ಕುಲಗೋಡ ಶ್ರೀ ಬಲಭೀಮ ಪಲ್ಲಕ್ಕಿ ಉತ್ಸವ ಸಂಪನ್ನ.
ಕುಲಗೋಡ: ಮೂಡಲಗಿ ತಾಲೂಕಿನ ಕುಲಗೋಡ ಗ್ರಾಮದ ಶ್ರೀ ಬಲಭೀಮ ದೇವರ ಕಾರ್ತಿಕೋತ್ಸವ ಹಾಗೂ ನೂತನ ಬೆಳ್ಳಿ ಪಲ್ಲಕ್ಕಿ ಉತ್ಸವ ಮತ್ತು ಮಕ್ಕಳನ್ನು ಪಲ್ಲಕ್ಕಿ ಕೇಳಗೆ ಹಾಯಿಸುವ ಕಾರ್ಯಕ್ರಮಗಳು ರವಿವಾರ ಮುಂಜಾನೆ ಸಾವಿರಾರು ಭಕ್ತರ ಸಮ್ಮೂಖದಲ್ಲಿ ವಿಜೃಂಭಣೆಯಿಂದ ಜರುಗಿತು.
ರವಿವಾರ ಮುಂಜಾನೆ 10 ಗಂಟೆಗೆ ಶ್ರೀ ಬಲಭೀಮದೇವರ ಪಲ್ಲಕ್ಕಿ ಉತ್ಸವ ಸಾವಿರಾರೂ ಭಕ್ತರ ಸನಿಧಿಯಲ್ಲಿ ಡೊಳ್ಳು ಕುಣಿತ, ಕರಡಿ ಮಜಲು, ಹಲಗಿ ಮೇಳದೊಂದಿಗೆ ಅತಿ ವಿಜೃಂಭನೆಯಿಂದ ನಡೆಯಿತು. ಗೋವಾ,ಮಹಾರಾಷ್ಟ್ರ, ಸೇರಿದಂತೆ ಗ್ರಾಮದ ಸುತ್ತ ಮುತ್ತಲಿನ ಸೇರಿರುವ ಭಕ್ತಾಧಿಗಳು ಬೆಂಡು,ಬೆತ್ತಸ,ಕಾರಿಕು,ಉತತ್ತಿ ಪಲ್ಲಕ್ಕಿ ಮೇಲೆ ಹಾರಿಸಿ ಪುಣಿಥರಾದರು.ಶ್ರೀ ಬಲಭೀಮದೇವರ ಪಲ್ಲಕ್ಕಿಯು ಗ್ರಾಮದ ದಾಸರ ಕುಟುಂಬದ ದಾಸರ ಹಾಡುವ ಮೂಲಕ ಪಲ್ಲಕ್ಕಿ ಉತ್ಸವಕ್ಕೆ ಚಾಲನೆ ಸಿಕ್ಕಿತು. ನಂತರ ಪಲ್ಲಕ್ಕಿ ದೇವಸ್ಥಾನವನ್ನು ಐದು ಪ್ರದಕ್ಷಿಣೆ ಹಾಕಿತು. ಭಕ್ತರು ಸೇರಿ ಪಲ್ಲಕ್ಕಿ ಉತ್ಸವದಲ್ಲಿ ವೀರಾಂಜನೆಯನ ಹಾಡುಗಳನ್ನು ಹಾಡುತ್ತಾ, ಬೆಂಡು,ಬೆತ್ತಸ,ಕಾರಿಕು,ಉತತ್ತಿ ಹಾರಿಸುತ್ತಾ ದೇವರ ಕೃಪೆಗೆ ಪಾತ್ರರಾದರು.
ಪಲ್ಲಕ್ಕಿ ಉತ್ಸವದ ನಂತರ ಮಹಾಪೂಜೆ ಮತ್ತು ಮಂಗಳಾರುತಿ ನಡೆಯಿತು. ಭಕ್ತರು ಮಕ್ಕಳಿಗೆÀ ವಿದ್ಯೇ,ಬುದ್ದಿ,ಆಯುಷ,ದಯಪಾಲಿಸಲಿ ಮತ್ತು ನಮ್ಮಗೆ ಗಂಡು-ಹೆಣ್ಣು ಮಗುವಾದರೆ ದೇವಾ ನಿನ್ನ ಪಲ್ಲಕ್ಕಿಯ ಕೆಳಗೆ ಹಾಯಿಸುವೆ ಎಂದು ಬೇಡಿಕೊಂಡ ಭಕ್ತರು 200 ಕ್ಕೂ ಹೆಚ್ಚು ಮಕ್ಕಳನ್ನು ಶ್ರೀ ಬಲಭೀಮನ ಪಲ್ಲಕ್ಕಿ ಕೆಳಗೆ ಮಕ್ಕಳನ್ನು ಪಾರು ಹಾಯಿಸಿ ಹರಕೆ ತೀರಿಸಿದರು. ನಂತರ ಮಹಾಪ್ರಸಾದ ನಡೆಯಿತು. ನಂತರ ಶ್ರೀ ರಾಮ ಜಪಯಜ್ಞ ಕಾರ್ಯಕ್ರಮಕ್ಕೆ ಮುಕ್ತಾಯ ಕಾರ್ಯಕ್ರಮ ನಡೆಯಿತು.