Breaking News
Home / ಬೆಳಗಾವಿ / ಮಹಿಳೆಯರು ಅಡುಗೆ ಮನೆಗೆ ಸಿಮಿತ ಅನ್ನೋ ಕಾಲ ಹೋಗಿದೆ- ಎಫ್.ಜಿ ಚಿನ್ನನವರ

ಮಹಿಳೆಯರು ಅಡುಗೆ ಮನೆಗೆ ಸಿಮಿತ ಅನ್ನೋ ಕಾಲ ಹೋಗಿದೆ- ಎಫ್.ಜಿ ಚಿನ್ನನವರ

Spread the love

ಮಹಿಳೆಯರು ಅಡುಗೆ ಮನೆಗೆ ಸಿಮಿತ ಅನ್ನೋ ಕಾಲ ಹೋಗಿದೆ – ಎಫ್.ಜಿ ಚಿನ್ನನವರ

 ಕುಲಗೋಡ: ಮಹಿಳೆಯರು ಅಡುಗೆ ಮನೆಗೆ ಸಿಮಿತ ಅನ್ನೋ ಕಾಲ ಹೋಗಿ ಮಹಿಳೆ ಪುರುಷರಷ್ಟೆ ಸಮಾನರು. ಪುರುಷ ಮಹಿಳೆ ಎಂಬ ತಾರತಮ್ಯ ಹೋಗಿ ಮಹಿಳೆಯರು ಅಬಲರಲ್ಲ ಸಬಲರು ಎಂದು ತೋರಿಸಿದ್ದಾರೆ ಎಂದು ಎಫ್.ಜಿ ಚಿನ್ನನವರ ತಾಪಂ ಕಾರ್ಯನಿರ್ವಹಕ ಅಧಿಕಾರಿಗಳು ಹೇಳಿದರು.

ಇವರು ಮೂಡಲಗಿ ತಾಲೂಕಿನ ಕುಲಗೋಡ ಗ್ರಾಮದ ಶ್ರೀ ಲಕ್ಷ್ಮೀದೇವಸ್ಥಾನ ಆವರಣದಲ್ಲಿ ಗ್ರಾಮ ಪಂಚಾಯತ ಆಯೋಜಿಸಿದ ಮಹಿಳೆಯರ ವಿಶೇಷ ಗ್ರಾಮ ಸಭೆ ಉದ್ಘಾಟಿನೆ ಮಾತನಾಡಿ ಮಹಿಳೆಯರಿಗಾಗಿ ಸರಕಾರ ವ್ಯಾಪಾರ ಗುಡಿ ಕೈಗಾರಿಕೆ ಕೃಷಿ ಹೈನುಹಗಾರಿಕೆ ಇತರೆ ಕ್ಷೇತ್ರಗಳಲ್ಲಿ ಮಹಿಳೆಯರನ್ನು ತೊಡಗಿಸಿ ಆರ್ಥಿಕ ಅಭಿವೃದ್ಧಿ ಸಭಲತೆಗಾಗಿ ಮಹತ್ವದ ಯೋಜನೆಗಳ ತಂದಿದೆ ಹಾಗೂ ಸರಕಾರ ಬಯಲು ಶೌಚಾಲಯ ಮುಕ್ತ ಗ್ರಾಮದ ಕನಸ್ಸು ಹೊತ್ತಿದೆ. ಎಂದರು.

ಚಂದ್ರಶೇಖರ ಬಾರ್ಕಿ ಪಂಚಾಯತ ರಾಜ್ ಸಹಾಯಕ ನಿರ್ದೇಶಕರು ಮಾತನಾಡಿ ಈ ಶತಮಾನದಲ್ಲಿ ಲಿಂಗ ತಾರತಮ್ಯ. ಅಸಮಾನತೆ. ಬಡತನ ಹೋಗಲಾದಿಸಲು ಮಹಿಳೆಯರಿಗೆ ವಿಷೇಶ ವಿವಿಧ ರಂಗಗಳಲ್ಲಿ ಮಿಸಲಾತಿ ನೀಡಿದೆ. ಮಹಿಳಾ ಸಭೆಗಳ ಮೂಲಕ ಕುಂದುಕೋರತೆಗಳ ನಿವಾರಣೆ ಮಾಡಲು ಗ್ರಾಪಂ ಮುಂದಾಗಿದೆ. ಮಕ್ಕಳಲ್ಲಿ ಅಪೌಷ್ಠಿಕತೆ. ನೀರು ಬಳಕೆ. ಸ್ವಚ್ಛತೆ. ಶಿಕ್ಷಣ. ಬಗ್ಗೆ ಅರಿವು ನೀಡಿದರು.

ತಮ್ಮಣ್ಣಾ ದೇವರ ಗ್ರಾಪಂ ಅಧ್ಯಕ್ಷರು ಮಾತನಾಡಿ ಸಮಾಜದಲ್ಲಿ ಬಡ ಮಹಿಳೆಯರಿಗೆ ಸಿಮಂತ ಕಾರ್ಯ ಕನಸಾಗಿದೆ. ಇದನ್ನು ಹೋಗಲಾದಿಸಲು ಮತ್ತು ಭಾವೈಕ್ಯತೆ ಸೌಹಾರ್ದತೆ ಮುಡಿಸಬೇಕೆಂದು ವಿವಿಧ ಧರ್ಮಗಳ 16 ಜನ ಮಹಿಳೆಯರ ಗ್ರಾಪಂ ನಿಂದ ಸಾಮೂಹಿಕ ಸಿಮಂತ ಮಾಡಿದ್ದೇವೆ ಎಂದರು.

ಕಾರ್ಯಕ್ರಮ ವಿಶೇಷ ಗ್ರಾಮದ 16 ಮಹಿಳೆಯರಿಗೆ ಒಂದೇ ವೇದಿಕೆಯಲ್ಲಿ ಸಿಮಂತ ಕಾರ್ಯ ಮಾಡಿದ್ದು ವಿಶೇಷವಾಗಿತ್ತು.

ಸರಕಾರದ ನಿರ್ದೇಶನದಂತೆ ಪಜಾ.ಪಪಂ ಸಮುದಾಯದಲ್ಲಿ ನಿಧನರಾದ ಕುಟುಂಬಕ್ಕೆ ಅಂತ್ಯಸಂಸ್ಕಾರಕ್ಕಾಗಿ ಗ್ರಾಪಂ ನಿಂದ ಲಕ್ಷ್ಮೀ ತಾಳಿಕೋಟಿ ಇವರಿಗೆ 5000 ರೂ ಗಳ ಚೆಕ್ ವಿತರಣೆ ಮಾಡಿದರು.

ಸಂದರ್ಭದಲ್ಲಿ ಮೂಡಲಗಿ. ಗ್ರಾಪಂ ಅಧ್ಯಕ್ಷ ತಮ್ಮಣ್ಣಾ ದೇವರ. ಇಂದಿರಾ ಭೋವಿ ಸಹಾಯಕ ಶಿಶು ಅಭಿವೃದ್ಧಿ ಅಧಿಕಾರಿಗಳು ಮೂಡಲಗಿ. ಅಶೋಕ ನಾಯಿಕ ಅಧ್ಯಕ್ಷರು ಟಿ.ಎ.ಪಿ.ಸಿ.ಎಮ್.ಎಸ್. ಬಸನಗೌಡ ಈಶ್ವರಪ್ಪಗೋಳ ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿಗಳು. ಪಿ.ಎಸ್.ಐ ಆನಂದ ಬಿ. ಬಸನಗೌಡ ಪಾಟೀಲ. ಸುಭಾಸ ವಂಟಗೋಡಿ. ಸತೀಶ ವಂಟಗೋಡಿ. ಪಿ.ಡಿಓ ಸದಾಶಿವ ದೇವರ. ನಾಗರಾಜ ಗಡಾದ. ಸಂಜೀವಿನಿ ಮಹಿಳಾ ಒಕ್ಕೂಟದ ಮಾಲುತಾಯಿ ವಂಟಗೋಡಿ.ಅನೂಪಮ ಅಂಗಡಿ. ಸುಶೀಲಾ ಅಂಗಡಿ. ಗ್ರಾಪಂ ಸರ್ವ ಸದಸ್ಯರು. ಆಶಾ, ಅಂಗನವಾಡಿ ಕಾರ್ಯಕರ್ತೆಯರು ಗ್ರಾಮಸ್ಥರು ಇದ್ದರು. ಶಂಕರ ಹಾದಿಮನಿ ಸ್ವಾಗತಿಸಿ ವಂದಿಸಿದರು. ಸುರೇಶ ತಳವಾರ ನಿರೂಪಿಸಿದರು.


Spread the love

About inmudalgi

Check Also

ಹಾಡುಗಬ್ದ ಧ್ವನಿ ಸುರುಳಿಯ ಮಹಾರಾಜ ಸಿದ್ದು ಹಳ್ಳೂರ

Spread the loveಹಾಡುಗಬ್ದ ಧ್ವನಿ ಸುರುಳಿಯ ಮಹಾರಾಜ ಸಿದ್ದು ಹಳ್ಳೂರ ‘ಸಿದ್ಧರೆಲ್ಲರೂ ಪ್ರಸಿದ್ಧರಾಗಿರುವುದಿಲ್ಲ! ಪ್ರಸಿದ್ಧರೆಲ್ಲರಿಗೂ ಸಿದ್ಧಿ ಇರುವುದಿಲ್ಲ. ಲೋಕವಿಚಿತ್ರ ಪ್ರಪಂಚದಲ್ಲಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ