Breaking News
Home / ರಾಜ್ಯ / ಅ.22 ರಂದು ಕಲ್ಲೋಳಿ ಕಾಲೇಜುದಲ್ಲಿ ಉದ್ಯೋಗ ಮೇಳ

ಅ.22 ರಂದು ಕಲ್ಲೋಳಿ ಕಾಲೇಜುದಲ್ಲಿ ಉದ್ಯೋಗ ಮೇಳ

Spread the love

ಮೂಡಲಗಿ ತಾಲ್ಲೂಕಿನ ಕಲ್ಲೋಳಿಯ ರಾಮಲಿಂಗೇಶ್ವರ ಶಿಕ್ಷಣ ಸಂಸ್ಥೆಯ ಎಸ್‍ಆರ್‍ಇಎಸ್ ಕಾಲೇಜುದಲ್ಲಿ ಏರ್ಪಡಿಸಿರುವ ಉದ್ಯೋಗ ಮೇಳದ ಪ್ರಚಾರ ಪತ್ರಿಕೆಯನ್ನು ಸಂಸ್ಥೆಯ ಅಧ್ಯಕ್ಷ ಬಸಗೌಡ ಪಾಟೀಲ ಶನಿವಾರ ಬಿಡುಗಡೆ ಮಾಡಿದರು.

ಅ.22 ರಂದು ಕಲ್ಲೋಳಿ ಕಾಲೇಜುದಲ್ಲಿ ಉದ್ಯೋಗ ಮೇಳ

ಮೂಡಲಗಿ: ತಾಲ್ಲೂಕಿನ ರಾಮಲಿಂಗೇಶ್ವರ ಶಿಕ್ಷಣ ಸಂಸ್ಥೆಯ ಎಸ್‍ಆರ್‍ಇಎಸ್ ಪ್ರಥಮ ದರ್ಜೆ ಕಾಲೇಜು ಹಾಗೂ ಕರಾವಳಿ ಟೀಚರ್ಸ ಹೆಲ್ಪ ಲೈನ್ ಇವರ ಸಯಯೋಗದಲ್ಲಿ ಅ. 22ರಂದು ಜಿಲ್ಲಾ ಮಟ್ಟದ ಉದ್ಯೋಗ ಮೇಳವನ್ನು ಏರ್ಪಡಿಸಿರುವರು.
ಉದ್ಯೋಗ ಮೇಳದ ಮಾಹಿತಿ ಮತ್ತು ಪ್ರಚಾರ ಪತ್ರಿಕೆಯನ್ನು ಸಂಸ್ಥೆಯ ಅಧ್ಯಕ್ಷ ಬಸಗೌಡ ಪಾಟೀಲ ಅವರು ಕಾಲೇಜುದಲ್ಲಿ ಬಿಡುಗಡೆಗೊಳಿಸಿ ಮಾತನಾಡಿ ‘ಗ್ರಾಮೀಣ ಭಾಗದ ನಿರದ್ಯೋಗ ಯುವಕರಿಗೆ ಉದ್ಯೋಗ ಮೇಳದಲ್ಲಿ ಸಾಕಷ್ಟು ಅವಕಾಶಗಳು ಇದ್ದು, ಮೇಳದ ಉಪಯೋಗವನ್ನು ಪಡೆದುಕೊಳ್ಳಬೇಕು’ ಎಂದರು.
ಮಹಾವಿದ್ಯಾಲಯದ ಪ್ರಾಚಾರ್ಯ ಡಾ. ಸುರೇಶ ಹನಗಂಡಿ ಮಾತನಾಡಿ ಉದ್ಯೋಗಾಕಾಂಕ್ಷಿ ಯುವಕ, ಯುವತಿಯರಿಗೆ ನೇರ ಸಂದರ್ಶನದ ಮೂಲಕ ಪ್ರತಿಷ್ಠಿತ ಶಾಲೆ, ಕಾಲೇಜುಗಳು, ಬ್ಯಾಂಕಿಂಗ್ ಕ್ಷೇತ್ರ ಮತ್ತು ಎಂಎನ್‍ಸಿ ಕಂಪನಿಗಳಲ್ಲಿ ನೇರ ನೇಮಕಾತಿ ಹೊಂದುವ ಅವಕಾಶಗಳಿವೆ ಎಂದರು.
ಎಸ್‍ಎಸ್‍ಎಲ್‍ಸಿಯಿಂದ ಹಿಡಿದು ಕಲಾ, ವಾಣಿಜ್ಯ, ವಿಜ್ಞಾನ, ಎಂಜಿನಿಯರಿಂಗ ಪದವಿ ಮತ್ತು ಸ್ನಾತಕೋತ್ತರ ಪದವಿಯವರೆಗೆ ಮೇಳದಲ್ಲಿ ಉದ್ಯೋಗದ ಅವಕಾಶಗಳು ಇವೆ ಎಂದು ತಿಳಿಸಿದ್ದಾರೆ.
ಮೇಳದಲ್ಲಿ ಭಾಗವಹಿಸುವ ಅಭ್ಯರ್ಥಿಗಳು ವಿದ್ಯಾರ್ಹತೆಯ ಮೂಲ ದಾಖಾಲಾತಿಗಳೊಂದಿಗೆ ಹಾಜರಾಗಬೇಕು ಎಂದು ತಿಳಿಸಿದ್ದಾರೆ.
ಸಂಸ್ಥೆಯ ನಿರ್ದೇಶಕರಾದ ಸಾತಪ್ಪಾ ಖಾನಾಪುರ, ಎಂ.ಡಿ. ಕುರಬೇಟ, ಎನ್‍ಎಸ್‍ಎಸ್ ಯೋಜನಾಧಿಕಾರಿ ಶಂಕರ ನಿಂಗನೂರ, ಬಿ.ಕೆ. ಸೊoಟನವರ ಇದ್ದರು.
ಅಧಿಕ ಮಾಹಿತಿಗಾಗಿ ಮೊ. 9448003682, 9743218480 ಸಂಪರ್ಕಿಸಲು ತಿಳಿಸಿದ್ದಾರೆ.


Spread the love

About inmudalgi

Check Also

ಮಾರುತಿ ಕೋಳಿ ಅವರಿಗೆ ರಾಷ್ಟ್ರೀಯ ಪರಶುರಾಮ ಪ್ರಶಸ್ತಿ ಪ್ರಧಾನ

Spread the love ಮಾರುತಿ ಕೋಳಿ ಅವರಿಗೆ ರಾಷ್ಟ್ರೀಯ ಪರಶುರಾಮ ಪ್ರಶಸ್ತಿ ಪ್ರಧಾನ ಮೂಡಲಗಿ: ಕೆರಳಾದ ಶ್ರೀ ಶಟ್ ಶಾಸ್ತ್ರ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ