ಮಾರ್ಚ್ 15 ರ ಗಡುವಿನ ಒಳಗೆ ಪಂಚಮಸಾಲಿ ಸಮಾಜಕ್ಕೆ 2ಅ ಮೀಸಲಾತಿ ನೀಡಬೇಕು
ಕುಲಗೋಡ: ಮಾರ್ಚ್ 15 ರ ಗಡುವಿನ ಒಳಗೆ ಪಂಚಮಸಾಲಿ ಸಮಾಜಕ್ಕೆ 2ಅ ಮೀಸಲಾತಿ ನೀಡಿದೆ ಹೋದರೆ ಮುಂಬರುವ ವಿಧಾನಸಭೆ ಚುನಾವಣೆಯ ಮತಯಂತ್ರದಲಿ ಹಾಲಿ ಸರ್ಕಾರಕ್ಕೆ ನಮ್ಮ ಪಂಚಮಸಾಲಿ ಶಕ್ತಿ ತೋರಿಸುತ್ತೆವೆ. ಎಂದು ರಸ್ತೆ ತಡೆ ಪ್ರತಿಭಟನೆ ಉದ್ದೇಶಿಸಿ ರಮೇಶ ಲವಪ್ಪ ಕೌಜಲಗಿ ಸರ್ಕಾರಕ್ಕೆ ಎಚ್ಚರಿಕೆ ನೀಡಿದರು.
ಇವರು ಮೂಡಲಗಿ ತಾಲೂಕಿನ ತಿಗಡಿ ಗ್ರಾಮದ ಭಗೀರಥ (ಕಲ್ಲು ಕಣಿವೆ) ವೃತ್ತದಲ್ಲಿ ಬ್ರಹತ್ ರಸ್ತೆ ತಡೆ ನಡೆಸಿ ಪ್ರತಿಭಟನೆ ಉದ್ದೇಶಿಸಿ ಮಾತನಾಡಿ ರಾಜ್ಯದಲ್ಲಿ ಚಿಕ್ಕ ಸಮಾಜಕ್ಕೆ ಮೀಸಲಾತಿ ನೀಡಿದ್ದು ಪಂಚಮಸಾಲಿ ಸಮಾಜ ಕೋಟ್ಯಾಂತ ಜನರಿದ್ದು ನಮ್ಮ ಮತ ಪಡೆದು ಅಧಿಕಾರದಲಿದ್ದರು ನಿರ್ಲಕ್ಷ ಮಾಡುತ್ತಿದೆ ಎಂದರು.
ಪ್ರತಿಭಟನೆ ಉದ್ದೇಶಿಸಿ ಪಂಚಮಸಾಲಿ ಸಮಾಜದ ಮೂಡಲಗಿ ತಾಲ್ಲೂಕಾ ಪ್ರಧಾನ ಕಾರ್ಯದರ್ಶಿ ಪ್ರಕಾಶ ಕಾಳಶೆಟ್ಟಿ. ತಾಲ್ಲೂಕಾ ರೈತ ಸಂಘದ ಅಧ್ಯಕ್ಷ ಈರಣ್ಣಾ ಸಸಾಲಟ್ಟಿ. ಲಿಂಗರಾಜ ಅಂಗಡಿ. ಸಂಜು ಬಾಗೇವಾಡಿ. ಈರಣ್ಣ ನೇಸರಗಿ. ಪ್ರಕಾಶ ದರೂರ ಮಾತನಾಡಿದರು.
ಕುಲಗೋಡ. ತಳಕಟನಾಳ. ಅರಳಿಮಟ್ಟಿ. ಅವರಾದಿ. ಢವಳೇಶ್ವರ. ಬೀಸನಕೊಪ್ಪ. ಹುಣಶ್ಯಾಳ ಪಿ. ವಾಯ್. ಸುಣಧೋಳಿ ಗ್ರಾಮಗಳ ಪಂಚಮಸಾಲಿ ಸಮಾಜದ ಧುರೀಣರಾದ ಹಣಮಂತ ರಡ್ಡೆರಹಟ್ಟಿ. ಗೋಪಾಲ ಬಿಳ್ಳೂರ. ಪ್ರಕಾಶ ಪಾಟೀಲ. ಹಣಮಂತ ಬಿಳ್ಳೂರ. ರಮೇಶ ಜಗದಾಳ. ಆನಂದ ಸಸಾಲಟ್ಟಿ. ಭಾಗವಹಿಸಿದ್ದರು. ನೂರಾರು ಜನಸಂಖ್ಯೆಯಲ್ಲಿ ಸೇರಿ ರಸ್ತೆ ತಡೆ ಪ್ರತಿಭಟನೆ ಯಲ್ಲಿ ಭಾಗಿಯಾಗಿದ್ದರು.
ಉಪ ತಹಶಿಲ್ದಾರರ ರಾಜಶೇಖರ ತೆಲಸಂಗ ಸರ್ಕಾರದ ಪರವಾಗಿ ಪ್ರತಿಭಟನಾ ನಿರತರಿಂದ ಮನವಿ ಸ್ವೀಕರಿಸಿ ಕೇಂದ್ರ ಸರ್ಕಾರಕ್ಕೆ ಪ್ಯಾಕ್ಸ್ ಮೂಲಕ ಕಳುಹಿಸುವದು ಎಂದು ಹೇಳಿ ಪ್ರತಿಭಟನೆಗಾರರ ಮನವಲಸಿದರು.