Breaking News
Home / ಬೆಳಗಾವಿ / ಆಭರಣ ಕಳ್ಳರ ಬಂಧನ 9.60 ಲಕ್ಷ ರೂ ಮೊತ್ತದ ಆಭರಣ ವಶ

ಆಭರಣ ಕಳ್ಳರ ಬಂಧನ 9.60 ಲಕ್ಷ ರೂ ಮೊತ್ತದ ಆಭರಣ ವಶ

Spread the love

 

 ಆಭರಣ ಕಳ್ಳರ ಬಂಧನ 9.60 ಲಕ್ಷ ರೂ ಮೊತ್ತದ ಆಭರಣ ವಶ

ಕುಲಗೋಡ: ಮನೆ ಕಳ್ಳತನ ಮಾಡುತ್ತಿದ್ದ ಇಬ್ಬರನ್ನು ಬಂಧಿಸಿ ಆಟೋ ರಿಕ್ಷಾ ಹಾಗೂ 9.6 ಲಕ್ಷದ ಬಂಗಾರ ಆಭರಣಗಳನ್ನು ಕುಲಗೋಡ ಪೊಲೀಸರು ವಶಪಡಿಸಿಕೊಂಡಿದ್ದಾರೆ.

ಗೋಕಾಕ ನಗರದ ರಾಘವೇಂದ್ರ ರಾಮು ರೇವಣಕರ(22) ಹಾಗೂ ಓಂಕಾರ ದಯಾನಂದ ಜಾಧವ(21) ಬಂಧಿತ ಆರೋಪಿಗಳು

ಕಳೆದ ಸಪ್ಟಂಬರ್ ನಲ್ಲಿ ಗೋಕಾಕ ತಾಲೂಕಿನ ಕೌಜಲಗಿ ಗ್ರಾಮದಲ್ಲಿ ಮನೆಯೊಂದರ ಕೀಲಿ ಮುರಿದು ಮನೆಯಲ್ಲಿದ್ದ ಚಿನ್ನ ಕಳ್ಳತನವಾದ ಬಗ್ಗೆ ಕುಲಗೋಡ ಪೊಲೀಸ ಠಾಣೆಯಲ್ಲಿ ದೂರು ದಾಖಲಾಗಿತ್ತು. ಆರೋಪಿಗಳ ಪತ್ತೆಗೆ ಎಸ್.ಪಿ ಯವರ ಮಾರ್ಗದರ್ಶನದಲ್ಲಿ ಮೂಡಲಗಿ ಸಿಪಿಐ ಶ್ರೀಶೈಲ ಬ್ಯಾಕೂಡ ಹಾಗೂ ಪಿ.ಎಸ್.ಐ ಆನಂದ ಬಿ ಹಾಗೂ ಸಿಬ್ಬಂದಿ ನೇತೃತ್ವದಲ್ಲಿ ತಂಡವನ್ನು ರಚಿಸಿ ಆರೋಪಿಗಳ ಬಂಧಿಸಿ 9.6 ಲಕ್ಷ ಮೌಲ್ಯದ 113 ಗ್ರಾಂ ಬಂಗಾರ ಮತ್ತು ಆಟೋರಿಕ್ಷಾ ವಶಪಡಿಸಿಕೊಂಡು ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.

ಕಾರ್ಯಚರಣೆಯಲ್ಲಿ ಮೂಡಲಗಿ ಸಿಪಿಐ ಶ್ರೀಶೈಲ ಬ್ಯಾಕೂಡ. ಕುಲಗೋಡ ಪಿ.ಎಸ್.ಐ ಆನಂದ ಬಿ. ಪಿ.ಎಸ್.ಐ 2 ವಿ.ವಿ ಉತ್ರೇಶ್ವರ. ಎಮ್.ಬಿ ಕರಣಿ. ವಾಯ್.ಎಮ್.ಸಾಂಗಲಿ. ಎಸ್.ವಿ ಹಣಜಿ. ಎಮ್.ಬಿ ಆಡಿನ. ಕೆ.ಸಿ ಬಾಗಲಿ. ಎಮ್.ಎಸ್ ಕುರೆನ್ನವರ. ಎಸ್.ಎನ್ ಬಡಬಡೆ. ಎಲ್.ಎಲ್. ಪೂಜೇರ. ಎಸ್.ಎಫ ಮಳಲಿ. ವಿ.ಎಲ್ ದೂಳಪ್ಪನವರ. ಎ.ಎಚ್ ವೇಶಧಾರಿ. ವಿನೋದ ಟಕ್ಕನವರ ಇದ್ದರು.


Spread the love

About inmudalgi

Check Also

ಮಾರುತಿ ಕೋಳಿ ಅವರಿಗೆ ರಾಷ್ಟ್ರೀಯ ಪರಶುರಾಮ ಪ್ರಶಸ್ತಿ ಪ್ರಧಾನ

Spread the love ಮಾರುತಿ ಕೋಳಿ ಅವರಿಗೆ ರಾಷ್ಟ್ರೀಯ ಪರಶುರಾಮ ಪ್ರಶಸ್ತಿ ಪ್ರಧಾನ ಮೂಡಲಗಿ: ಕೆರಳಾದ ಶ್ರೀ ಶಟ್ ಶಾಸ್ತ್ರ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ