ಕುಲಗೋಡ:ಮೂಡಲಗಿ-ಗೋಕಾಕ ತಾಲೂಕಿನ ರಸ್ತೆ ಮತ್ತು ಸೇತುವೆಗಳ ವಿಕ್ಷಣೆಗೆ ಆಗಮಿಸಿದ ಲೋಕೋಪಯೋಗಿ ಸಚಿವರು ಸತೀಶ ಜಾರಕಿಹೋಳಿ
ಮೂಡಲಗಿ ತಾಲೂಕಿನ ಕುಲಗೋಡ ಗ್ರಾಮದ ಬಸನಗೌಡ ಪಾಟೀಲ ಇವರ ತೋಟದಲ್ಲಿ ಕುಲಗೋಡ ಸೇರಿ ಸುತ್ತಮುತ್ತಲಿನ ಗ್ರಾಮಗಳ ಜನರ ಅಹವಾಲುಗಳನ್ನು ಸ್ವೀಕರಿಸಿದರು.
ಗ್ರಾಮದ ಮುಖಂಡರು ಕುಲಗೋಡ ಹೋಬಳಿಯನ್ನಾಗಿ ಮಾಡಿ ರೈತರ ಅಲೇದಾಟ ತಪ್ಪಿಸಿ ಅನಕೂಲ ಮಾಡಬೇಕು. ಗ್ರಾಪಂ ನೂತನ ಕಟ್ಟಡಕ್ಕೆ ವಿಷೇಶ ಅನುದಾನ. ಹೊಸಟ್ಟಿ ಹಾಗೂ ಹೊನಕುಪ್ಪಿ ಒಳರಸ್ತೆಗಳ ನಿರ್ಮಾಣ. ಪ್ರವಾಸಿ ಮಂದಿರ ನಿರ್ಮಾಣ ಹಾಗೂ ವಿವಿಧ ಯೋಜನೆಗಳಿಗೆ ಮನವಿ ಮಾಡಿದರು.
ಸಂದರ್ಭದಲ್ಲಿ ಪಜಾ.ಪಪಂ ಜಾತಿಯ ಹೆಣ್ಣುಮಗಳು ಮದುವೆಗೆ ಗ್ರಾಮ ಪಂಚಾಯತಿಯಿಂದ 5000 ರೂ ಚಕ್ ವಿತರಣೆ ಮಾಡಿದರು.
ಗ್ರಾಮಸ್ಥರು ಹಾಗೂ ವಿವಿಧ ಸಂಘಟನೆಗಳ ಸತ್ಕಾರ ಸ್ವೀಕರಿಸಿದರು.
ಸಂದರ್ಭದಲ್ಲಿ ಟಿಎಪಿಸಿಎಮ್‍ಎಸ್ ಅಧ್ಯಕ್ಷ ಅಶೋಕ ನಾಯಿಕ. ಬಸನಗೌಡ ಪಾಟೀಲ. ಸುಭಾಸ ವಂಟಗೋಡಿ. ಗ್ರಾಪಂ ಅಧ್ಯಕ್ಷ ತಮ್ಮಣ್ಣಾ ದೇವರ.ಅನಂತ ನಾಯಿಕ. ಪ್ರಶಾಂತ ವಂಟಗೋಡಿ. ಪಿಡಿಓ ಸದಾಶಿವ ದೇವರ. ಸದಶಿವ ಗುಡಗುಡಿ. ಮುರಗೇಪ್ಪ ಯಕ್ಸಂಬಿ. ಗೋವಿಂದ ಪೂಜೇರಿ. ಬಸವಣೆಪ್ಪ ತಿಪ್ಪಿಮನಿ. ಮುದ್ದಣ್ಣ ಸಸಾಲಟ್ಟಿ. ನಿಂಗರಾಜ ಕಳ್ಳಿಗುದಿ. ಅಶೋಕ ಹಿರೇಮೇತ್ರಿ. ಬಸು ನಾವಿ ಗ್ರಾಪಂ ಸರ್ವ ಸದಸ್ಯರು ಗ್ರಾಮದ ಮುಖಂಡರು ಇದ್ದರು.