ಇಂದು ಕನ್ನಡ ಸಾಹಿತ್ಯ ಪರಿಷತ್ ಸಂಸ್ಥಾಪನ ದಿನಾಚರಣೆ ಆಚರಣೆ

ಮೂಡಲಗಿ: ಮೂಡಲಗಿ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್‍ವು ಕನ್ನಡ ಸಾಹಿತ್ಯ ಪರಿಷತ್‍ನ 108ನೇ ಸಂಸ್ಥಾಪನಾ ದಿನಾಚರಣೆ ಹಾಗೂ ಕವಿಗೋಷ್ಠಿಯನ್ನು ಮೇ 5ರಂದು ಬೆಳಿಗ್ಗೆ 9.30ಕ್ಕೆ ಸ್ಥಳೀಯ ಶ್ರೀಪಾದಬೋಧ ಸರ್ಕಾರಿ ಪ್ರಥಮ ದರ್ಜೆ ಮಹಾವಿದ್ಯಾಲಯದಲ್ಲಿ ಏರ್ಪಡಿಸಿರುವರು.
ಮಹಾವಿದ್ಯಾಲಯದ ಪ್ರಾಚಾರ್ಯ ಶಾನೂರಕುಮಾರ ಗಾಣಿಗೇರ ಅಧ್ಯಕ್ಷತೆವಹಿಸುವರು. ಸಾಹಿತಿ ಡಾ. ಮಹಾದೇವ ಜಿಡ್ಡಿಮನಿ ಕಾರ್ಯಕ್ರಮ ಉದ್ಘಾಟಿಸಿವರು. ಸಾಹಿತಿ ಬಾಲಶೇಖರ ಬಂದಿ ಉಪನ್ಯಾಸ ನೀಡುವರು. ಕವಿಗೋಷ್ಠಿಯ ಅಧ್ಯಕ್ಷತೆಯನ್ನು ಪ್ರೊ. ಬಿ.ಸಿ. ಹೆಬ್ಬಾಳವಹಿಸುವರು. ಅತಿಥಿಗಳಾಗಿ ಕಸಾಪ ನಿಕಟಪೂರ್ವ ಅಧ್ಯಕ್ಷ ಸಿದ್ರಾಮ ದ್ಯಾಗಾನಟ್ಟಿ ಭಾಗವಹಿಸುವರು ಎಂದು ಕಸಾಪ ಅಧ್ಯಕ್ಷ ಡಾ. ಸಂಜಯ ಶಿಂಧಿಹಟ್ಟಿ ತಿಳಿಸಿರುವರು.
IN MUDALGI Latest Kannada News