Breaking News
Home / Recent Posts / *ಕಲ್ಲೋಳಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಸಂಘದ ಶೇರುದಾರಿಗೆ ಶೇ.5 ರಷ್ಟು ಲಾಭಾಂಶ ಘೋಷಿಸಿದ ಸಂಘದ ಅಧ್ಯಕ್ಷ ಮಲ್ಲಪ್ಪ ಕಡಾಡಿ*

*ಕಲ್ಲೋಳಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಸಂಘದ ಶೇರುದಾರಿಗೆ ಶೇ.5 ರಷ್ಟು ಲಾಭಾಂಶ ಘೋಷಿಸಿದ ಸಂಘದ ಅಧ್ಯಕ್ಷ ಮಲ್ಲಪ್ಪ ಕಡಾಡಿ*

Spread the love

*ಕಲ್ಲೋಳಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಸಂಘದ ಶೇರುದಾರಿಗೆ ಶೇ.5 ರಷ್ಟು ಲಾಭಾಂಶ ಘೋಷಿಸಿದ ಸಂಘದ ಅಧ್ಯಕ್ಷ ಮಲ್ಲಪ್ಪ ಕಡಾಡಿ*

ಮೂಡಲಗಿ: ಕಲ್ಲೋಳಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘವು ಗ್ರಾಹಕರಿಗೆ ಕೃಷಿಗೆ ಪೂರಕವಾದ ವಿವಿಧ ತೇರನಾದ ಸಾಲ ಸೌಲಭ್ಯ ನೀಡುವದರ ಜೊತೆಗೆ ಸಾಮಾಜಿಕ, ಶೈಕ್ಷಣಿಕವಾಗಿ ಕಾರ್ಯಮಾಡುತ್ತಾ ಹಾಗೂ ಗ್ರಾಹಕರಿಗೆ ವಿವಿಧ ಸೌಲಭ್ಯವನ್ನು ನೀಡಿ ಕಳೆದ ಮಾರ್ಚ ಅಂತ್ಯಕ್ಕೆ 43.98 ಲಕ್ಷ ರೂ ಲಾಭಗಳಿಸಿ ಪ್ರಗತಿ ಪಥದತ್ತ ಸಾಗಿದೆ. ಸಂಘದ ಶೇರುದಾರಿಗೆ ಶೇ.5 ರಷ್ಟು ಲಾಭಾಂಶ ವಿತರಿಸಲಾಗುವುದು ಎಂದು ಪಿಕೆಪಿಎಸ್ ಅಧ್ಯಕ್ಷ ಮಲ್ಲಪ್ಪ ಪರಪ್ಪ ಕಡಾಡಿ ಹೇಳಿದರು.
ಅವರು ಮೂಡಲಗಿ ತಾಲೂಕಿನ ಕಲ್ಲೋಳಿ ಪಟ್ಟಣದ ಶತಮಾನ ಪೂರೈಸಿದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ 2022-24ನೇ ಸಾಲಿನ 110ನೇ ವಾರ್ಷಿಕ ಸರ್ವಸಾಧಾರಣ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ, ಸಂಘವು ಕಳೆದ 110 ವರ್ಷಗಳಿಂದ ಸಹಕಾರ ಕ್ಷೇತ್ರದಲ್ಲಿ ಪ್ರಗತಿಯನ್ನು ಸಾಧಿಸುತ್ತ ಬಂದಿದೆ. ಗ್ರಾಹಕರಿಗೆ ವಾಹನ ಸಾಲ, ಬೆಳೆಸಾಲ, ಹೈಣುಗಾರಿಕೆಗೆ ಸಾಲ, ಸೇರಿದಂತೆ ಒಟ್ಟು 16.28.ಕೋಟಿ ಸಾಲ ವಿತರಿಸಲಾಗಿದು. ಸಂಘದ ಗ್ರಾಹಕರಿಗೆ ತ್ವರಿತಗತಿಯಲ್ಲಿ ಸೇವೆಸಲ್ಲಿಸಲು ಸಂಪೂರ್ಣ ಗಣಕೀಕರಣಗೊಂಡಿದು, ಆಡಳಿತ ಮಂಡಳಿ ಮತ್ತು ಸಿಬ್ಬಂದಿ ವರ್ಗದವರ ನಿಸ್ವಾರ್ಥ ಸೇವೆಯಿಂದ ಶೇ.100 ರಷ್ಟು ವಸೂಲಾತಿ ಹೊಂದಿದೆ ಎಂದ ಅವರು ಸಂಘದ ಪ್ರಗತಿಗಾಗಿ ಅಮೂಲ್ಯವಾದ ಸಲಹೆ ಸೂಚನೆಗಳನ್ನು ಕೊಟ್ಟು ಸಹಕರಿಸುತ್ತಿರುವ ಶಾಸಕ ಬಾಲಚಂದ್ರ ಜಾರಕಿಹೊಳಿ, ಬಿಡಿಸಿಸಿ ಬ್ಯಾಂಕ್ ಅಧ್ಯಕ್ಷ ರಮೇಶ ಕತ್ತಿ, ಉಪಾಧ್ಯಕ್ಷ ಎಸ್.ಜಿ.ಢವಳೇಶ್ವರ ಮತ್ತು ಸಹಕಾರಿ ಇಲಾಖೆಯ ಮತ್ತು ಬಿಡಿಸಿಸಿ ಬ್ಯಾಂಕ್ ಅಧಿಕಾರಿಗಳನ್ನು ಸ್ಮರಿಸಿದರು.
ಸಭೆಯ ವೇದಿಕೆಯಲ್ಲಿ ಸಂಘದ ಉಪಾಧ್ಯಕ್ಷ ಸಿದ್ದಪ್ಪ ವ್ಯಾಪಾರಿ, ನಿರ್ದೇಶಕರಾದ ಬಸವರಾಜ ಬೆಳಕೂಡ, ಬಾಳಪ್ಪ ಕಂಕಣವಾಡಿ, ಈರಪ್ಪ ಹೆಬ್ಬಾಳ, ಬಸವಂತ ದಾಸನವರ, ನೀಲಕಂಠ ಕಪ್ಪಲಗುದ್ದಿ, ವಸಂತ ತಹಶೀಲದಾರ, ಕೆಂಪವ್ವ ಗೋರೋಶಿ, ಪಾರ್ವತೆವ್ವ ಖಾನಗೌಡ್ರ, ಯಮನಪ್ಪ ಗೋಕಾಂವಿ, ಧರ್ಮಣ್ಣ ನಂದಿ ಉಪಸ್ಥಿತರಿದ್ದರು.
ಸಂಘದ ಮುಖ್ಯ ಕಾರ್ಯನಿರ್ವಾಹಕ ಬಸವರಾಜ ಬಾಗೇವಾಡಿ ವಾರ್ಷೀಕ ವರದಿ ಮಂಡಿಸಿದರು ಸಂಘದ ಲೆಕ್ಕಿಗ ಮಲ್ಲಪ್ಪ ಹೆಬ್ಬಾಳ ನಿರೂಪಿಸಿ ವಂದಿಸಿದರು.


Spread the love

About inmudalgi

Check Also

‘ಮೂಡಲಗಿಯಲ್ಲಿ ನ.23-24 ರಂದು 16ನೇ ಜಿಲ್ಲಾ ಸಾಹಿತ್ಯ ಸಮ್ಮೇಳನ’

Spread the love‘ಮೂಡಲಗಿಯಲ್ಲಿ ನ.23-24 ರಂದು 16ನೇ ಜಿಲ್ಲಾ ಸಾಹಿತ್ಯ ಸಮ್ಮೇಳನ’ ಜನಮನ ಸೇಳೆದ ಕನ್ನಡ ಬುತ್ತಿ ಜಾತ್ರೆ ಕಾರ್ಯಕ್ರಮ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ