ಮೂಡಲಗಿ: ‘ಕಲ್ಲೋಳಿಯ ಶ್ರೀ ಬಸವೇಶ್ವರ ಸೌಹಾರ್ದ ಸಹಕಾರಿ ಸಂಘವು ಪ್ರಸಕ್ತ ಆರ್ಥಿಕ ವರ್ಷದ ಕೊನೆಯಲ್ಲಿ ರೂ.4.15 ಕೋಟಿ ನಿವ್ವಳ ಲಾಭವನ್ನು ಪಡೆದು ಪ್ರಗತಿಯಲ್ಲಿ ಸಾಗಿದೆ’ ಎಂದು ಸಂಘದ ಅಧ್ಯಕ್ಷ ಬಾಳಪ್ಪ ಬ. ಬೆಳಕೂಡ ಅವರು ಹೇಳಿದರು.
ತಾಲ್ಲೂಕಿನ ಕಲ್ಲೋಳಿಯ ಬಸವೇಶ್ವರ ಸೌಹಾರ್ದ ಸಹಕಾರಿ ಸಂಘದ ಸಭಾಭವನದಲ್ಲಿ 34ನೇ ವರ್ಷದ ಸರ್ವಸಾಧಾರಣಾ ಸಭೆಯನ್ನು ಉದ್ಧೇಶಿಸಿ ಮಾತನಾಡಿದ ಅವರು ಸದ್ಯ ಶೇರು ಬಂಡವಾಳ ರೂ. 78.96 ಲಕ್ಷ, ಠೇವುಗಳು ರೂ.78.84 ಕೋಟಿ, ನಿಧಿಗಳು ರೂ.22.92 ಕೋಟಿ, ಗುಂತಾವಣಿಗಳು ರೂ. 8.75 ಕೋಟಿ ಇದ್ದು, ದುಡಿಯುವ ಬಂಡವಾಳ ರೂ. 98.56 ಕೋಟಿ ಇರುವುದು ಮತ್ತು ಅಡಿಟ್‍ದಲ್ಲಿ ‘ಅ’ ಶ್ರೇಣಿ ಪಡೆದುಕೊಂಡಿದೆ ಎಂದು ತಿಳಿಸಿದರು.
ಸಂಘವು ಕಳೆದ 25 ವರ್ಷಗಳಿಂದ ಶೇ.100ರಷ್ಟು ಸಾಲ ವಸೂಲಾತಿ ಮಾಡಿದ್ದು, ಸದಸ್ಯರಿಗೆ ಶೇ. 25 ರಷ್ಟು ಲಾಭಾಂಶ ವಿತರಿಸಿರುವುದಲ್ಲದೆ ಮರಣ ಹೊಂದುವ ಸದಸ್ಯರ ಕುಟುಂಬಕ್ಕೆ ರೂ.5000 ಮರಣೋತ್ತರ ನಿಧಿಯನ್ನು ನೀಡಲಾಗುತ್ತಿದೆ. ಸದಸ್ಯರ ಮಕ್ಕಳು ಎಸ್‍ಎಸ್‍ಎಲ್‍ಸಿ
ಮತ್ತು ದ್ವಿತೀಯ ಪಿಯುಸಿಯಲ್ಲಿ ಉತ್ತಮ ಅಂಕ ಪಡೆದ ಮೂವರು ವಿದ್ಯಾರ್ಥಿಗಳಿಗೆ ಪ್ರತಿಭಾವಂತ ಪುರಸ್ಕಾರ ಧನ ನೀಡಲಾಗುತ್ತಿದೆ ಎಂದರು. ಗ್ರಾಹಕರಿಗೆ ಆರ್‍ಟಿಜಿಎಸ್, ನೆಪ್ಟ್, ಎಟಿಎಂ, ಇ-ಸ್ಟಾಂಪ್, ಸೇಪ್ ಲಾಕರ್ ಸೌಲಭ್ಯಗಳನ್ನು ಕಲ್ಪಿಸುವ ಮೂಲಕ ಗ್ರಾಮೀಣ ಭಾಗದ ಜನರಿಗೆ ಹಣಕಾಸಿ ವ್ಯವಹಾರದ ಪೂರ್ಣಪ್ರಮಾಣದ ಸೌಲಭ್ಯಗಳನ್ನು ಕಲ್ಪಿಸಿರುವ ಬಗ್ಗೆ ಸಂಘಕ್ಕೆ ಹೆಮ್ಮೆ ಇದೆ ಎಂದರು.
ಸಂಘದ ಉಪಾಧ್ಯಕ್ಷ ಶಿವರುದ್ರ ಬಿ. ಪಾಟೀಲ, ನಿರ್ದೇಶಕರಾದ ಬಸಗೌಡ ಪಾಟೀಲ, ಬಸವಣ್ಣೆಪ್ಪ ಗೋರೊಶಿ, ಮಲ್ಲಪ್ಪ ಖಾನಾಪುರ, ರಾಮಪ್ಪಾ ದಬಾಡಿ, ಹಣಮಂತ ಪರಕನಟ್ಟಿ, ಸುಭಾಷ ಖಾನಾಪುರ, ಬಸಪ್ಪಾ ಹೆಬ್ಬಾಳ, ದುಂಡವ್ವಾ ಕಡಾಡಿ, ಲಕ್ಷ್ಮೀಬಾಯಿ ಕಂಕಣವಾಡಿ, ಪ್ರಕಾಶ ಕಲಾಲ, ಮಹಮ್ಮದಶಫಿ ಮೋಕಾಸಿ, ಕಲ್ಲೋಳೆಪ್ಪ ತೆಳಗಡೆ, ಪ್ರಧಾನ ವ್ಯವಸ್ಥಾಪಕ ಹನಮಂತ ಖಾನಗೌಡ್ರ ವೇದಿಕೆಯಲ್ಲಿದ್ದರು.
ಐ.ಕೆ. ಹಿರೇಮಠ, ಆರ್.ಐ. ಖವಟಗೊಪ್ಪ ನಿರೂಪಿಸಿದರು.