Breaking News
Home / Recent Posts / ಶ್ರೀ ಮಹಾಲಕ್ಷ್ಮೀ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ವತಿಯಿಂದ ಹೊಸ ಟ್ರಾಕ್ಟರ್ ಮತ್ತು ಕೃಷಿ ಉಪಕರಣಗಳ ವಿತರಣೆ

ಶ್ರೀ ಮಹಾಲಕ್ಷ್ಮೀ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ವತಿಯಿಂದ ಹೊಸ ಟ್ರಾಕ್ಟರ್ ಮತ್ತು ಕೃಷಿ ಉಪಕರಣಗಳ ವಿತರಣೆ

Spread the love

ಮೂಡಲಗಿ: ಸಹಕಾರಿ ಸಂಸ್ಥೆಗಳ ಮುಖಾಂತರ ಕೃಷಿ ಚಟುವಟಿಕೆಗಳನ್ನು ಸುರಳಿತಗೊಳಿಸುವ ಸಲುವಾಗಿ ಯಾಂತ್ರಿಕ ವ್ಯವಸ್ಥೆಗಳಿಗೆ ಹೆಚ್ಚು ಅನುಕೂಲವಾಗುತ್ತದೆ. ರೈತರು ಇದರ ಪ್ರಯೋಜನ ಪಡೆದು ಕೃಷಿ ಲಾಭದಾಯಕ ಉದ್ಯಮವಾಗಿ ಪರಿವರ್ತಿಸಬೇಕಾದ ಅಗತ್ಯವಿದೆ ಎಂದು ರಾಜ್ಯಸಭಾ ಸಂಸದ ಹಾಗೂ ಸಂಸ್ಥಾಪಕ ಅಧ್ಯಕ್ಷ ಈರಣ್ಣ ಕಡಾಡಿ ಹೇಳಿದರು
ರವಿವಾರ ನ-05 ರಂದು ಕಲ್ಲೋಳಿ ಪಟ್ಟಣದ ಶ್ರೀ ಮಹಾಲಕ್ಷ್ಮೀ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ವತಿಯಿಂದ ಪ್ರಗತಿ ಪರ ರೈತ ಹಣಮಂತ ಸಿದ್ದಪ್ಪ ಐದುಡ್ಡಿ ಅವರಿಗೆ ಹೊಸ ಟ್ರಾಕ್ಟರ್ ಮತ್ತು ಕೃಷಿ ಉಪಕರಣಗಳನ್ನು ವಿತರಿಸುವ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದರು.
ರೈತರ ಅಭ್ಯುದಯಕ್ಕಾಗಿ ಸಹಕಾರಿ ಕ್ಷೇತ್ರದ ಪರಿಣಾಮಕಾರಿ ಬಳಕೆ ಅಗತ್ಯ “ಸಹಕಾರ ಸೇ ಸಮೃದ್ಧಿ” ಎನ್ನುವ ಘೋಷ ವಾಕ್ಯದೊಂದಿಗೆ ದೇಶದ ಇತಿಹಾಸದಲ್ಲಿ ಸಹಕಾರಿ ಕ್ಷೇತ್ರದ ಮೂಲಕ ಗ್ರಾಮೀಣ ಭಾಗದ ಜನರ ಮತ್ತು ರೈತರ ಜೀವನ ಮಟ್ಟವನ್ನು ಸುಧಾರಿಸುವ ಸಲುವಾಗಿ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ನೇತೃತ್ವದ ಕೇಂದ್ರ ಸರ್ಕಾರವು ರೈತರಿಗಾಗಿ ಹಲವಾರು ಯೋಜನೆಗಳನ್ನು ರೂಪಿಸಿದೆ. ಅವುಗಳ ಉಪಯೋಗ ಪಡೆದುಕೊಂಡು ಕೃಷಿ ಕ್ಷೇತ್ರದಲ್ಲಿ ಅಮೂಲಾಗ್ರ ಬದಲಾವಣೆಯನ್ನು ತರಲು ರೈತರು ಮುಂದೆ ಬರಬೇಕೆಂದು ಕರೆ ನೀಡಿದರು.
ಸಂಘದ ಹಾಗೂ ಬಿಡಿಸಿಸಿ ಬ್ಯಾಂಕ್ ನಿರ್ದೇಶಕ ಸತೀಶ ಕಡಾಡಿ ಮಾತನಾಡಿ ಸಹಕಾರಿ ಸಂಘಗಳ ಏಳಿಗೆ ಮತ್ತು ರೈತರ ಏಳಿಗೆ ಒಂದೇ ನಾಣ್ಯದ ಎರಡು ಮುಖಗಳಿದಂತೆ. ಪರಸ್ಪ ಸಹಕಾರದೊಂದಿಗೆ ಪರಸ್ಪರ ಅಭಿವೃದ್ಧಿ ಹೊಂದಬೇಕಾದ ಬದ್ಧತೆ ಎಲ್ಲರಲ್ಲೂ ಇರಬೇಕೆಂದರು. ಗ್ರಾಮೀಣ ಭಾಗದಲ್ಲಿ ರೈತರಿಗೆ ಅಗತ್ಯವಿರುವ ಗೋದಾಮುಗಳು, ಶೀಥಲೀಕರಣ ಕೇಂದ್ರ, ಮಣ್ಣು ಪರೀಕ್ಷಾ ಕೇಂದ್ರ, ತೂಕದ ಸೇತುವೆ ಸೇರಿದಂತೆ 150 ಪ್ರಕಾರದ ಉದ್ಯೋಗಗಳನ್ನು ನಡೆಸಲು ನಬಾರ್ಡ ಮತ್ತು ಬಿಡಿಸಿಸಿ ಬ್ಯಾಂಕ್ ಮಧ್ಯಸ್ಥಿಕೆಯಲ್ಲಿ ಶೇ. 1 ರಷ್ಟು ಬಡ್ಡಿದರದಲ್ಲಿ 2 ಕೋಟಿ ರೂ.ಗಳವರೆಗೆ ಸಾಲ ನೀಡಲು ಕೇಂದ್ರ ಸರ್ಕಾರ ಯೋಜನೆ ರೂಪಿಸಿದೆ ಇವುಗಳ ಸದುಯೋಗ ಪಡೆಸಿಕೊಂಡು ಸಹಕಾರಿ ಸಂಘಗಳ ಬೆಳವಣೆಗಾಗಿ ಗೋಕಾಕ ಹಾಗೂ ಮೂಡಲಗಿ ತಾಲೂಕಿನ ಸಹಕಾರಿ ಸಂಘಗಳು ಮುಂದೆ ಬರಬೇಕೆಂದರು.
ಉಪಾಧ್ಯಕ್ಷ ಅಡಿವೆಪ್ಪ ಕುರಬೇಟ, ನಿರ್ದೇಶಕರಾದ ಕಾಡೇಶ ಗೊರೋಶಿ, ತುಕಾರಾಮ ಪಾಲ್ಕಿ, ಮಲ್ಲಪ್ಪ ಹೆಬ್ಬಾಳ, ಗುರುನಾಥ ಮದಭಾವಿ, ಸಿದ್ದಪ್ಪ ಗದಾಡಿ, ಅಶೋಕ ತಳವಾರ, ದಸ್ತಗೀರಸಾಬ ಕಮತನೂರ. ಪ್ರಮುಖರಾದ ಭಗವಂತ ಪಾಟೀಲ, ಗುರಸಿದ್ದಪ್ಪ ಮುರಾರಿ, ಪರಪ್ಪ ಕಡಾಡಿ, ಸೇವಾ ಸಂಸ್ಥೆ ಅಧ್ಯಕ್ಷ ಪರಪ್ಪ ಗಿರೆಣ್ಣವರ, ಡಿಸಿಸಿ ಬ್ಯಾಂಕ್ ನಿರೀಕ್ಷಕ ಎ.ಕೆ.ಮಳವಾಡ, ಮುಖ್ಯ ಕಾರ್ಯನಿರ್ವಾಹಕ ಶಿವಾನಂದ ಬಡಿಗೇರ, ಮಂಜುನಾಥ ಪೆÇೀತದಾರ, ಮಹೀಂದ್ರಾ ಟ್ಯಾಕ್ಟ್ರರ್ಸ ಕಂಪನಿ ಮಾರಾಟ ವಿಭಾಗದ ಮಲ್ಲಿಕಾರ್ಜುನ ಬೆಳವಿ, ಸೇರಿದಂತೆ ಅನೇಕ ಸಹಕಾರಿ ಸಂಘದ ಸದಸ್ಯರು, ಪಕ್ಷದ ಕಾರ್ಯಕರ್ತರು ಉಪಸ್ಥಿತರಿದ್ದರು.


Spread the love

About inmudalgi

Check Also

‘ಮೂಡಲಗಿಯಲ್ಲಿ ನ.23-24 ರಂದು 16ನೇ ಜಿಲ್ಲಾ ಸಾಹಿತ್ಯ ಸಮ್ಮೇಳನ’

Spread the love‘ಮೂಡಲಗಿಯಲ್ಲಿ ನ.23-24 ರಂದು 16ನೇ ಜಿಲ್ಲಾ ಸಾಹಿತ್ಯ ಸಮ್ಮೇಳನ’ ಜನಮನ ಸೇಳೆದ ಕನ್ನಡ ಬುತ್ತಿ ಜಾತ್ರೆ ಕಾರ್ಯಕ್ರಮ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ