ಮೂಡಲಗಿ: ಕಲ್ಲೋಳಿ ಪಿಕೆಪಿಎಸ್ ದಲ್ಲಿ ಆರಂಭಗೊಂಡ ಕೇಂದ್ರ ಸರಕಾರದ ಮಹಾತ್ವಾಕಾಂಕ್ಷೀ ಯೋಜನೆಯಾದ ಸಾಮಾನ್ಯ ಸೇವಾ ಕೇಂದ್ರವನ್ನು ಸದುಪಯೋಗಪಡಿಸಿಕೊಳ್ಳಬೇಕೆಂದು ಪಿಕೆಪಿಎಸ್ ಅಧ್ಯಕ್ಷ ಹಾಗೂ ಬಿಡಿಸಿಸಿ ಬ್ಯಾಂಕ ನಿರ್ದೇಶಕ ನೀಲಕಂಠ ಬಸಪ್ಪ ಕಪ್ಪಲಗುದ್ದಿ ಹೇಳಿದರು.
ತಾಲೂಕಿನ ಕಲ್ಲೋಳಿ ಪಟ್ಟಣದ ಶತಮಾನ ಪೂರೈಸಿದ ಪ್ರತಿಷ್ಠಿತ ವಿವಿದೋದ್ದೇಶ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರಿ ಸಂಘ ಆವರಣದಲ್ಲಿ ಸಾಮಾನ್ಯ ಸೇವಾ ಕೇಂದ್ರವನ್ನು ಉದ್ಘಾಟಿಸಿ ಮಾತನಾಡಿದರು.
ಈ ಸಂದರ್ಭದಲ್ಲಿ ಸಂಘದ ಉಪಾಧ್ಯಕ್ಷ ಭೀಮಪ್ಪ ಹಣಮಂತ ವ್ಯಾಪಾರಿ ನಿರ್ದೇಶಕರಾದ ಬಸವರಾಜ ಬೆಳಕೂಡ, ಮಲ್ಲಪ್ಪ ಕಡಾಡಿ, ಆನಂದ ಹೆಬ್ಬಾಳ, ಶಂಕರ ಗೋರೋಶಿ, ಬಸಪ್ಪ ಬಿ|| ಪಾಟೀಲ ಧರೀಶ ಖಾನಗೌಡ್ರ, ಮಹಾದೇವಿ ಖಾನಾಪೂರ, ಕೆಂಪವ್ವ ಗೋರೋಶಿ, ಮಲ್ಲಪ್ಪ ಪೂಜೇರಿ, ಧರ್ಮಣ್ಣ ನಂದಿ, ಬಿ.ಡಿ.ಸಿ.ಸಿ.ಬ್ಯಾಂಕ ಪ್ರತಿನಿಧಿ ವಸಂತ ತಹಶೀಲದಾರ, ಮುಖ್ಯಕಾರ್ಯನಿರ್ವಾಹಕ ಮಲ್ಲಪ್ಪ ಹೆಬ್ಬಾಳ, ಹಾಗೂ ಪರಪ್ಪ ಕಡಾಡಿ, ಮಾರುತಿ ಹೂಗಾರ ಗಿರಿಮಲ್ಲಪ್ಪ ಸಂಸುದ್ದಿ, ಮಹಾಂತೇಶ ಪಾಟೀಲ ಹಾಗೂ ಸಿಬ್ಬಂದಿವರ್ಗ ಉಪಸ್ಥಿತರಿದ್ದರು.