Breaking News
Home / ಬೆಳಗಾವಿ / ‘ಮಕ್ಕಳ ಕೈಯಲ್ಲಿ ಮೊಬೈಲ್ ಬದಲಾಗಿ ಪುಸ್ತಕ ಕೊಡಿ’

‘ಮಕ್ಕಳ ಕೈಯಲ್ಲಿ ಮೊಬೈಲ್ ಬದಲಾಗಿ ಪುಸ್ತಕ ಕೊಡಿ’

Spread the love

‘ಮಕ್ಕಳ ಕೈಯಲ್ಲಿ ಮೊಬೈಲ್ ಬದಲಾಗಿ ಪುಸ್ತಕ ಕೊಡಿ’

ಮೂಡಲಗಿ: ‘ಮಕ್ಕಳ ಕೈಯಲ್ಲಿ ಮೊಬೈಲ್ ಬದಲಾಗಿ ಪುಸ್ತಕಗಳನ್ನು ಕೊಡಿರಿ’ ಎಂದು ಮೂಡಲಗಿಯ ಸಿಪಿಐ ಶ್ರೀಶೈಲ್ ಬ್ಯಾಕೂಡ ಹೇಳಿದರು.
ತಾಲ್ಲೂಕಿನ ಕಲ್ಲೋಳಿಯ ಬಸವೇಶ್ವರ ಶಿಕ್ಷಣ ಸಂಸ್ಥೆಯ ಹಿಪ್ಟೋಕ್ಯಾಂಪಸ್ ಆಂಗ್ಲ ಮಾಧ್ಯಮ ಪ್ರಾಥಮಿಕ ಶಾಲೆಯ 2024-25ನೇ ಸಾಲಿನ ವಾರ್ಷಿಕೋತ್ಸವ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದ ಅವರು ಮೊಬೈಲ್ ಬಳಕೆಯಿಂದ ಅಪರಾಧಗಳ ಸಂಖ್ಯೆ ಹೆಚ್ಚಾಗುತ್ತಲಿದೆ, ಮಕ್ಕಳ ಉತ್ತಮ ವ್ಯಕ್ತಿತ್ವ ರೂಪಿಸುವಂತ ಸಾಧಕರ ಪುಸ್ತಕಗಳನ್ನು ಓದುವ ಪ್ರವತ್ತಿಯನ್ನು ಬೆಳೆಸಬೇಕು ಎಂದರು.
ಮುಖ್ಯ ಅತಿಥಿ ಸಾಹಿತಿ, ಪತ್ರಕರ್ತ ಬಾಲಶೇಖರ ಬಂದಿ ಮಾತನಾಡಿ ಮಕ್ಕಳ ಶೈಕ್ಷಣಿಕ ಬೆಳವಣಿಗೆಯಲ್ಲಿ ಶಾಲಾ ಸಂಕುಲದೊಂದಿಗೆ ತಂದೆ, ತಾಯಂದಿರ ಪಾತ್ರವು ಮಹತ್ವದಾಗಿದೆ. ಆಧುನಿಕತೆ ಮತ್ತು ಒತ್ತಡದ ಬದುಕಿನಲ್ಲಿ ಮಕ್ಕಳ ಶೈಕ್ಷಣಿಕ ಬೆಳವಣಿಗೆಗೆ ಗಮನ ನೀಡಬೇಕು ಎಂದರು.

ಮೂಡಲಗಿ ತಾಲ್ಲೂಕಿನ ಕಲ್ಲೋಳಿಯ ಬಸವೇಶ್ವರ ಹಿಪ್ಪೋಕ್ಯಾಂಪಸ್ ಆಂಗ್ಲ ಮಾಧ್ಯಮ ಪ್ರಾಥಮಿಕ ಶಾಲೆಯ ವಾರ್ಷಿಕೋತ್ಸವ ಸಮಾರಂಭವನ್ನು ಸಿಪಿಐ ಶ್ರೀಶೈಲ್ ಬ್ಯಾಕೂಡ ಉದ್ಘಾಟಿಸಿದರು. ಅತಿಥಿ ಬಾಲಶೇಖರ ಬಂದಿ, ಸಂಸ್ಥೆಯ ಅಧ್ಯಕ್ಷ ರಮೇಶ ಬೆಳಕೂಡ ಮತ್ತಿತರರು ಚಿತ್ರದಲ್ಲಿರುವರು.

ಸಂಸ್ಥೆಯ ಕಾರ್ಯದರ್ಶಿ ಡಾ. ಭೋಜರಾಜ ಬೆಳಕೂಡ ಮಾತನಾಡಿ ಗ್ರಾಮೀಣ ಭಾಗದ ಮಕ್ಕಳು ಪ್ರಸ್ತುತ್ತ ಸ್ಪರ್ಧಾತ್ಮಕ ಜUತ್ತನು ಎದುರಿಸವಲ್ಲಿ ಸಮರ್ಥವನ್ನಾಗಿಸುವುವುದು ಸಂಸ್ಥೆಯ ಉದ್ಧೇಶವಾಗಿದೆ. ಹಿಪ್ಟೋಕ್ಯಾಂಪಸ್ ಪ್ರಾಥಮಿಕ ಶಾಲೆಯಲ್ಲಿ ಪರಿಣಿತ ಶಿಕ್ಷಕ ವೃಂದವಿದ್ದು, ಮಕ್ಕಳ ಬೌದ್ಧಿಕ ಮತ್ತು ಶಾರೀರಿಕ ಬೆಳವಣಿಗೆಗೆ ಮಹತ್ವ ನೀಡಲಾಗುತ್ತಿದೆ ಎಂದರು.
ಸಂಸ್ಥೆಯ ಅಧ್ಯಕ್ಷ ರಮೇಶ ಬೆಳಕೂಡ ಸಾಧಕ ವಿದ್ಯಾರ್ಥಿಗಳಿಗೆ ಮತ್ತು ಪಾಲಕರಿಗೆ ಬಹುಮಾನ ವಿತರಿಸಿದರು.
ಶಾಲೆಯ ಸಮನ್ವಯಾಧಿಕಾರಿ ರಮೀಜಾ ಅನ್ನಿಗೇರಿ ಪ್ರಾಸ್ತಾವಿಕ ಮಾತನಾಡಿ ಶಾಲೆಯ ಕಾರ್ಯಚಟುವಟಿಕೆಗಳ ಬಗ್ಗೆ ತಿಳಿಸಿದರು.
ಸಂಸ್ಥೆಯ ಆಡಳಿತಾಧಿಕಾರಿ ಪ್ರಕಾಶ ಗರಗಟ್ಟಿ, ಎಚ್‍ಎಲ್‍ಸಿ ನಿರ್ದೇಶಕ ರಾಹುಲ ಉತ್ತೂರೆ, ಪ್ರಾಚಾರ್ಯ ಡಾ. ಎಸ್.ಎಸ್. ಹೂಗಾರ, ಮುಖ್ಯ ಶಿಕ್ಷಕರಾದ ಕೆ.ಎಂ. ಪೋಟಿ, ಆರ್.ಬಿ. ಹೆಬ್ಬಾಳ, ಜೆ.ಪಿ. ಮುತ್ನಾಳ, ನಾಗರಾಜ ಮಧುಸುದನ ವೇದಿಕೆಯಲ್ಲಿದ್ದರು.
ಖುಷಿ ಕಡಾಡಿ, ಸಚಿನ ಕುಂದರಗಿ ಸ್ವಾಗತಿಸಿದರು, ನಾಗಮಣಿ, ಹಬೀಬುಲ್ಲಾ ಕುಶಾಲ ವಂದಿಸಿದರು ನಿರೂಪಿಸಿದರು, ಸಿಂಧು ಜೋಡನಟ್ಟಿ ವಂದಿಸಿದರು.


Spread the love

About inmudalgi

Check Also

ಮಾರುತಿ ಕೋಳಿ ಅವರಿಗೆ ರಾಷ್ಟ್ರೀಯ ಪರಶುರಾಮ ಪ್ರಶಸ್ತಿ ಪ್ರಧಾನ

Spread the love ಮಾರುತಿ ಕೋಳಿ ಅವರಿಗೆ ರಾಷ್ಟ್ರೀಯ ಪರಶುರಾಮ ಪ್ರಶಸ್ತಿ ಪ್ರಧಾನ ಮೂಡಲಗಿ: ಕೆರಳಾದ ಶ್ರೀ ಶಟ್ ಶಾಸ್ತ್ರ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ