ತಾಕತ್ತು ಇದ್ದಾಗ ತಂದೆ ತಾಯಿ ಗುರುಹಿರಿಯರ ಸೇವೆ ಮಾಡಬೇಕು
ಕುಲಗೋಡ: ತಾಕತ್ತು ಇದ್ದಾಗ ತಂದೆ ತಾಯಿ ಗುರುಹಿರಿಯರ ಸೇವೆ ಮಾಡಬೇಕು. ಭಕ್ತಿ ಇದ್ದಲ್ಲಿ ಶರಣಾಗತಿಯಾಗಬೇಕು. ಹಣ ಇದ್ದಾಗ ದಾನ ಮಾಡಬೇಕು ಮಲ್ಲೇಶ್ವರ ಶರಣರು ಸುಜ್ಞಾನ ಕುಟೀರ ಹಡಗಿನಾಳ ಇವರು ಹೇಳಿದರು.
ಇವರು ಮೂಡಲಗಿ ತಾಲೂಕಿನ ಹೊನಕುಪ್ಪಿ ಗ್ರಾಮದ ಶ್ರೀ ಚಂದ್ರಮ್ಮದೇವಿ ಕೈವಲ್ಯ ಮಠದ ಜಾತ್ರಾ ಮಹೋತ್ಸವ ಉದ್ದೇಶಿಸಿ ಮಾತನಾಡಿ ಮೋಬೈಲ ಮನೆ ಮನಸು ಹಾಳು ಮಾಡುತ್ತೀದೆ. ಗುರುಭಕ್ತಿ ಕಡಿಮೆಯಾಗುತ್ತಿದೆ. ಅದಕ್ಕಾಗಿ ಇಂತಹ ಸತ್ಸಂಗ ಕಾರ್ಯಕ್ರಮಗಳು ನಡೆಯಬೇಕು. ಮಾತೆಯ ಜಾತ್ರಾ ಮಹೋತ್ಸವದ ನಿಮಿತ್ಯ 48 ದಿನಗಳವರೆಗೆ ಆಧ್ಯಾತ್ಮಿಕ ಪ್ರವಚನ ಹಾಗೂ ಪ್ರತಿ ದಿನ ಊಟದ ವ್ಯವಸ್ಥೆ ಮಾಡಿದ್ದು ಈ ಜನರ ಭಕ್ತಿ ತೊರಿಸುತ್ತದೆ ಎಂದರು.
ಗ್ರಾಮದ ಶ್ರೀ ಕನಕದಾಸರ ವೃತ್ತದಿಂದ ಮುತ್ತೈದೆಯರ ಆರತಿ.ಕರಡಿ ಮಜಲು. ಹಲಗೆಮೇಳ. ಡುಳ್ಳು ಕುಣಿತದೊಂದಿಗೆ ತೆರೆದ ವಾಹನದಲ್ಲಿ ಮಾತೆಯ ಪೋಟೋ ಭವ್ಯ ಮೆರವಣಿಗೆ ಮೂಲಕ ಚಂದ್ರಮ್ಮದೇವಿ ಮಠಕ್ಕೆ ಆಗಮಿಸಿದರು. ನಂತರ ಸೇರಿರುವ ಭಕ್ತರಿಗೆ ಶ್ರೀಗಳ ಆರ್ಶೀವಚನ ನೀಡಿದರು. ನಂತರ ಮಹಾಪ್ರಸಾದ ನಡೆಯಿತು.
ಸಂದರ್ಭದಲ್ಲಿ ಶ್ರೀ ಸುರೇಶ್ವರ ಮಹಾರಾಜರು ಶ್ರೀ ರೇವಣಸಿದ್ದೇಶ್ವರ ಮಠ ತಪಸಿ. ವೇದಮೂರ್ತಿ ಶಿವಾಯನಮಂ ಶಾಸ್ರ್ತಿಗಳು ಬೆಕ್ಕೆರಿ. ವೇದಮೂರ್ತಿ ಪರಮಪೂಜ್ಯ ಶರಣ ಬಸಪ್ಪ ಅಜ್ಜನವರು ಶ್ರೀ ಚಂದ್ರಮ್ಮದೇವಿ ಕೈವಲ್ಯ ಮಠ ಹೊನಕುಪ್ಪಿ. ಶ್ರೀ ವಿಠ್ಠಲ ದೇವಋಷಿಗಳು ಕೌಜಲಗಿ. ಸಿದ್ದಪ್ಪ ಹೆಗಡೆ. ಸುರೇಶ ಹೆಗಡೆ. ಸುರೇಶ ಹಾರೂಗೇರಿ. ಬೀರಪ್ಪ ಹುಲಗನಗನವರ. ಲಕ್ಕಪ್ಪ ಬೆಳಗಲಿ. ಸಿದ್ರಾಯಪ್ಪ ಬೆಳಗಲಿ. ಗಳ್ಯಾಪ್ಪ ಹೆಗಡೆ. ಹಾಗೂ ಗ್ರಾಮಸ್ಥರು, ಭಕ್ತಾಧಿಗಳು ಇದ್ದರು.