ಕುಲಗೋಡ ಶ್ರೀ ಬಲಭೀಮ ಅಂಗಾರ ಭಕ್ತರಿಗೆ ಬಂಗಾರ
ಶನಿವಾರ 28, ರವಿವಾರ 29 ಕುಲಗೋಡ ಬಲಭೀಮ ದೇವರ ಕಾರ್ತಿಕೋತ್ಸವ ಮತ್ತು ಭವ್ಯ ರಥೋತ್ಸವ
ಕುಲಗೋಡ: ಮೂಡಲಗಿ ತಾಲೂಕಿನ ಕುಲಗೋಡ ಗ್ರಾಮದಲ್ಲಿ ಶ್ರೀ ಬಲಭೀಮ ದೇವರ ದೇವಸ್ಥಾನವು ನಾಡಿನ ಅತ್ಯಂತ ಜಾಗೃತ ಸ್ಥಳವೆಂದೆ ಚಿರಪರಿಚಿತವಾಗಿರುವ ಗ್ರಾಮ ಇದೇ
ಶನಿವಾರ 28 ಸಂಜೆ 5 ಕ್ಕೆ ಶ್ರೀರಾಮ ರಥೋತ್ಸವ ರಾತ್ರಿ 9 ಕ್ಕೆ ಶ್ರೀ ಬಲಭೀಮನ ಉಚ್ಛಾಯಿ ರಥೋತ್ಸವ. ರವಿವಾರ 29 ರಂದು ಶ್ರೀ ಬಲಭೀಮ ದೇವರ ಕಾರ್ತಿಕೋತ್ಸವ ಅಂಗವಾಗಿ ಸರ್ವ ಭಕ್ತರಿಂದ 25 ಕೆಜಿ ಬೆಳ್ಳಿಯಲ್ಲಿ ನಿರ್ಮಾಣವಾದ ನೂತನ ಪಲ್ಲಕ್ಕಿಯ ಭವ್ಯ ಉತ್ಸವ ವಿಜೃಂಭಣೆಯಿಂದ ಜರುಗುವದು.
ಕೂಲಿಗಾಗಿ ಗುಳೆ ಬಂದ ಜನರು ಅಲ್ಲಿ ಇಲ್ಲಿ ಗುಡಿಸಲುಗಳನ್ನು ಹಾಕಿಕೊಂಡು ಈಗಿನ ಕುಲಗೋಡದಲ್ಲಿ ವಾಸ್ತವ್ಯ ಮಾಡಿಕೊಂಡಿದ್ದರಂತೆ ವಾಸನ,ಮರಡಿ,ಮತ್ತು ಮಾಸ್ತಿ ಕಟ್ಟೆ ಹೀಗೆ ಬೇರೆ ಸ್ಥಳಗಳಲ್ಲಿ ವಾಸವಾಗಿದೆ ಕೂಲಿ ಜನರ ಸಮುದಾಯಗಳು ಸೇರಿ ಕುಲಗೋಡದ ನೈಋತ್ಯಕ್ಕೆ ವಾಸಂದಪ್ಪ ಗುಡಿ. ಉತ್ತರಕ್ಕೆ ಮಾಸ್ತಿ(ಮಾಸ್ತೆಮ್ಮಾ) ಗುಡಿ. ದಕ್ಷಿಣಕ್ಕೆ ಮಡ್ಡಿ ಯಲ್ಲಮ್ಮಾ ಗುಡಿಗಳು ಪೂರ್ವ ಇತಿಹಾಸದ ಕುರುಹುಗಳಾಗಿ ಭಕ್ತರಿಂದ ಪೂಜಿಸಲ್ಪಡುತ್ತದೆ.
ಆರಾಧ್ಯ ದೈವ ಬಲಭೀಮನ ಅನುಗ್ರಹದಿಂದ ಶ್ರೀ ಕುಲಗೋಡ ತಮ್ಮಣ್ಣನವರಿಂದ ರಚಿತವಾದ ಶ್ರೀಕೃಷ್ಣ ಪಾರಿಜಾತ ಬಯಲಾಟ ಕೃತಿ ದೇಶದ ಮನೆ ಮನಗಳಲ್ಲಿ ಹೆಸರು ಮಾಡಿದ್ದು ಸಾವಿರಾರು ಶ್ರೀ ಕೃಷ್ಣ ಪಾರಿಜಾತ ಕಲಾವಿದರಿಗೆ ಮತ್ತು ಸಂಶೋಧಕರಿಗೆ ದಾರಿ ದೀಪವಾಗಿದ್ದು. ಜಾನಪದ ಕ್ಷೇತ್ರದಲ್ಲಿ ಅಚ್ಚಳಿಯದ ಹೆಸರು ಪಡೆದಿರುವುದು ಇನ್ನೋಂದು ವಿಶೇಷ.
ಬಲಭೀಮ ದೇವರು ಇತಿಹಾಸ: ಕುಲಗೋಡ ಗ್ರಾಮದ ಈಶಾನ್ಯ ದಿಕ್ಕಿನಲ್ಲಿ ಬಂಡೆಗಲ್ಲುಗಳಿರುವ ಬಂಡೇರ ಸಾಲ ಕಾಡು ಪ್ರದೇಶದ ದಿನ್ನೇಯೊಂದರಲ್ಲಿದ ಹುತ್ತದಲ್ಲಿ ಗ್ರಾಮದ ಆದಿ ದೇವರು ಮಾರುತಿಯ ಉದ್ಭವವಾಗಿದೆ ಎಂದು ಐತಿಹ್ಯ.
ಮಾರುತಿ ದೇವರು ಕೌಜಲಗಿ ದೇಸಾಯಿಯವರ ಕನಸಿನಲ್ಲಿ ಕಾಣಿಸಿಕೊಂಡು ತಾನಿರುವ ಸ್ಥಳದಿಂದ ಹೊರತೆಗೆಯುವಂತೆ ಸೂಚಿಸಿದಾಗ ದೇಸಾಯಿಯವರು ಕಾರ್ಯೋನ್ಮುಖರಾಗಿ ನಿರ್ದಿಷ್ಟ ಸ್ಥಳವನ್ನು ಅಗೆಸಿದರು. ಅಲ್ಲಿ ದೊರೆತ ಸುಂದರ ಮಾರುತಿ ದೇವರ ಮೂರ್ತಿಯನ್ನು ಕೌಜಲಗಿಯಲ್ಲಿ ಪ್ರತಿಷ್ಠಾಪಿಸಲು ಎತ್ತಿನ ಗಾಡಿಯಲ್ಲಿ ಹಾಕಿಕೊಂಡು ಹೊರಟರಂತೆ ಆದರೆ ಗಾಡಿಯ ಗಾಲಿಗಳು ಮುಂದೆ ಸಾಗಲಿಲ್ಲ ಹೀಗಾಗಿ ಗ್ರಾಮದ ಉತ್ತರ ಅಗಸಿ ಬಾಗಿಲೇದುರೇ ಇರುವ ಪಾಳು ಜೈನ ಬಸಿದಿಯನ್ನು ಜಿರ್ಣೋದ್ದಾರ ಮಾಡಿ ಮಾರುತಿ ದೇವರ ಮೂರ್ತಿಯನ್ನು ಪ್ರತಿಷ್ಠಾಪಿಸಿದರಂತೆ. ಇದು ಕ್ರಿ.ಶ 1323 ರಲ್ಲಿ ಜರುಗಿದ ಘಟನೆ ಎಂದು ಸನ್ನದ ದಾಖಲೆಗಳು ಸಾಕ್ಷಿಕರಿಸುತ್ತವೆ. ಹೀಗೆ ಕುಲಗೋಡದ ಮಾರುತಿ ವಾಯುದೇವರು ಶ್ರೀ ಬಲಭೀಮ, ಕುಲಗೋಡಪ್ಪನಾಗಿ ಉಳಿದ ನಂಬಿದ ಭಕ್ತರನ್ನು ಕಾಯು ಆರಾಧ್ಯ ದೈವವಾಗಿದೆ.
ಆರೂವರೆ ಅಡಿ ಎತ್ತರದ ಹೇಮಕಾಂತಿಯ ಕಡುಗೆಂಪು ಶಿಲೆಯಲ್ಲಿ ರೂಪ ತಳೆದಿರುವ ಶ್ರೀ ಬಲಭೀಮ ದೇವರು ಗಂಭೀರ ಮತ್ತು ಶಾಂತ ಮೂಖ ಮುದ್ರೇಯುಳ್ಳ ಮನ ಮೋಹಕ ಮೂರ್ತಿ ಶ್ರೀ ವ್ಯಾಸರಾಯರು ಸ್ಥಾಪಿಸಿದ ಮೂರ್ತಿ ಇದು ಎಂದು ಭಕ್ತರ ನಂಬಿಕೆ. ಶ್ರೀ ಹರಿಯ ಅಪ್ರತಿಮು ಭಕ್ತರನ್ನು ನಾರಾಯಣ ಮೂರ್ತಿಯು ಬಲಭೀಮ ದೇವರ ಗರ್ಭ ಗುಡಿಯಲ್ಲಿ ನಿತ್ಯ ಪೂಜಿಸಲ್ಪಡುವುದು ಇಲ್ಲಿಯ ವಿಶೇಷ.
ಈಚೆಗೆ ರಚಿಸಿದ ನೂತನ ಗೋಪುರ ಮತ್ತು ಕಳಸಾರೋಹಣದಿಂದಾಗಿ ದೇವಸ್ಥಾನಕ್ಕೆ ಸೌದರ್ಯ ಇಮ್ಮಡಿಸಿದೆ.
ದೀಪಾವಳಿಯ ಪಾಡ್ಯದಿಂದ ಆರಂಭಿಸಿ ಪ್ರತಿ ಶನಿವಾರ ರಾತ್ರಿ ಪಲ್ಲಕ್ಕಿ ಉತ್ಸವ ಭಕ್ತರಿಂದ ಆಚರಿಸುತ್ತಾ ಭಾರತ ಹುಣ್ಣಿಮೆಗಿಂತ ಮೊದಲ ಬರುವ ಶನಿವಾರ ದಿವಸ ಕಾರ್ತಿಕದ ಅಂತಿಮ ದಿಪೋತ್ಸವ ಜರುಗುವದು. ಮರುದಿನ ರವಿವಾರ ಬೆಳ್ಳಿಗ್ಗೆ ಪಲ್ಲಕ್ಕಿಯಲ್ಲಿ ಶ್ರೀ ಬಲಭೀಮ ದೇವರ ಮೂರ್ತಿ ಇಟ್ಟು ದೇವಾಲಯದ ಸುತ್ತಲು ಐದು ಪ್ರದಕ್ಷಿಣೆ ಹಾಕುತ್ತಾರೆ. ಸೇರಿದ ಭಕ್ತರು ಉತ್ತತ್ತಿ, ಹಣ್ಣು, ಬೆಂಡು, ಬೆತ್ತಾಸಗಳನ್ನು ಎಸೆದು ತಮ್ಮ ಭಕ್ತಯನ್ನು ಸಮರ್ಪಿಸುತ್ತಾರೆ.
ಶ್ರೀ ಬಲಭೀಮ ನಂಬಿದ ಭಕತ್ತರನ್ನು ಕೈ ಬಿಡಲಾರ ಎನ್ನುವ ಪ್ರತೀತಿ ಇದ್ದು. ಭಕ್ತರು ಉರುಳು ಸೇವೆ ಸೇರಿದಂತೆ ಹತ್ತು ಹಲವಾರು ಹರಕೆ ಸಲ್ಲಿಸುವ ವಾಡಿಕೆ. ಪ್ರತಿ ವರ್ಷ ಬಲಭೀಮ ದೇವರ ಉತ್ಸವ ಅದ್ದೂರಿಯಾಗಿ ಜರುಗುತ್ತಿದ್ದು. ದೇವಸ್ಥಾನದ ಪ್ರಧಾನ ಅರ್ಚಕರಾದ ಹಣಮಂತ ಪೂಜೇರಿ ಇವರ ನೆತ್ರತ್ವದಲ್ಲಿ ಪ್ರತಿ ವರ್ಷ ಸಾಮೂಹಿಕ ವಿವಾಹ, ಧರ್ನುವಾಸದಲ್ಲಿ 5 ದಿನಗಳ ವಿಶೇಷ ಪೂಜೆ, ಮಳೆಗಾಗಿ ಪರ್ಜನ ಹೋಮ ಹೀಗೆ ಹಲವು ಸಮಾಜಿಮುಖಿ ಕೇಲಸಗಳ ನಡೆಯುತ್ತಿವೆ.
ಕಾರ್ಯಕ್ರಮಗಳ ವಿವರ:
ಶನಿವಾರ 28 ರಂದು ಮುಂಜಾನೆ 5 ಕ್ಕೆ ಶ್ರೀರಾಮ ಜಪ. 8 ಕ್ಕೆ ವಾಯುಸ್ತುತಿ ಮತ್ತು ಮಹಾಭೀಷೇಕ.ನಂತರ ಶ್ರೀ ರಾಮಜಪ ಯಜ್ಞ ಕಾರ್ಯಕ್ರಮ. 1 ಕ್ಕೆ ಶ್ರೀ ಬಲಭೀಮ ದೇವರಿಗೆ ಮಹಾಪೂಜೆ ಮಂಗಳಾರುತಿ ನಂತರ ಮಹಾಪ್ರಸಾದ. ಸಂಜೆ 5 ಕ್ಕೆ ಶ್ರೀರಾಮ ಮಹಾ ರಥೋತ್ಸವ ನಡೆಯುವದು. ರಾತ್ರಿ 9 ಕ್ಕೆ ಶ್ರೀ ಬಲಭೀಮ ದೇವರ ಉಚ್ಛಾಯಿ ರಥೋತ್ಸವ ಹಾಗೂ ದೀಪೋತ್ಸವ. 10:30 ಕ್ಕೆ ಶ್ರೀ ಬಲಭೀಮ ನಾಟ್ಯ ಸಂಘ ಇವರಿಂದ ಗರತಿಗೆ ಬಂದ ಅಗ್ನಿಪರೀಕ್ಷೆ ಸಾಮಾಜಿಕ ನಾಟಕ.
ರವಿವಾರ 29 ರಂದು 10 ಕ್ಕೆ ಶ್ರೀ ಬಲಭೀಮ ದೇವರ ಭವ್ಯ ಪಲ್ಲಕ್ಕಿ ಉತ್ಸವ ಮಹಾಮಂಗಳಾರುತಿ 12 ಕ್ಕೆ ಮಹಾಪ್ರಸಾದ. ಸಂಜೆ 5 ಕ್ಕೆ ಶ್ರೀರಾಮ ನಾಮ ಜಪ ಯಜ್ಞ ಮುಕ್ತಾಯ ಕಾರ್ಯಕ್ರಮ.
ವರದಿ: ಶಂಕರ ಹಾದಿಮನಿ.