ಕಲಾವಿದರ ಮಾಸಾಸನೆ ವಯಸ್ಸು 45 ಇಳಿಕೆಮಾಡಬೇಕು ರಜನಿ ಜೀರಗ್ಯಾಳ
ಕುಲಗೋಡ: ಕಲಾವಿದರ ಮಾಸಾಸನೆ ವಯಸ್ಸು 45 ಇಳಿಕೆಮಾಡಬೇಕು. ಉತ್ತರ ಕರ್ನಾಟಕದ ಮೂಲ ಕಲೆಗಳಿಗೆ ಕಾಯಕಲ್ಪ ನೀಡಬೇಕು. ಕುಲಗೋಡ ತಮ್ಮಣ್ಣ ಸ್ಮಾರಕಭವನ ಪಾರಿಜಾತ ತವರು ನೆಲದಲ್ಲಿ ಸ್ಥಾಪಿಸಿ ಎಂದು ಸಿರಿಗನ್ನಡ ಮಹಿಳಾ ವೇದಿಕೆ ರಾಜ್ಯಾಧ್ಯಕ್ಷೆ ರಜನಿ ಜೀರಗ್ಯಾಳ ಹೇಳಿದರು.
ಇವರು ಮೂಡಲಗಿ ತಾಲೂಕಿನ ಕುಲಗೋಡ ಗ್ರಾಮದಲ್ಲಿ ಪಾರಿಜಾತ ಪಿತಾಮಹ ಕುಲಗೋಡ ತಮ್ಮಣ್ಣ ಪ್ರತಿಷ್ಠಾನ ಆಯೋಜಿಸಿದ ಪಾರಿಜಾತ ಉತ್ಸವ ಉದ್ಘಾಟಿಸಿ ಮಾತನಾಡಿ ಶ್ರೀಕೃಷ್ಣ ಪಾರಿಜಾತ. ದಟ್ಟಿ ಕುಣಿತ. ಕರಡಿ ಮಜಲು. ಹಂತಿ.ಲಾವಣಿ. ಸೋಬಾನ.ಬಿಸುಕಲ್ಲು. ರಿವಾಯತ ಕೈವಲ್ಯ ಪದ್ದತಿ ಭಜನ ಪದಗಳು ಮುಂತಾದ ಉ.ಕರ್ನಾಟಕದ ಮೂಲ ಕಲೆಗಳ ತರಬೇತಿ ಕೇಂದ್ರವನ್ನು ಒಂದೇ ಸೂರಿನಲ್ಲಿ ಸ್ಥಾಪಿಸಬೇಕು ಎಂದರು.
ಸಮಾರಂಭದಲ್ಲಿ ನಿವೃತ್ತ ಶಿಕ್ಷಕರಾದ ಪಾರ್ತತಿ ಹಿರೇಮಠ. ಭೀಮಶೆಪ್ಪ ಸಸಾಲಟ್ಟಿ ಇವÀರಿಗೆ ಸತ್ಕರಿಸಲಾಯಿತು.
ವೇದಿಕೆಯ ಅಧ್ಯಕ್ಷತೆ ಡಾ// ಬಿ.ಬಿ ದೇವರ ವಹಿಸಿದ್ದರು. ಟಿ.ಎ.ಪಿ.ಸಿ.ಎಮ್.ಎಸ್.ಆದ್ಯಕ್ಷ ಅಶೋಕ ನಾಯಿಕ. ಬಸನಗೌಡ ಪಾಟೀಲ. ಸುಭಾಸ ವಂಟಗೋಡಿ. ಗ್ರಾಪಂ ಅಧ್ಯಕ್ಷೆ ವಿಮಲಾ ಸಸಾಲಟ್ಟಿ. ಡಾ// ರಂಜನ ದೇವರ. ಶ್ರೀಕಾಂತ ನಾಯಿಕ. ಸತೀಶ ವಂಟಗೋಡಿ. ಬಸವರಾಜ ಯರಗಟ್ಟಿ. ಶಿವನಗೌಡ ಪಾಟೀಲ. ಬಸವರಾಜ ದೇವರ. ಅಲ್ಲಪ್ಪ ಪರುಶೆಟ್ಟಿ. ಮಾರುತಿ ಬಾಗಿಮನಿ. ವಾಸಪ್ಪ ಪೂಜೇರಿ. ದತ್ತಾತ್ರೇಯ ಕುಲಕರ್ಣಿ ಇದ್ದರು.
ಪ್ರಾಸ್ತಾವಿಕ ಪ್ರತಿಷ್ಠಾನ ಅಧ್ಯಕ್ಷ ರಮೇಶ ಕೌಜಲಗಿ. ಮಲ್ಲೇಶ ಮುರಕಟ್ನಾಳ ಸ್ವಾಗತಿಸಿ ನಿರೂಪಿಸಿದರು. ಎಲ್.ಆರ್ ಪೂಜೇರಿ ವಂದಿಸಿದರು.