Breaking News
Home / Recent Posts / ಬಸವ ಜಯಂತಿಯಲ್ಲಿ ಉಚಿತ ಗುಗ್ಗಳೋತ್ಸವ

ಬಸವ ಜಯಂತಿಯಲ್ಲಿ ಉಚಿತ ಗುಗ್ಗಳೋತ್ಸವ

Spread the love

  ಬಸವ ಜಯಂತಿಯಲ್ಲಿ ಉಚಿತ ಗುಗ್ಗಳೋತ್ಸವ

ಮೂಡಲಗಿ: ಕಲ್ಲೋಳಿಯಲ್ಲಿ ಬಸವ ಕಮಿಟಿಯವರು ಸರ್ವಧರ್ಮದವರ ಉಚಿತ ಗುಗ್ಗುಳೋತ್ಸವ ಮಾಡುವ ಮೂಲಕ 12ನೇ ಶತಮಾನದಲ್ಲಿ ಬಸವಣ್ಣನವರು ಸಾರಿದ ಸಮಾನತೆಯನ್ನು ಸಾಕಾರಗೊಳಿಸಿದ್ದಾರೆ’ ಎಂದು ಘೋಡಗೇರಿಯ ಶಿವಾನಂದ ಮಠದ ಮಲ್ಲಯ್ಯ ಸ್ವಾಮೀಜಿ ಹೇಳಿದರು.
ತಾಲ್ಲೂಕಿನ ಕಲ್ಲೋಳಿಯ ಬಸವ ಕಮಿಟಿಯವರು ಬಸವ ಜಯಂತ್ಯುತ್ಸವ ಅಂಗವಾಗಿ ಭಾನುವಾರ ಏರ್ಪಡಿಸಿದ್ದ ಸಾಮೂಹಿಕ ಉಚಿತ ಗುಗ್ಗುಳೋತ್ಸವಕ್ಕೆ ಚಾಲನೆ ನೀಡಿ ಮಾತನಾಡಿದ ಅವರು ಉಚಿತ ಗುಗ್ಗುಳೋತ್ಸವ ಮಾಡುತ್ತಿರುವುದು ಸಮಾಜಕ್ಕೆ ಬಹುದೊಡ್ಡ ಕೊಡುಗೆಯಾಗಿದೆ ಎಂದರು.
ಅಧ್ಯಕ್ಷತೆವಹಿಸಿದ್ದ ಈರಪ್ಪ ಬೆಳಕೂಡ ಮಾತನಾಡಿ ಕಳೆದ ವರ್ಷ ಬಸವೇಶ್ವರರ ಕಂಚಿನ ಪುತ್ಥಳಿ ಪ್ರತಿಷ್ಠಾಪನೆ ಸಂದರ್ಭದಲ್ಲಿ ಸಂಕಲ್ಪ ಮಾಡಿದಂತೆ ಈ ವರ್ಷ ಉಚಿತ ಗುಗ್ಗಳ ಕಾರ್ಯಕ್ರಮ ಏರ್ಪಡಿಸಿದ್ದು, ಇದು ಪ್ರತಿ ವರ್ಷವೂ ಮುಂದುವರಿಸಕೊಂಡು ಹೋಗುತ್ತೇವೆ ಎಂದರು.
ಗುಗ್ಗಳ ಕಾರ್ಯಕ್ರಮಕ್ಕೆ ದೇಣಿಗೆ ನೀಡಿದ ಕಲ್ಲಪ್ಪ ಕಡಾಡಿ, ಪರಪ್ಪ ಕಡಾಡಿ, ಗಿರೀಶ ಪಾಟೀಲ, ಪ್ರಕಾಶ ಕೋಲಾರ, ಹಿರಿಯ ಪುರವಂತ ಬಸಪ್ಪ ವಿಜಯನಗರ ಸೇರಿದಂತೆ ಸೇವೆ ಸಲ್ಲಿಸಿದ ಅನೇಕರನ್ನು ಸನ್ಮಾನಿಸಿ ಗೌರವಿಸಿದರು.
ಉಚಿತ ಗುಗ್ಗಳದಲ್ಲಿ 43 ಜೋಡಿಗಳು ಭಾಗವಹಿಸಿದ್ದವು, 173 ಗುಗ್ಗಳ ಹಂಚು ವ್ಯವಸ್ಥೆ ಮಾಡಿದ್ದರು. ಪುರವಂತರು ವೀರಭದ್ರೇಶ್ವರರ ಮಂತ್ರ ಪಠಣ, ಶಸ್ತ್ರಗಳ ಪ್ರದರ್ಶಣವು ಗಮನಸೆಳೆಯಿತು. ರಾಮಲಿಂಗೇಶ್ವರ ದೇವಸ್ಥಾನದಿಂದ ಮೆರವಣಿಗೆ ಪ್ರಾರಂಭಗೊಂಡು ವೀರಭದ್ರೇಶ್ವರ ಪಾದಗಟ್ಟಿಯಲ್ಲಿ ಮಂಗಲಗೊಂಡಿತು.
ಕಮಿಟಿಯ ಸದಸ್ಯರಾದ ಕೃಷ್ಣಪ್ಪ ಮುಂಡಿಗನಾಳ, ಮಲ್ಲಪ್ಪ ಕಡಾಡಿ, ಪರಪ್ಪ ಮಟಗಾರ, ಮಹಾದೇವ ಖಾನಾಪುರ, ಬಸಪ್ಪ ಪಾಟೀಲ, ಗಿರಿಮಲ್ಲಪ್ಪ ಸವಸುದ್ದಿ ಇತರರು ಇದ್ದರು.
ಬಸವ ಕಮಿಟಿ ಅಧ್ಯಕ್ಷ ರಮೇಶ ಬೆಳಕೂಡ ಪ್ರಾಸ್ತಾವಿಕ ಮಾತನಾಡಿದರು. ಡಾ. ಭೋಜರಾಜ ಬೆಳಕೂಡ ಸ್ವಾಗತಿಸಿದರು, ಆರ್.ಎಸ್. ಗತ್ತಿಗೋಳಿ ವಂದಿಸಿದರು.


Spread the love

About inmudalgi

Check Also

‘ಮೂಡಲಗಿಯಲ್ಲಿ ನ.23-24 ರಂದು 16ನೇ ಜಿಲ್ಲಾ ಸಾಹಿತ್ಯ ಸಮ್ಮೇಳನ’

Spread the love‘ಮೂಡಲಗಿಯಲ್ಲಿ ನ.23-24 ರಂದು 16ನೇ ಜಿಲ್ಲಾ ಸಾಹಿತ್ಯ ಸಮ್ಮೇಳನ’ ಜನಮನ ಸೇಳೆದ ಕನ್ನಡ ಬುತ್ತಿ ಜಾತ್ರೆ ಕಾರ್ಯಕ್ರಮ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ