ಕೆನರಾ ಬ್ಯಾಂಕ್: ಅವ್ಯವಸ್ಥೆಯ ಆಗರ
inmudalgi
ನವೆಂಬರ್ 15, 2021
Recent Posts, ತಾಲ್ಲೂಕು, ಬೆಳಗಾವಿ
ಕೆನರಾ ಬ್ಯಾಂಕ್: ಅವ್ಯವಸ್ಥೆಯ ಆಗರ
ವರದಿ: ಶಂಕರ ಹಾದಿಮನಿ
ಕುಲಗೋಡ: ಮೂಡಲಗಿ ತಾಲೂಕಿನ ಕುಲಗೋಡ ಗ್ರಾಮದ ಕೆನರಾ ಬ್ಯಾಂಕ್ ಅವ್ಯವಸ್ಥೆಯ ಆಗರವಾಗಿದ್ದು. ವ್ಯವಹಾರಕ್ಕೆ ಜನರು ಪರಿದಾಡುವ ಪರಿಸ್ಥಿತಿ ಎದುರಿಸುತ್ತಿದ್ದರು ಅಧಿಕಾರಿಗಳು ಸರಿಯಾಗಿ ಸ್ಪಂದನೆ ನೀಡದಿರುವದು ಜನರ ಆಕ್ರೋಶಕ್ಕೆ ಕಾರಣವಾಗಿದೆ.
ಕೆನರಾ ಬ್ಯಾಂಕ 1974 ರಲ್ಲಿ ಪ್ರಾರಂಭವಾಗಿದ್ದು ಸುತ್ತಲಿನ ಹತ್ತಾರು ಗ್ರಾಮಗಳಲ್ಲಿನ 10 ಸಾವಿರಕ್ಕೂ ಹೆಚ್ಚು ಗ್ರಾಹಕರನ್ನು ಹೊಂದಿದೆ. ವರ್ಷಕ್ಕೆ ನೂರಾರು ಕೋಟಿ ವಹಿವಾಟು ನಡೆಸುತ್ತಿದೆ.
ಸರಕಾರದ ತಿಂಗಳ ಮಾಸಾಚನೆ ಹಣದ ಆಸರೆಯಾದ ವೃದ್ಧರು, ಅಂಕವಿಕಲರು, ವಿಧವೇಯರು ದಿನವೀಡಿ ಸಾಲಿನಲ್ಲಿ ನಿಂತು ಹೈರಾನಾಗುತ್ತಿದ್ದು. ಕೆನರಾ ಬ್ಯಾಂಕ ಜೊತೆ ಸಿಂಡಿಕೇಟ ಬ್ಯಾಂಕ ವೀಲಿನವಾದಾಗಿನಿಂದ ವ್ಯವಹಾರ, ಸಿಬ್ಬಂದಿ ಹೆಚ್ಚಾದರೆ ಹೊರತು ಗ್ರಾಹಕರಿಗೆ ಅನುಕೂಲವಾಗಿಲ್ಲಾ. 2 ಬ್ಯಾಂಕ್ ಗಳ ವಿಲೀನದಿಂದ ಗ್ರಾಹಕರು ಹೆಚ್ಚಾಗಿದ್ದು 1 ಕ್ಯಾಶ್ ಕೌಂಟರ್ ಇದ್ದು ಇಡೀದಿನ ನಿಂತು ಹಣ ಪಡೆಯುವಂತಾಗಿದೆ ಎಂದು ಜನರ ಕಿಡಿಕಾರುತ್ತಿದ್ದರೆ. ಕೂಡಲೇ ಅಧಿಕಾರಿಗಳು ಕನ್ನಡ ಮಾತನಾಡುವ ಅಧಿಕಾರಿಗಳನ್ನು ನೆಮಕ ಮಾಡಬೇಕೂ ಮತ್ತು ಎಟಿಎಮ್, ಕ್ಯಾಶ ಕೌಂಟರ್ 2 ಮಾಡಬೇಕು ಇಲ್ಲದಿದ್ದರೇ ಬರುವ ದಿನಗಳಲ್ಲಿ ಉಗ್ರಕ್ರಮಕ್ಕೆ ಮುಂದಾಗೂತ್ತೇವೆ ಎಂದು ಗ್ರಾಮಸ್ಥರ ಆಗ್ರಹವಾಗಿದೆ.

ಹಣ ತೆಗೆಯಲ್ಲು ಸಾಹಸ:
ರೈತ ಬ್ಯಾಂಕಿನಲ್ಲಿ ಇಟ್ಟ ಕೃಷಿ ಉತ್ಪನ್ನ ಹಣ ಹಿಂಪಡೆಯಲು ದಿನವಿಡಿ ಸರತಿ ಸಾಲಿನಲ್ಲಿ ನಿಂತು ಪಡೆಯುವಂತಾಗಿದೆ. ಅನಾರೋಗ್ಯ ಸೇರಿದಂತೆ ಇನ್ನಿತರ ತುರ್ತು ಕಾರಣಗಳಿಗೆ ಹಣಕ್ಕಾಗಿ ಇನ್ನಿಲದ ತೊಂದರೆ ಅನುಭವಿಸುತ್ತಿದ್ದಾರೆ. ಇತ್ತ ಎಟಿಎಮ್ ಅವ್ಯವಸ್ಥೆ ಅತ್ತ ಬ್ಯಾಂಕನಲ್ಲಿ ಸರದಿ ಸಾಲು ನಿಲ್ಲಲಾಗದೇ ವೃದ್ಧರು, ಮಹಿಳೆಯರು ಹಾಗೂ ವಿಕಲಚೇತನರು ತ್ರಾಸು ಅನುಭವಿಸಿತ್ತಿದ್ದಾರೆ. ಎಟಿಎಮ್ ದುರಸ್ತಿ ಬಗ್ಗೆ ಬ್ಯಾಂಕ್ ಅಧಿಕಾರಿಗಳಿಗೆ ಮನವರಿಕೆ ಮಾಡಿದರೂ ತಾಂತ್ರಿಕ ಕಾರಣ ಹೇಳುತ್ತಾರೆ. ಯಾವಾಗ ನೋಡಿದರು ಹಣವಿಲ್ಲದೆ ಹಿಡಿ ಶಾಪ್ ಹಾಕಿ ಕಾಲಿ ಕೈಯಲ್ಲಿ ಹಿಂದುರುಗುತ್ತಿರುವ ಗ್ರಾಹಕರು.
ಕನ್ನಡ ಬರದ ಅಧಿಕಾರಿಗಳು :
ಬ್ಯಾಂಕಿನ ಅಧಿಕಾರಿಗಳು ಸಂಪೂರ್ಣ ಹಿಂದಿಯಲ್ಲಿ ಮಾತನಾಡುತ್ತಿದ್ದು ಗ್ರಾಮೀಣ ಜನರು ಗೃಹ, ವಾಹನ, ಶಿಕ್ಷಣ, ವೈಯಕ್ತಿಕ, ಚಿನ್ನಾಭರಣ, ಕೃಷಿ ಸಾಲ ಸೇರಿದಂತೆ ಹಲವು ಬಗೆಯ ಸಾಲಗಳ ಬಗ್ಗೆ ಮಾಹಿತಿ ಪಡೆಯಲು ಹೋದರೆ ಭಾಷೆ ತೊಂದರಿಯಿಂದ ಸರಿಯಾಗಿ ಮಾಹಿತಿ ಪಡೆಯದೆ ಹೋಗುತ್ತಿದ್ದು. ಬ್ಯಾಂಕ್ ಕೇಲಸ ಮಾಡಿಕೊಳ್ಳಲು ಹಿಂದಿ ಮಾತನಾಡುವ ವ್ಯಕ್ತಿ ಹುಡುಕುವ ಪರಿಸ್ಥಿತಿ ಗ್ರಾಹಕರು ಅನುಭವಿಸುತ್ತಿದ್ದರೆ.
ಗ್ರಾಹಕ/ ಮುಖಂಡ ಸುಭಾಸ ವಂಟಗೋಡಿ ಹೇಳಿಕೆ:
ಕೆನರಾ ಬ್ಯಾಂಕ ಜೊತೆ ಸಿಂಡಿಕೇಟ ಬ್ಯಾಂಕ ವಿಲಿನ ಮಾಡಿದ್ದು ಈ ತೊಂದರಿಗೆ ಕಾರಣವಾಗಿದ್ದೆ. ಕನ್ನಡ ಮಾತಾಡುವವರು ಅಧಿಕಾರಿಗಳ ಇರಬೇಕು. ಹಣ ತುಂಬಿ ತೆಗೆಯಲು 1 ಕೌಂಟರ ಇರುವದು ಸರತಿ ಸಾಲಿಗೆ ಕಾರಣವಾಗಿದೆ. ಸಬಂಧ ಪಟ್ಟ ಅಧಿಕಾರಿಗಳು ಹೆಚ್ಚುವರಿ ಕೌಂಟರ, ಎಟಿಎಮ್ ದುರಸ್ಥಿ ಮಾಡಬೇಕು. ಇಲ್ಲದಿದ್ದರು ಮುಂದಿನ ವಾರದಲ್ಲಿ ಬ್ಯಾಂಕ ಬಳಿ ಮುಷ್ಕರ ಮಾಡಲಾಗುವದು.
ಕೆನರಾ ಬ್ಯಾಂಕ ಮ್ಯಾನೇಜರ ಅಮೋಘ ಗಾಣಗಿ ಹೇಳಿಕೆ:ಭಾಷೆಯ ಸಮಸ್ಯ ಇದೆ ಗ್ರಾಹಕರಿಗೆ ತೊಂದರೆ ಆಗ್ತಿದೆ ಈ ಕುರಿತು ಗ್ರಾಪಂ ನಿಂದ ಮನವಿ ಬಂದಿದೆ. ಚಿಕ್ಕೋಡಿ ರಿಜಿನಲ್ ಆಪೀಸ್ ಗೆ ಕಳುಹಿಸಿದ್ದೇವೆ. ಅವರು ಕನ್ನಡಿಗರನ್ನು ಕಳಿಸಬೇಕು ನಾ ಏನು ಮಾಕೋಕ್ಕೆ ಆಗಲ್ಲಾ.