ಕುಲಗೋಡ: ಸಾಂಕ್ರಾಮಿಕ ರೋಗದಿಂದ ಜನರ ಕಾಪಾಡಲು, ಬಯಲು ಶೌಚ್ಛ ಮುಕ್ತಮಾಡಿ ಸ್ವಚ್ಛ ಮತ್ತು ಸುರಕ್ಷತೆ ಬದುಕು ಸಾಗಿಸಲು ಸರಕಾರ ಈ ಯೋಜನೆ ತಂದಿದ್ದು. ಮನೆಗೊಂದು ಶೌಚಾಯಲ ನಿರ್ಮಿಸುವ ಗುರಿ ಸರಕಾರ ಹೊಂದಿದ್ದು ಪ್ರತಿಯೊಬ್ಬರು ಸಹಕರಿಸಬೇಕು ಎಂದು ಮೂಡಲಗಿ ತಾಲೂಕ ಪಂಚಾಯತ ಸಹಾಯಕ ನಿರ್ದೇಶಕರು ಚಂದ್ರಶೇಖರ ಬಾರಕಿ ಹೇಳಿದರು.
ಇವರು ಮೂಡಲಗಿ ತಾಲೂಕಿನ ಕುಲಗೋಡ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಆವರಣದಲ್ಲಿ ಇಂದು ಮುಂಜಾನೆ ವಿಶ್ವ ಶೌಚಾಲಯ ದಿನ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿ ಡಿಸೆಂಬರ್ 10 ರವರೆಗೆ ಈ ಯೋಜನೆ ತಂದಿದೆ. ಶೌಚಾಲಯ ಇಲ್ಲದವರು ನಿಮ್ಮ ಪಾಲಕರಿಗೆ ಹೇಳಿ ಸುರಕ್ಷತ ಶೌಚಾಲಯ ಮಾಡಿಕೊಳ್ಳಿ ಎಂದು ಮಕ್ಕಳಿಗೆ ಹೇಳಿ ನಿರ್ಮಿಸಿ, ಬಳಸಿ, ಸುಧಿರ್ಘ ಬಾಳಿ ಎಂದು ಹೇಳಿದರು.
ಮೂಡಲಗಿ ಶಿಕ್ಷಣಾಧಿಕಾರಿ ಅಜಿತ ಮನ್ನಿಕೇರಿ ಮಾತನಾಡಿ ನಾಳೆಯಿಂದ ಡಿಸೆಂಬರ 10 ರವರೆಗೆ ಪ್ರತಿ ಶಾಲೆಯಲ್ಲಿ ಪ್ರಾಥನೆ ಸಮಯದಲ್ಲಿ ಅಂದದ ಶೌಚಾಲಯ ಆನಂದ ಜೀವನ. ನಮ್ಮಶೌಚಾಲಯ ನಮ್ಮಗೌರವ ಎಂದು ಘಣವಾಕ್ಯ ಓದಿ ಹೇಳುವದು ಕಡ್ಡಾಯ ಕಾರಣ ಪ್ರಚಾರದಿಂದ ಸಾಧನೆ ಮಾಡೋಣ ಎಂದರು.
ಮೂಡಲಗಿ ಸಿಡಿಪಿಓ ವಾಯ.ಕೆ ಗದಾಡಿ ಮಾತನಾಡಿ ಮೊದಲಿನ ಕಾಲದಲ್ಲಿ ಬಯಲು ಶೌಚಾಲಯದಿಂದ ಸಾಂಕ್ರಾಮಿಕ ರೋಗ ತಗುಲಿ ಲಕ್ಷಂತರ ಜನರು ಬಲಿಯಾದಿದ್ದಾರೆ. ಹಾಗೂ ಮಹಿಳೆಯರ ಬಯಲಿನಲ್ಲಿ. ರಾತ್ರಿ ಮತ್ತು ಮಳೆಗಾಲದಲ್ಲಿ ಮೂಲಮೂತ್ರ ವಿಸರ್ಜನೆ ಕಷ್ಕಕರವಾಗಿತ್ತು. ಇದನ್ನು ಹೊಗಲಾಡಿಸಲು ಮನೆಗೊಂದು ಶೌಚಾಲಯ ಮಡಿಕೊಳ್ಳಿ ಎಂದರು.
ನರೆಗಾ ಸಹಾಯಕ ನಿರ್ದೇಶಕ ಸಂಗಮೆಶ ರೊಡ್ಡನವರ ಮಾತನಾಡಿ ಪೊಲೀಯೋ ರೋಗ ಲಸಿಕೆ ಮತ್ತು ಜಾಗೃತಿಯಿಂದ ನಿರ್ಮೂಲನೆಯಾಗಿದೆ ಹಾಗೇ ಶೌಚಾಲಯ ಬಳಕೆಯಿಂದ ರಾಜ್ಯದಲ್ಲಿ ಸಾಕ್ರಾಮಿಕ ರೋಗದಿಂದ 2 ಲಕ್ಷಕ್ಕೂ ಅಧಿಕ ಮಕ್ಕಳು ಸಾವು ತಡೆಯಬಹುದು ಎಂದರು.
ಕಾರ್ಯಕ್ರಮಕ್ಕೂ ಮೊದಲು ಪ್ರಾಥಮಿಕ ಶಾಲೆ ಮಕ್ಕಳು ಗ್ರಾಮದ ಪ್ರಮುಖ ಬೀದಿಗಳಲ್ಲಿ ಶೌಚಾಲಯ ಬಗ್ಗೆ ಜಾಗೃತಿ ಮುಡಿಸುವ ಜಾಥಾ ನಡೆಸಿದರು.
ಕಾರ್ಯಕ್ರಮದಲ್ಲಿ ಪಿಡಿಓ ಸದಾಶಿವ ದೇವರ. ಸಿಆರ್‍ಪಿ ಸುರೇಶ ತಳವಾರ. ವಿ.ಆರ್.ಬರಗಿ. ಸಾಯಿರತ್ನ ಫೌಂಡೇಶನ ಅಧ್ಯಕ್ಷ ಶಂಕರ ಹಾದಿಮನಿ. ಎಮ್.ಆರ್ ಕುಲಕರ್ಣ.ಶ್ರೀಪತಿ ಗಣಿ ಎಚ್.ಬಿ ಝಾರೆ. ಅಧಿಕಾರಿಗಳು.ಗ್ರಾಪಂ ಸಿಬ್ಬಂದಿ ಶಿಕ್ಷಕರು. ಆಶಾ,ಅಂಗನವಾಡಿ ಕಾರ್ಯಕರ್ತೆಯರು ಮುಖಂಡರು ಇದ್ದದರು.