ಮೂಡಲಗಿ: ಕಲಾಲ ಸಮಾಜ ಸಣ್ಣ ಸಮಾಜವಾಗಿದ್ದರು ಕೂಡ ಮರ್ಯಾದಾ ಪುರುμÉೂೀತ್ತಮ ಶ್ರೀರಾಮನ ಚಂದ್ರನ ಅನುಯಾಯಿಗಳಾಗಿರುವುದು ಅತ್ಯಂತ ಹೆಮ್ಮೆ ಪಡುವ ಸಂಗತಿಯಾಗಿದೆ. ಈ ಸಮುದಾಯದ ಜನರಿಗೆ ಸಾಂಸ್ಕøತಿಕ, ಧಾರ್ಮಿಕ, ಕೌಟುಂಬಿಕ ಈ ರೀತಿಯ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲು ಸಮುದಾಯದ ಭವನದ ಅವಶ್ಯಕತೆ ಇದ್ದು. ಇದನ್ನು ಮನಗಂಡು ಭವನ ನಿರ್ಮಾಣ ಮಾಡಲು ದೃಢ ಹೆಜ್ಜೆ ಇಟ್ಟಿರುತ್ತೇನೆಂದು ರಾಜ್ಯಸಭಾ ಸಂಸದ ಈರಣ್ಣ ಕಡಾಡಿ ಅವರು ಹೇಳಿದರು.
ಬುಧವಾರ ಅ-30 ರಂದು ಕಲ್ಲೋಳಿ ಪಟ್ಟಣದ ಶ್ರೀರಾಮ ಮಂದಿರ ಹತ್ತಿರ ರಾಜ್ಯಸಭಾ ಸಂಸದರ ಸ್ಥಳೀಯ ಪ್ರದೇಶಾಭಿವೃದ್ದಿ ನಿಧಿ ಯೋಜನೆಯಡಿ ರೂ. 10 ಲಕ್ಷ ವೆಚ್ಚದಲ್ಲಿ ಸಮುದಾಯ ಭವನ ನಿರ್ಮಾಣ ಕಾಮಗಾರಿಗೆ ಭೂಮಿ ಪೂಜೆ ನೇರವೆರಿಸಿ ಮಾತನಾಡಿದರು.
ಇತ್ತೀಚಿನ ದಿನಗಳಲ್ಲಿ ಜನರ ಅಗತ್ಯಗಳನ್ನು ಗಮನದಲ್ಲಿಟ್ಟುಕೊಂಡು ಕೆಲಸ ಮಾಡುವ ಪ್ರವೃತ್ತಿ ಕಡಿಮೆಯಾಗಿದೆ. ವೈಯಕ್ತಿಕ ಲಾಭ ಎಂಬ ಮನೋಭಾವ ಎಲ್ಲರಲ್ಲೂ ಮೂಡುತ್ತಿದೆ. ಈ ಮನೋಭಾವ ಬದಿಗಿರಿಸಿ ಸಮಾಜ ಕಟ್ಟುವ ಕೆಲಸಕ್ಕೆ ಕೈಜೋಡಿಸಬೇಕು ಎಂದರಲ್ಲದೇ ಸಾಮಾಜಿಕ, ಸಾಂಸ್ಕøತಿಕ ಹಾಗೂ ಮದುವೆ ಸಮಾರಂಭಗಳಿಗೆ ಅದರಲ್ಲೂ ಬಡ ಕುಟುಂಬದ ಜನರಿಗೆ ಅನುಕೂಲವಾಗುವಂತೆ ಈ ಸಮುದಾಯ ಭವನ ನಿರ್ಮಾಣ ಮಾಡಲಾಗುತ್ತದೆ ಪಟ್ಟಣದ ಸಮಾಜ ಬಂಧುಗಳು ಇದರ ಸದುಪಯೋಗ ಪಡಿಸಿಕೊಳ್ಳಬೇಕೆಂದು ಕರೆ ನೀಡಿದರು.
ಪ್ರಮುಖರಾದ ಸುರೇಶ ಕಬ್ಬೂರ, ದತ್ತು ಕಲಾಲ, ಚಂದು ಕಲಾಲ, ಮನೋಹರ ಕಲಾಲ, ಬಸವರಾಜ ಕಡಾಡಿ, ಶ್ರೀಶೈಲ ತುಪ್ಪದ, ಲೋಹಿತ ಕಲಾಲ, ಶಾನೂರ ಕಲಾಲ, ಕಿರಣ ಕಲಾಲ, ಗುರುನಾಥ ಮಧಬಾಂವಿ, ಶಿವಲಿಂಗ ಕುಂಬಾರ, ದಶಗೀರ ನದಾಫ್, ಸೋಮಲಿಂಗ ಹಡಗಿನಾಳ ಸೇರಿದಂತೆ ಅನೇಕ ಯುವಕರು ಉಪಸ್ಥಿತರಿದ್ದರು.
Check Also
ತಾಯಿಯ ಎದೆ ಹಾಲಿನ ಮಹತ್ವ” ಬಗ್ಗೆ ಜಾಗೃತಿ ಕಾರ್ಯಕ್ರಮ
Spread the love ಮೂಡಲಗಿ : ಮೊದಲ ಹೆರಿಗೆಯ ಬಳಿಕ ತಾಯಂದಿರಿಗೆ ಹಾಲುಣಿಸುವ ಪ್ರಕ್ರಿಯೆ ಬಗ್ಗೆ ತಿಳಿದಿರುವುದಿಲ್ಲ. ಮಕ್ಕಳಿಗೆ ಎದೆಹಾಲು …