ಮೂಡಲಗಿ: ರಾಜ್ಯದ್ಯಾಂತ ಯಶಸ್ವಿಯಾಗಿ “ಸ್ತ್ರೀ ಶಕ್ತಿ ಯೋಜನೆಯ” ಎರಡು ವರ್ಷ ಪೂರೈಸಿದ ಮತ್ತು 5 ನೂರು ಕೋಟಿ ಮಹಿಳಾ ಪ್ರಯಾಣಿಕರ ದಾಟಿದ ಹಿನ್ನಲೇ ಸೋಮವಾರದಂದು ಮೂಡಲಗಿ ಬಸ್ ನಿಲ್ದಾಣದಲ್ಲಿ ಬಸ್‍ಗೆ ವಿಶೇಷ ಪೂಜೆ ಸಲ್ಲಿಸಿ ಹಾಗೂ ಸಿಹಿ ವಿತರಿಸಿ ಸಂಭ್ರಮಾಚರಣೆ ಮಾಡಿದರು
ಈ ಸಮಯದಲ್ಲಿ ಸಾರಿಗೆ ಇಲಾಖೆಯ ಗೋಕಾಕ ಘಟಕ ವ್ಯವಸ್ಥಾಪಕ ಸುನೀಲ ಹೊನ್ನವಾಡ ಮಾತನಾಡಿ,
ರಾಜ್ಯದಲ್ಲಿ ಎರಡು ವರ್ಷದಲ್ಲಿ 500 ಕೋಟಿ ಮಹಿಳೆಯರು ಉಚಿತವಾಗಿ ರಾಜ್ಯದ ಉದ್ದಗಲಕ್ಕೂ ಪ್ರಯಾಣಿಸಿದ್ದಾರೆ. ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಘನ ಸರ್ಕಾರದ ಅಂಗ ಸಂಸ್ಥೆಯಾಗಿದ್ದು ,ಸಾರ್ವಜನಿಕ ಪ್ರಯಾಣಿಕರಿಗೆ ಸುಗಮ ಸಾರಿಗೆ ವ್ಯವಸ್ಥೆಯನ್ನು ಕಲ್ಪಿಸುವುದರ ಜೊತೆಗೆ ಸಾಮಾಜಿಕ ಹೊಣೆಗಾರಿಕೆಯನ್ನು ನಿಭಾಯಿಸುವ ನಿಟ್ಟಿನಲ್ಲಿ ವಿವಿಧ ರೀತಿಯಲ್ಲಿ ರಿಯಾಯಿತಿ ಮತ್ತು ಉಚಿತ ಪಾಸುಗಳನ್ನು ವಿತರಿಸುತ್ತಾ ಗೋಕಾಕ ಸಾರಿಗೆ ಘಟಕ ಲಾಭದಲ್ಲಿ ನಡೆದಿದೆ ಎಂದರು.
ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ, ಚಿಕ್ಕೋಡಿ ವಿಭಾಗವು 1998 ರಂದು ಅಸ್ತಿತ್ವಕ್ಕೆ ಬಂದಿದೆ. ಪ್ರಸ್ತುತ ಈ ವಿಭಾಗದಲ್ಲಿ 691 ಬಲದಿಂದ 665 ಅನುಸೂಚಿ ಕಾರ್ಯಾಚರಣೆ ಮಾಡುತ್ತ ನಿತ್ಯ 2.44 ಲಕ್ಷ ಅನುಸೂಚಿ ಕಿ.ಮೀ ಕ್ರಮಿಸುತ್ತದೆ.
ವಿಭಾಗದ ವ್ಯಾಪ್ತಿಯಲ್ಲಿ ಚಿಕ್ಕೋಡಿ, ಸಂಕೇಶ್ವರ, ಗೋಕಾಕ, ನಿಪ್ಪಾಣಿ, ರಾಯಬಾಗ, ಅಥಣಿ, ಮತ್ತು ಹುಕ್ಕೇರಿ ಸೇರಿ ಒಟ್ಟು -07 ಘಟಕಗಳು ಹಾಗೂ 24 ಬಸ್ ನಿಲ್ದಾಣಗಳಿಂದ ಈ ಭಾಗದ ಮತ್ತು ನಾಡಿನ ವಿವಿಧ ಭಾಗಗಳ ಸಾರ್ವಜನಿಕ ಪ್ರಯಾಣಿಕರಿಗೆ ಸಮರ್ಪಕವಾದ ಸಾರಿಗೆ ಸೇವೆಯನ್ನು ಒದಗಿಸುವ ಪ್ರಾಮಾಣಿಕ ಪ್ರಯತ್ನವನ್ನು ಮಾಡಲಾಗುತ್ತಿದೆ.
ಶಕ್ತಿ ಯೋಜನೆ ಮೊದಲು ಜೂನ್, 11-2023 ನಿತ್ಯ 63,15 ಲಕ್ಷ ಆದಾಯ ಗಳಿಸಿ 2.31.214 ಪ್ರಯಾಣಿಕರಿಗೆ ಸಾರಿಗೆ ಸೌಲಭ್ಯವನ್ನು ಕಲ್ಪಿಸಲಾಗಿತ್ತು.
ಸ್ತ್ರೀ ಶಕ್ತಿ ಯೋಜನೆ, ಬಸ್ ಪೂಜೆಯಲ್ಲಿ ತಹಶೀಲ್ದಾರ ಶಿವಾನಂದ ಬಬಲಿ, ಬಿಇಒ ಅಜೀತ ಮನ್ನಿಕೇರಿ, ಸಿಡಿಪಿಒ ಯಲ್ಲಪ್ಪ ಗದಾಡಿ,ಕಾಂಗ್ರೆಸ್ ಮುಖಂಡರುಗಳಾದ ಎಸ್.ಆರ್.ಸೋನವಾಲಕರ, ವಿ.ಪಿ.ನಾಯ್ಕ, ಕೆ.ಟಿ.ಗಾಣಿಗೇರ, ವಿರುಪಾಕ್ಷ ಮುಗಳಖೋಡ, ಸುರೇಶ ಮಗದುಮ್ಮ, ಪ್ರಕಾಶ ಅರಳಿ, ಮಹಾಲಿಂಗಯ್ಯ ನಂದಗಾವಮಠ, ರವಿ ಮೂಡಲಗಿ, ಮೂಡಲಗಿ ಬಸ್ಸ ನಿಲ್ದಾಣದ ಅಧಿಕಾರಿಗಳಾ ಬಿ.ಬಿ.ದಂಡಾಪೂರ, ಶ್ರೀಶೈಲ್ ದೇಸಾರಟ್ಟಿ, ಎಚ್.ಬಿ.ಭಜೇಂತ್ರಿ, ಪುರಸಭೆ ಸದಸ್ಯರಾದ ಎ.ಕೆ.ತಾಂಬೋಳಿ, ಹನಮಂತ ಗುಡ್ಲಮನಿ, ರವಿ ಮೂಡಲಗಿ, ಲಕ್ಷ್ಮಣ್ಣ ಶಾಬನ್ನವರ, ವಿವಿಧ ಇಲಾಖೆಯ ಅಧಿಕಾರಿಗಳು, ಗ್ಯಾರಂಟಿ ಯೋಜನೆಯ ಪದಾಧಿಕಾರಿಗಳು ಕಾಂಗ್ರೆಸ್ ಕಾರ್ಯಕರ್ತರು ಮತ್ತು ಮಹಿಳೆಯರು ಭಾಗಿಯಾಗಿದ್ದರು.
ಸಾರಿಗೆ ಇಲಾಖೆಯ ಚಂದ್ರಶೇಖರ ನಿಂಬರಗಿ ನಿರೂಪಿಸಿ ಸ್ವಾಗತಿಸಿ ವಂದಿಸಿದರು.