Breaking News
Home / Recent Posts / ಶ್ರೀ ಸಿದ್ಧಾರೂಢ ಮಠದ 50ನೇ ವೇದಾಂತ ಪರಿಷತ್ತಿನ ಸುವರ್ಣ ಮಹೋತ್ಸವ ಸಮಾರಂಭ

ಶ್ರೀ ಸಿದ್ಧಾರೂಢ ಮಠದ 50ನೇ ವೇದಾಂತ ಪರಿಷತ್ತಿನ ಸುವರ್ಣ ಮಹೋತ್ಸವ ಸಮಾರಂಭ

Spread the love

ಗುರುವಿನ ಕೃಪೆಗಾಗಿ ಅಂತರಂಗ ಶುದ್ಧಿ ಇರಬೇಕು

ಮೂಡಲಗಿ: ‘ಅಂತರಂಗವನ್ನು ಶುದ್ದವಾಗಿರಿಸಿಕೊಂಡು ಗುರುವಿನ ಜ್ಞಾನದ ಮಾರ್ಗದಲ್ಲಿ ಸಾಗಿದರೆ ಮಾತ್ರ ದೈವಿ ಕೃಪೆಯಾಗುವುದು’ ಎಂದು ಶ್ರೀ ಆದಿಚುಂಚನಗಿರಿ ಮಹಾಸಂಸ್ಥಾನಮಠದ ಜಗದ್ಗುರು ಡಾ. ನಿರ್ಮಲಾನಂದನಾಥ ಸ್ವಾಮೀಜಿ ಹೇಳಿದರು.
ತಾಲ್ಲೂಕಿನ ಕಲ್ಲೋಳಿಯ ಶ್ರೀ ಸಿದ್ಧಾರೂಢ ಮಠದ 50ನೇ ವೇದಾಂತ ಪರಿಷತ್ತಿನ ಸುವರ್ಣ ಮಹೋತ್ಸವದ ಉದ್ಘಾಟನಾ ಸಮಾರಂಭದ ಸಾನಿಧ್ಯವಹಿಸಿ ಮಾತನಾಡಿದ ಅವರು ಮನಸ್ಸು ಸ್ವಚ್ಛವಾಗಿರಬೇಕು ಎಂದರು.
ಜಗತ್ತಿನಲ್ಲಿ ಹೊರ ಕಾಣುವ ಲೌಕಿಕ ಸಂಗತಿಗಳನ್ನು ಪ್ರಾಪ್ತಗೊಳಿಸಿಕೊಳ್ಳುವುದು ಸುಲಭವಾಗಿದೆ. ಆದರೆ ಮನುಷ್ಯನ ಆಂತರಿಕ ಶುದ್ದಿಯು ಕೇವಲ ಗುರುವಿನಿಂದ ಆಗುವಂತದ್ದು. ಅಂತಹ ಸಾತ್ವಿಕ ಸ್ವರೂಪವನ್ನು ಮನಷ್ಯನು ತನ್ನೋಳಗೆ ಕಾಣಲು ಸತ್ಪುರಷರು, ಗುರುಗಳ ನುಡಿ ಬೇಕು ಎಂದರು.
ಸಿದ್ಧಾರೂಢರಂತ ಮಹಾನ್ ದೈವಿ ಪುರುಷರು ಕಲ್ಲೋಳಿಯ ನೆ¯ವನ್ನು ಸ್ಪರ್ಷಿಸಿದ್ದರ ಕಾಣಕ್ಕಾಗಿ 50 ವರ್ಷಗಳಿಂದ ವೇದಾಂತ ಪರಿಷತ್ತು ಸಾಗಿ ಬಂದಿರುವುದು ಇಲ್ಲಿಯ ಜನರ ದೈವ ಭಕ್ತಿ, ಸಂಸ್ಕಾರವನ್ನು ಬಿಂಬಿಸುತ್ತದೆ. ತಂತ್ರಜ್ಞಾನದ ಆಧುನಿಕ ದಿನಗಳಲ್ಲಿ ಆಧ್ಯಾತ್ಮಿಕ ಒಲವು ಹೊಂದಿರುವ ಇಲ್ಲಿಯ ಜನರು ಧನ್ಯರು ಎಂದು ಶ್ಲಾಘೀಸಿದರು.
ಇಂಚಲದ ಶ್ರೀ ಶಿವಯೋಗೀಶ್ವರ ಸಾಧು ಸಂಸ್ಥಾನ ಮಠದ ಡಾ. ಶಿವಾನಂದ ಭಾರತಿ ಸ್ವಾಮೀಜಿ ಮಾತನಾಡಿ ಜಗತ್ತಿನ ಮತ್ತು ದೇವಲೋಕದ ಎಲ್ಲವನ್ನು ಪಡೆದುಕೊಳ್ಳುವುದಕ್ಕೆ ಗುರುವಿನ ನಡೆಯಲ್ಲಿ ನಡೆಯುವುದಾಗಿದೆ. ಅಂಥ ಭಾಗ್ಯಕ್ಕಾಗಿ ಪಾವನ ಪುರುಷರ ಮಾರ್ಗದರ್ಶನ ಬೇಕು ಎಂದರು.
ಹಂಪಿ ಹೇಮಕೂಟದ ಶಿವರಾಮಾವಧೂತ ಆಶ್ರಮದ ವಿದ್ಯಾನಂದ ಸ್ವಾಮೀಜಿ, ಮಹಾಲಿಂಗಪುರದ ಸಿದ್ಧಾರೂಢ ಆಶ್ರಮದ ಸಹಜಾನಂದ ಸ್ವಾಮೀಗಳು, ಹುಕ್ಕೇರಿಯ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ ಮಾತನಾಡಿದರು.
ಚಿತ್ರದುರ್ಗದ ಶಿವಲಿಂಗಾನಂದ ಸ್ವಾಮೀಜಿ, ಖುರ್ದಕಂಚನಳ್ಳಿಯ ಸುಬ್ರಹ್ಮಣ್ಯ ಸ್ವಾಮೀಜಿ, ದಾವಣವೇರಿಯ ಶಿವಾನಂದ ಸ್ವಮೀಜಿ, ಹರಿದ್ವಾರದ ಆಚಾರ್ಯ ದಿವ್ಯಚೈತನ್ಯಜೀ ಮಹಾರಾಜ, ಹುಬ್ಬಳ್ಳಿ ಸಿದ್ಧಾರೂಢಮಠದ ಸಚ್ಚಿದಾನಂದ ಸ್ವಾಮೀಜಿ, ಹರಳಕಟ್ಟಿಯ ನಿಜಗುಣ ಸ್ವಾಮೀಜಿ, ಹುಬ್ಬಳ್ಳಿಯ ರಾಮಾನಂದ ಭಾರತಿ ಸ್ವಾಮೀಜಿ, ಚಿದಾನಂದ ಸ್ವಾಮೀಜಿ, ನಿಂಗಯ್ಯ ಸ್ವಾಮೀಜಿ, ತೊಂಡಿಕಟ್ಟಿಯ ಅಭಿನವ ವೆಂಕಟೇಶ ಸ್ವಾಮೀಜಿ, ಮಲ್ಲೇಶ್ವರ ಶರಣರು, ಇಂಚಲದ ಪೂರ್ಣಾನಂದ ಭಾರತಿ ಸ್ವಾಮೀಜಿ, ಮುಕ್ತನಂದ ಸ್ವಾಮೀಜಿ, ಹನುಮದಾಸ ಸ್ವಾಮೀಜಿ ವೇದಿಕೆಯಲ್ಲಿದರು.
ಬೀದರದ ಗುರುದೇವ ಆಶ್ರಮದ ಗಣಪತಿ ಮಹಾರಾಜರು ನಿರೂಪಿಸಿದರು.
ಸಮಾರಂಭದ ಪೂರ್ವದಲ್ಲಿ ಸಿದ್ಧಾರೂಢರ ರಥೋತ್ಸವ, ಸುಮಂಗಲಿಯರ ಪೂರ್ಣ ಕುಂಭ, ಆರತಿಗಳೊಂದಿಗೆ ಸಿದ್ಧಾರೂಢರ ಭಾವಚಿತ್ರ ಮೆರವಣಿಗೆಯು ಜರುಗಿತು. ಅನಸಂತರ್ಪಣೆ ಜರುಗಿತು.


Spread the love

About inmudalgi

Check Also

‘ಮೂಡಲಗಿಯಲ್ಲಿ ನ.23-24 ರಂದು 16ನೇ ಜಿಲ್ಲಾ ಸಾಹಿತ್ಯ ಸಮ್ಮೇಳನ’

Spread the love‘ಮೂಡಲಗಿಯಲ್ಲಿ ನ.23-24 ರಂದು 16ನೇ ಜಿಲ್ಲಾ ಸಾಹಿತ್ಯ ಸಮ್ಮೇಳನ’ ಜನಮನ ಸೇಳೆದ ಕನ್ನಡ ಬುತ್ತಿ ಜಾತ್ರೆ ಕಾರ್ಯಕ್ರಮ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ