ಮೂಡಲಗಿ ತಾಲ್ಲೂಕಿನ ಕಲ್ಲೋಳಿಯ ಸಿಆರ್‍ಸಿ ಕಚೇರಿಗೆ ಧಾರವಾಡದ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಆಯುಕ್ತರ ಕಚೇರಿಯ ಸಹ ನಿರ್ದೇಶಕ ಗಜಾನನ ಮನ್ನಿಕೇರಿ ಭೇಟ್ಟಿ ನೀಡಿದರು.
ಆಯಕ್ತರ ಕಚೇರಿಯ ಸಹನಿರ್ದೇಶಕ ಗಜಾನನ ಮನ್ನಿಕೇರಿ ಅಭಿಪ್ರಾಯ
ಶಿಕ್ಷಕರು ಶಿಕ್ಷಣದಲ್ಲಿ ಗುಣಮಟ್ಟ ಕಾಯಬೇಕು
ಮೂಡಲಗಿ: ‘ಶಿಕ್ಷಕರು ಶೈಕ್ಷಣಿಕ ಬದಲಾವಣೆಗಳನ್ನು ತಿಳಿದುಕೊಂಡು ಮಕ್ಕಳ ಭವಿಷ್ಯ ರೂಪಿಸಲು ಪ್ರಾಮಾಣಿಕವಾಗಿ ಕೆಲಸಮಾಡಬೇಕು’ ಎಂದು ಧಾರವಾಡದ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಆಯುಕ್ತರ ಕಚೇರಿಯ ಸಹ ನಿರ್ದೇಶಕ ಗಜಾನನ ಮನ್ನಿಕೇರಿ ಹೇಳಿದರು.
ತಾಲ್ಲೂಕಿನ ಕಲ್ಲೋಳಿಯ ಸಿಆರ್‍ಸಿ ಕಚೇರಿಗೆ ಭೇಟ್ಟಿ ನೀಡಿ ಶಿಕ್ಷಕರನ್ನು ಉದ್ಧೇಶಿಸಿ ಮಾತನಾಡಿದ ಅವರು ಶಿಕ್ಷಣದಲ್ಲಿ ಗುಣಮಟ್ಟ ಅಳವಡಿಸುವುದು ಮಹತ್ವದಾಗಿದೆ ಎಂದರು.
ಕಲ್ಲೋಳಿಯ ಸಿಆರ್‍ಸಿಯು ಮಾದರಿಯಾಗಿದೆ. ಶಿಕ್ಷಕರಿಗೆ ಎಲ್ಲ ಮಾಹಿತಿಯನ್ನು ನೀಡುವ ಕೇಂದ್ರವಾಗಿದೆ. ಸಿಆರ್‍ಪಿ ಗಣಪತಿ ಉಪ್ಪಾರ ಅವರ ಕಾರ್ಯವು ಶ್ಲಾಘನೀಯವಾಗಿದೆ ಎಂದು ಪ್ರಾಸಂಸಿದರು.
ಸಂಪನ್ಮೂಲ ವ್ಯಕ್ತ ಜಿ.ಕೆ. ಉಪ್ಪಾರ, ಹಿರಿಯ ಮುಖ್ಯ ಶಿಕ್ಷಕ ಎಸ್.ಬಿ. ಗಿಡಗೌಡ್ರ, ಹಿರಿಯ ಶಿಕ್ಷಕ ಎಸ್.ಬಿ. ಗೋಸಬಾಳ, ಆರ್.ವೈ. ಹತ್ತಿಕಟಗಿ ಇದ್ದರು.