Breaking News
Home / ರಾಜ್ಯ / ‘ನಶೀಸುತ್ತಿರುವ ರಂಗಕಲೆ ಉಳಿಸುವುದು ಅವಶ್ಯವಿದೆ’- ಬಸವರಾಜ ಹಿರೇಮಠ

‘ನಶೀಸುತ್ತಿರುವ ರಂಗಕಲೆ ಉಳಿಸುವುದು ಅವಶ್ಯವಿದೆ’- ಬಸವರಾಜ ಹಿರೇಮಠ

Spread the love

ಮೂಡಲಗಿ ತಾಲ್ಲೂಕಿನ ಕಲ್ಲೋಳಿಯಲ್ಲಿ ನವರಾತ್ರಿ ಉತ್ಸವದ ಅಂಗವಾಗಿ ಏರ್ಪಡಿಸಿದ್ದ ನಾಟಕ ಪ್ರದರ್ಶನವನ್ನು ಬೆಳಗಾವಿಯ ನಗರಾಭಿವೃದ್ಧಿ ಪ್ರಾಧಿಕಾರದ ಉಪನಿರ್ದೇಶಕ ಬಸವರಾಜ ವಿ. ಹಿರೇಮಠ ಉದ್ಘಾಟಿಸಿ ಮಾತನಾಡಿದರು

ಮೂಡಲಗಿ: ‘ಟಿವಿ, ಮೊಬೈಲ್ ಗೀಳಿನಿಂದ ಇಂದು ರಂಗಭೂಮಿ, ರಂಗಕಲೆಗಳು ನಶೀಸಿ ಹೋಗುತ್ತಲಿದ್ದು ರಂಗಕಲೆಗಳನ್ನು ಇಂದು ಉಳಿಸುವುದು ಅವಶ್ಯವಿದೆ’ ಎಂದು ಬೆಳಗಾವಿಯ ನಗರಾಭೀವೃದ್ಧಿ ಪ್ರಾಧಿಕಾರದ ಉಪನಿರ್ದೇಶಕ ಬಸವರಾಜ ಹಿರೇಮಠ ಹೇಳಿದರು.
ತಾಲ್ಲೂಕಿನ ಕಲ್ಲೋಳಿಯಲ್ಲಿ ನವರಾತ್ರಿ ಉತ್ಸವದ ಅಂಗವಾಗಿ ಬಸವ ಮಂಟಪದಲ್ಲಿ ಜೈ ಹನುಮಾನ ಯುವಜನ ಸೇವಾ ಸಂಘದಿಂದ ಏರ್ಪಡಿಸಿದ್ದ ಅತಿ ಸಿಂಗಾರಿ ಸೊಸಿ ಬಂಗಾರಿ’ ನಾಟಕ ಪ್ರದರ್ಶನವನ್ನು ಉದ್ಘಾಟಿಸಿ ಮಾತನಾಡಿದ ಅವರು ರಂಗಕಲೆಯು ಜೀವಂತ ಕಲೆಯಾಗಿದ್ದು
ಪ್ರೇಕ್ಷಕರ ಹೃದಯವನ್ನು ಮುಟ್ಟುವ ಕಲೆಯಾಗಿದೆ ಎಂದರು.
ನಮ್ಮ ನಾಡಿನ ಸಾಂಸ್ಕøತಿಕ ಶ್ರೀಮಂತಿಕೆಯಾಗಿರುವ ರಂಗಕಲೆ, ಜಾನಪದ ಕಲೆಗಳ ಪ್ರದರ್ಶನಕ್ಕೆ ಅವಕಾಶ ನೀಡುವ ಮೂಲಕ ಅಂಥ ಕಲೆಗಳನ್ನು ಬೆಳೆಸಬೇಕು ಎಂದರು.
ಮುಖ್ಯ ಅತಿಥಿಗಳಾಗಿ ರಾಜು ದಬಾಡಿ, ಅಶೋಕ ಅಡಿನವರ, ಯಲ್ಲಪ್ಪ ಬೇವಿನಮರದ, ಸಿದ್ರಾಯ ಮರಸಿದ್ದಪ್ಪಗೋಳ, ರಾಮಸಿದ್ದ ನಾವಿ, ನಾಗಪ್ಪ ಕುಮ್ಮನಗೋಳ ಭಾಗವಹಿಸಿದ್ದರು.
ಸಂಘಟಕರಾದ ಪರಶುರಾಮ ಇಮಡೇರ, ಮಹಾಂತೇಶ ಕಡಲಗಿ, ರಾಜಪ್ಪ ಮಾವರಕರ, ಭೀಮಶಿ ಗೋಕಾವಿ, ಸಿದ್ದಪ್ಪ ಪೂಜೇರಿ, ಭೀಬಶಿ ಕಡಲಗಿ, ಹಣಮಂತ ತೋಟಗಿ, ಅನೀಲ ಖಾನಗೌಡ್ರ, ಸುರೇಶ ಕಲಾಲ, ನಾಗರಾಜ ಕಲಾಲ ಇದ್ದರು.
ಕಲ್ಲೋಳಿ ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳಿಂದ ನಾಟಕ ನೋಡಲು ಸಾವಿರಾರು ಜನರು ಸೇರಿದ್ದರು.


Spread the love

About inmudalgi

Check Also

ಮಾರುತಿ ಕೋಳಿ ಅವರಿಗೆ ರಾಷ್ಟ್ರೀಯ ಪರಶುರಾಮ ಪ್ರಶಸ್ತಿ ಪ್ರಧಾನ

Spread the love ಮಾರುತಿ ಕೋಳಿ ಅವರಿಗೆ ರಾಷ್ಟ್ರೀಯ ಪರಶುರಾಮ ಪ್ರಶಸ್ತಿ ಪ್ರಧಾನ ಮೂಡಲಗಿ: ಕೆರಳಾದ ಶ್ರೀ ಶಟ್ ಶಾಸ್ತ್ರ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ