉಪಸ್ಥಿತರಿದ್ದರು.
ಪೋಟೋ ಶೀರ್ಷಿಕೆ: ಮೂಡಲಗಿ: ಕಲ್ಲೋಳಿ ಪಟ್ಟಣದಲ್ಲಿ ಡಾ.ಶ್ಯಾಮಪ್ರಸಾದ ಮುಖರ್ಜಿ ಅವರ ಪುಣ್ಯಸ್ಮರಣೆÀ ಕಾರ್ಯಕ್ರಮದಲ್ಲಿ ಅವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸುತ್ತಿರುವ ರಾಜ್ಯ ಸಭಾ ಸದಸ್ಯ ಈರಣ್ಣ ಕಡಾಡಿ.
