ಜನರು ಉತ್ತಮ ಆರೋಗ್ಯ ಕಾಯ್ದುಕೊಳ್ಳಬೇಕು
ಮೂಡಲಗಿ: ‘ಜನರು ರೋಗಗಳು ಬರದಂತೆ ಮುಂಜಾಗೃತೆ ಕ್ರವiಗಳನ್ನು ಅಳವಡಿಸಿಕೊಂಡು ಉತ್ತಮ ಆರೋಗ್ಯವನ್ನು ಕಾಯ್ದುಕೊಳ್ಳಬೇಕು’ ಘಟಪ್ರಭಾದ ಹಿರಿಯ ವೈದ್ಯ ಡಾ. ವಿಲಾಸ ನಾಯ್ಕವಾಡಿ ಹೇಳಿದರು.
ತಾಲ್ಲೂಕಿನ ಕಲ್ಲೋಳಿಯ ಗೌರಿಶಂಕರ ಅಕ್ಕನ ಬಳಗದ ಆಶ್ರಯದಲ್ಲಿ ಶಿರಢಾಣದ ಶಾಂತಲಿಂಗೇಶ್ವರ ಲೋಕಕಲ್ಯಾಣ ಟ್ರಸ್ಟ್‍ನ ಫಿಜಿಯೋಥೆರಪ ಮತ್ತು ವೆಲ್‍ನೆಸ್ ಕೇಂದ್ರದಿಂದ ಉಚಿತ ಮೊಣಕಾಲು ನೋವು ತಪಾಸಣೆ ಮತ್ತು ಚಿಕಿತ್ಸೆಯ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದ ಅವರು ಉತ್ತಮ ಆರೋಗ್ಯಕ್ಕಾಗಿ ಸರಿಯಾದ ಆಹಾರ ಕ್ರಮ ಮತ್ತು ನಿತ್ಯ ದೈಹಿಕ ವ್ಯಾಯಾಮವು ಅವಶ್ಯವಿದೆ ಎಂದರು.
ಬಸವರಾಜ ಹಿರೇಮಠ ಪ್ರಾಸ್ತಾವಿಕ ಮಾತನಾಡಿ ಔಷಧಿ ಮತ್ತು ಶಸ್ತ್ರಚಿಕಿತ್ಸೆ ಇಲ್ಲದೆ ಮೊಣಕಾಲು ನೋವು ನಿವಾರಣೆ ಮಾಡುವ ಚಿಕಿತ್ಸೆ ಪದ್ದತಿಯಾಗಿದ್ದು, ಜನರು ಶಿಬಿರದ ಸದುಪಯೋಗವನ್ನು ಪಡೆದುಕೊಳ್ಳಬೇಕು ಎಂದರು.
ಗೌರಿಶಂಕರ ಅಕ್ಕನ ಬಳದಗದ ಅಧ್ಯಕ್ಷೆ ರಾಜಶ್ರೀ ಹಿರೇಮಠ ಅಧ್ಯಕ್ಷತೆವಹಿಸಿದ್ದರು.
ಡಾ. ಅಶೋಕ ಪಾಟೀಲ, ವಿಶ್ವಕರ್ಮ ಸಮಾಜ ಮುಖಂಡ ಭಗವಂತ ಪತ್ತಾರ, ಡಾ. ಮುತ್ತುರಾಜ, ಕೆ.ಪಿ. ಕಳ್ಳಿಮಠ, ಅಪ್ಪಾಸಾಬ ಮಳವಾಡ, ರಾಜು ಹಿರೇಮಠ, ಮೃತ್ಯುಂಜಯ ಹಿರೇಮಠ, ಮಂಜುಳಾ ಹಿರೇಮಠ, ಜ್ಯೋತಿ ರಾಮದುರ್ಗ, ಜ್ಯೋತಿ ಹಿರೇಮಠ, ಶಿವಲೀಲಾ ಹೂಗಾರ ಇದ್ದರು.
ಶಿಬಿರದಲ್ಲಿ 75ಕ್ಕೂ ಅಧಿಕ ಜನರು ಶಿಬಿರದ ಪ್ರಯೋಜನವನ್ನು ಪಡೆದುಕೊಂಡರು.