ಮೂಡಲಗಿ: ದೇಶದ ಸ್ವಾತಂತ್ರ್ಯ ಹೋರಾಟದ ಭಾಗದಲ್ಲಿ ಬೆಳಗಾವಿ ಜಿಲ್ಲೆಯ ಕೊಡುಗೆ ದೊಡ್ಡ ಪ್ರಮಾಣದಲ್ಲಿದ್ದು, ಪ್ರಸ್ತುತ ರಾಜ್ಯದಲ್ಲಿ ಗಮನ ಸೆಳೆಯುವ ಜಿಲ್ಲೆಯಾಗಿದ್ದು, ಈ ಹಿಂದೆ ಜಿಲ್ಲೆಯ ಮಹನೀಯರು ಹಾಕಿಕೊಟ್ಟ ಮಾರ್ಗಗಳನ್ನು ಗಮನದಲ್ಲಿ ಇಟ್ಟುಕೊಂಡು ಅವರ ಕೊಡುಗೆಗಳನ್ನು ಸ್ಮರಿಸಿ ಅವರ ದಾರಿಯೊಳಗೆ ನಡೆಯೋಣ ಎಂದು ರಾಜ್ಯಸಭಾ ಸಂಸದ ಈರಣ್ಣ ಕಡಾಡಿ ಹೇಳಿದರು.
ಸೋಮವಾರ ಅ.15 ರಂದು ಕಲ್ಲೋಳಿ ಪಟ್ಟಣದ ಶ್ರೀ ಮಹಾಲಕ್ಷ್ಮೀ ಸೌಹಾರ್ದ ಸಹಕಾರಿ ಸಂಘ ನಿ, ಕಲ್ಲೋಳಿ ಹಾಲು ಉತ್ಪಾದಕರ ಸಹಕಾರಿ ಸಂಘ ಹಾಗೂ ಶ್ರೀ ಮಹಾಲಕ್ಷ್ಮೀ ಪಿ.ಕೆ.ಪಿ.ಎಸ್ ಸಂಸ್ಥೆಗಳ ಆಡಳಿತ ಕಚೇರಿ ಮೇಲೆ 75ನೇ ಅಮೃತ ಮಹೋತ್ಸವದ ಸ್ವಾತಂತ್ರ್ಯ ದಿನಾಚರಣೆಯ ಅಂಗವಾಗಿ ಧ್ವಜಾರೋಹಣ ನೇರವೇರಿಸಿ ಮಾತನಾಡಿದ ಅವರು ಕಿತ್ತೂರಿನ ರಾಣಿ ಚೆನ್ನಮ್ಮ, ಸಂಗೋಳ್ಳಿ ರಾಯಣ್ಣ, ಬೆಳಗಾವಿ ಕೆ.ಜಿ. ಗೋಖಲೆ, ಗಂಗಾಧರ ರಾವ್ ದೇಶಪಾಂಡೆ ಹೀಗೆ ಅನೇಕ ಸ್ವಾತಂತ್ರ್ಯ ಹೋರಾಟಗಾರರನ್ನು ಸ್ಮರಿಸಿ ಅವರಿಗೆ ಗೌರವ ಸಲ್ಲಿಸುವುದು ಹಾಗೂ ಅವರ ದೇಶಪ್ರೇಮದ ಹಾದಿಯಲ್ಲಿ ನಡೆಯಲು ಪ್ರತಿಜ್ಞೆ ಮಾಡುವುದು ನಮ್ಮೆಲ್ಲರ ಕರ್ತವ್ಯವಾಗಿದೆ ಎಂದರು.
ಬಿ.ಡಿ.ಸಿ.ಸಿ ಬ್ಯಾಂಕ್ ನಿರ್ದೇಶಕ ಸತೀಶ ಕಡಾಡಿ, ಸಹಕಾರಿಯ ನಿರ್ದೇಶಕರಾದ ಶ್ರೀಶೈಲ ತುಪ್ಪದ, ಪರಪ್ಪ ಮಳವಾಡ, ಬಾಳಪ್ಪ ಸಂಗಟಿ, ಸಹದೇವ ಹೆಬ್ಬಾಳ, ಶಿವಗೊಂಡಪ್ಪ ವ್ಯಾಪಾರಿ, ಸಿದ್ದಪ್ಪ ಹೆಬ್ಬಾಳ, ಮಲ್ಲಿಕಾರ್ಜುನ ಹುಲೆನ್ನವರ, ಅಡಿವೆಪ್ಪ ಕುರಬೇಟ, ಕಾಡೇಶ ಗೋರೋಶಿ, ಪ್ರಭು ಕಡಾಡಿ, ತುಕಾರಾಮ ಪಾಲ್ಕಿ, ಗುರುನಾಥ ಮದಭಾಂವಿ, ರಾಮಲಿಂಗ ಬಿ.ಪಾಟೀಲ, ಹಣಮಂತ ಸಂಗಟಿ, ಮಲ್ಲಪ್ಪ ಹೆಬ್ಬಾಳ, ಸಿದ್ದಪ್ಪ ಗದಾಡಿ, ಬಸವರಾಜ ದಾಸನಾಳ, ಶಂಕರ ಖಾನಗೌಡ್ರ, ಈರಣ್ಣ ಮುನ್ನೋಳಿಮಠ, ಶಿವಪ್ಪ ಬಿ.ಪಾಟೀಲ, ಶಿವಲಿಂಗ ಕುಂಬಾರ, ಶಾಖಾ ಪ್ರಧಾನ ವ್ಯವಸ್ಥಾಪಕ ಹಣಮಂತ ಕಲಕುಟ್ರಿ, ಶಾಖಾ ವ್ಯವಸ್ಥಾಪಕರಾದ ಪರಪ್ಪ ಗಿರೆಣ್ಣವರ, ಶಂಕರ ಕೌಜಲಗಿ ಸೇರಿದಂತೆ ಅನೇಕ ಸಹಕಾರಿಗಳು ಉಪಸ್ಥಿತರಿದ್ದರು.