ಕಲ್ಲೋಳಿಯಲ್ಲಿ ಮಾ.15ರಂದು
ರಾಜ್ಯ ಮಟ್ಟದ ಭಜನಾ ಸ್ಪರ್ಧೆ
ಮೂಡಲಗಿ: ‘ತಾಲ್ಲೂಕಿನ ಕಲ್ಲೋಳಿ ಸಿದ್ಧಾರೂಢ
ಮಠದಲ್ಲಿ ಇಂಚಲದ ಸಾಧು ಸಂಸ್ಥಾನದ ಶಿವಾನಂದ
ಭಾರತಿ ಸ್ವಾಮೀಜಿಗಳ ಅಮೋಘ 55ನೇ ವರ್ಷದ
ಆಗಮನ ಮಹೋತ್ಸವ ಅಂಗವಾಗಿ ಮಾ. 15ರಂದು
7ನೇ ವರ್ಷದ ರಾಜ್ಯ ಮಟ್ಟದ ಭಜನಾ ಸ್ಪರ್ಧೆಯನ್ನು ಏರ್ಪಡಿಸಲಾಗಿದೆ’ ಎಂದು ಕಾರ್ಯಕ್ರಮದ ಸಂಚಾಲಕ ಭಗವಂತ ಪತ್ತಾರ ಅವರು ತಿಳಿಸಿದರು.
ಶುಕ್ರವಾರ ಸಿದ್ಧಾರೂಢ ಮಠದಲ್ಲಿ ರಾಜ್ಯ ಮಟ್ಟದ ಭಜನಾ ಸ್ಪರ್ಧೆ ಹಾಗೂ ಕಾರ್ಯಕ್ರಮದ ಪ್ರಚಾರ ಪತ್ರಿಕೆಯ ಬಿಡಗಡೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ರಾಜ್ಯ ಮಟ್ಟದ ಭಜನಾ ಸ್ಪರ್ಧೆಯ ಪ್ರಥಮ
ಬಹುಮಾನ ರೂ.31,000, ದ್ವಿತೀಯ ರೂ. 26,000,
ತೃತೀಯ ರೂ.21,000, ಚತುರ್ಥ ರೂ.16,000
ಹಾಗೂ ಸಮಾಧಾನಕರ ಎರಡು ಬಹುಮಾನ ತಲಾ
ರೂ.4,000 ನಗದು ಬಹುಮಾನಗಳು ಹಾಗೂ
ಪ್ರಮಾಣ ಪತ್ರಗಳನ್ನು ನೀಡಲಾಗುವುದು ಎಂದು ತಿಳಿಸಿದರು.
ಮಾ.15, ಭಾನುವಾರದಂದು ಬೆಳಿಗ್ಗೆ 9ಕ್ಕೆ ಭಜನಾ
ಸ್ಪರ್ಧೆಯ ಉದ್ಘಾಟನಾ ಸಮಾರಂಭದ
ಸಾನ್ನಿಧ್ಯವನ್ನು ಇಂಚಲದ ಸಾಧು ಸಂಸ್ಥಾನ
ಮಠದ ಡಾ. ಶಿವಾನಂದ ಭಾರತಿ ಸ್ವಾಮೀಜಿ, ಇಂಚಲದ
ಪೂರ್ಣಾನಂದ ಭಾರತಿ ಸ್ವಾಮೀಜಿ, ಹಡಗಿನಾಳದ
ಮಲ್ಲೇಶ್ವರ ಶರಣರು, ಹುಬ್ಬಳ್ಳಿಯ ಸಿದ್ಧಾರೂಢ ಟ್ರಸ್ಟ್ ಕಮಿಟಿ ಧರ್ಮದರ್ಶಿ ಶ್ಯಾಮಾನಂದ ಪೂಜಾರಿ ಇವರು ಭಾಗವಹಿಸುವರು ಎಂದು ತಿಳಿಸಿದರು.
ಭಜನಾ ಸ್ಪರ್ಧೆಗೆ ದೇಣಿಗೆ ಹಾಗೂ ಬಹುಮಾನಗಳ ಪ್ರಾಯೋಜಕರಿಗೆ, ಅನ್ನದಾನಿಗಳಿಗೆ ಸೇರಿದಂತೆ ದಾನಿಗಳಿಗೆ ಸಮಾರಂಭದಲ್ಲಿ ಸನ್ಮಾನ ಇರುವುದು ಎಂದರು.
ಈ ಸಂದರ್ಭದಲ್ಲಿ ಭಜನಾ ಸ್ಪರ್ಧೆಯ ಸಂಘಟಕರಾದ ಭೀಮಶೆಪ್ಪಾ ಖಾನಾಪೂರ, ಭಗವಂತ ಪತ್ತಾರ, ಬಸವರಾಜ ಸಂಪಗಾಂವ, ಸಾತಪ್ಪ ಖಾನಾಪೂರ, ಸತ್ತೆಪ್ಪ ಖಾನಾಪೂರ, ಅರ್ಜುನ ಚಿಕ್ಕೋಡಿ, ಮಹಾಂತೇಶ ಹಮ್ಮಿನವರ, ಶ್ರೀಶೈಲ್ ಪಾಟೀಲ, ಶಿವಾನಂದ ಮಳವಾಡ, ಬಸವರಾಜ ಮರಗನ್ನವರ, ಭೀಮಪ್ಪ ಖಾನಾಪೂರ, ವಿವೇಕಾನಂದ ಹಾಳಕಿ, ಶಶಿಕಾಂತ ಕಡಲಗಿ ಇದ್ದರು.
ಸ್ಪರ್ಧೆಯಲ್ಲಿ ಭಾಗವಹಿಸುವವರು, ಮಾಹಿತಿಗಾಗಿ
ಮೊ. 9342153155, 9731698680 ಸಂಪರ್ಕಿಸಲು
ತಿಳಿಸಿದ್ದಾರೆ.
IN MUDALGI Latest Kannada News