Breaking News
Home / Recent Posts / ‘ಸುಪ್ತ ಮನಸ್ಸಿನ ನಿಯಂತ್ರಣವಿದ್ದರೆ ಯಶಸ್ಸು ಸುಲಭ”

‘ಸುಪ್ತ ಮನಸ್ಸಿನ ನಿಯಂತ್ರಣವಿದ್ದರೆ ಯಶಸ್ಸು ಸುಲಭ”

Spread the love

 

‘ಸುಪ್ತ ಮನಸ್ಸಿನ ನಿಯಂತ್ರಣವಿದ್ದರೆ ಯಶಸ್ಸು ಸುಲಭ”

ಮೂಡಲಗಿ: ‘ಅಸಾಧ್ಯವಾದದ್ದನ್ನು ಸಾಧ್ಯ ಮಾಡುವಂತ ಶಕ್ತಿ ಪ್ರತಿ ಮನುಷ್ಯನ ಸುಪ್ತ ಮನಸ್ಸಿಗೆ ಇದ್ದು, ಸುಪ್ತ ಮನಸ್ಸನ್ನು ಜಾಗೃತಗೊಳಿಸುವ ಕಲೆಯನ್ನು ಕರಗತ ಮಾಡಿಕೊಳ್ಳಬೇಕು’ ಎಂದು ಭಾರತೀಯ ಸೇನೆಯ ಕರ್ನಲ್ ಡಾ. ಪರಶುರಾಮ ನಾಯಿಕ ಹೇಳಿದರು.
ತಾಲ್ಲೂಕಿನ ಕಲ್ಲೋಳಿಯ ಶ್ರೀ ರಾಮಲಿಂಗೇಶ್ವರ ಶಿಕ್ಷಣ ಸಂಸ್ಥೆಯ ಪ್ರಥಮ ದರ್ಜೆ ಮಹಾವಿದ್ಯಾಲಯದಲ್ಲಿ ಏರ್ಪಡಿಸಿದ್ದ ವ್ಯಕ್ತಿತ್ವ ವಿಕಸನ ಹಾಗೂ ಸಾಧನೆಯ ಕಲೆ ಕುರಿತು ಮಾತನಾಡಿದ ಅವರು ಸುಪ್ತ ಮನಸ್ಸನ್ನು ನಿಯಂತ್ರಣದಲ್ಲಿಟ್ಟುಕೊಂಡರೆ ಯಶಸ್ಸು, ಸಾಧನೆ ಸುಲಭವಾಗಿ ಪಡೆಯಲು ಸಾಧ್ಯ ಎಂದರು.
ಜೀವನದಲ್ಲಿ ಅಸಾಧ್ಯವೆನ್ನುವುದು ಯಾವುದೂ ಇಲ್ಲ. ವಿದ್ಯಾರ್ಥಿಗಳು ಕೀಳರಿಮೆಯನ್ನು ಬಿಟ್ಟು ನನ್ನಿಂದ ಸಾಧ್ಯ ಎಂದು ಸಕಾರಾತ್ಮವಾಗಿ ಕಾರ್ಯಮಾಡಿದರೆ ಯಶಸ್ಸು ಬೆನ್ನು ಹಿಂದೆ ಬರುತ್ತದೆ ಎಂದರು.
ಅತಿಥಿ ಸಾಹಿತಿ, ಪತ್ರಕರ್ತ ಬಾಲಶೇಖರ ಬಂದಿ ಮಾತನಾಡಿ ವಿದ್ಯಾರ್ಥಿಗಳು ಪುಸ್ತಕ ಮತ್ತು ದಿನಪತ್ರಿಕೆಗಳ ಓದು ನಿರಂತರವಾಗಿದ್ದರೆ ಯಾವುದೇ ಪರೀಕ್ಷೆಯನ್ನು ಸುಲಭವಾಗಿ ಎದುರಿಸಲು ಸಾಧ್ಯವಿದ್ದು, ವಿದ್ಯಾರ್ಥಿಗಳು ಮೊಬೈಲ್ ಬಿಟ್ಟು ಪುಸ್ತಕ ಓದಬೇಕು ಎಂದರು.
ಅಧ್ಯಕ್ಷತೆವಹಿಸಿದ್ದ ಸಂಸ್ಥೆಯ ಅಧ್ಯಕ್ಷ ಬಸಗೌಡ ಪಾಟೀಲ ಮಾತನಾಡಿ ವಿದ್ಯಾರ್ಥಿಗಳ ಸಾಧನೆಗಾಗಿ ಸಂಸ್ಥೆಯಲ್ಲಿ ಎಲ್ಲ ಸೌಲಭ್ಯಗಳನ್ನು ಕಲ್ಪಿಸಿಕೊಟ್ಟಿದ್ದು, ಅವುಗಳನ್ನು ಬಳಸಿಕೊಂಡು ಉತ್ತಮ ಭವಿಷ್ಯ ರೂಪಿಸಿಕೊಳ್ಳಬೇಕು ಎಂದರು.
ಅತಿಥಿಯಾಗಿ ಸಂಸ್ಥೆಯ ನಿರ್ದೇಶಕ ಮಲ್ಲಪ್ಪ ಕುರಬೇಟ, ಆಡಳಿತಾಧಿಕಾರಿ ಡಾ. ಸುರೇಶ ಹನಗಂಡಿ, ಶೈಕ್ಷಣಿಕ ಸಲಹೆಗಾರ ಪ್ರೊ. ಕೆ.ಎನ್. ಸಂಗಮ ವೇದಿಕೆಯಲ್ಲಿದ್ದರು.
ಉಪನ್ಯಾಸಕರಾದ ವಿಲಾಸ ತೆಳಗಡೆ, ಆರ್.ಎಸ್. ಪಂಡಿತ, ವಸುಂಧರಾ ಕಾಳೆ, ಪರವೀನ ಅತ್ತಾರ, ಎಂ.ಬಿ. ಕುಲಮೂರ, ಪಿ.ಕೆ. ಸೊಂಟನವರ ಇದ್ದರು.
ಪ್ರೊ ಕೆ.ಎಸ್. ಕೊರವ್ವಗೊಳ ಸ್ವಾಗತಿಸಿದರು, ಪ್ರೊ. ಡಿ.ಎಸ್. ಹುಗ್ಗಿ ಪರಿಚಯಿಸಿದರು, ಪ್ರೊ. ಶಂಕರ ನಿಂಗನೂರ ನಿರೂಪಿಸಿದರು.

 


Spread the love

About inmudalgi

Check Also

‘ಮೂಡಲಗಿಯಲ್ಲಿ ನ.23-24 ರಂದು 16ನೇ ಜಿಲ್ಲಾ ಸಾಹಿತ್ಯ ಸಮ್ಮೇಳನ’

Spread the love‘ಮೂಡಲಗಿಯಲ್ಲಿ ನ.23-24 ರಂದು 16ನೇ ಜಿಲ್ಲಾ ಸಾಹಿತ್ಯ ಸಮ್ಮೇಳನ’ ಜನಮನ ಸೇಳೆದ ಕನ್ನಡ ಬುತ್ತಿ ಜಾತ್ರೆ ಕಾರ್ಯಕ್ರಮ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ