ಕುಲಗೋಡ: ಗೋವಿನ ಜೋಳದ ಲದ್ದಿ ಹುಳ ನಿಯಂತ್ರಣಕ್ಕೆ “ಇಮಾಮ್ ಮೆಕ್ಟಿನ್ ಬೆಂಜೋಯಟ್” ಸರಿಯಾದ ಪ್ರಮಾಣದಲ್ಲಿ ಬಳಸಿ ಉತ್ತಮ ಇಳುವರಿ ಪಡೆಯಿರಿ ಎಂದು ನಿವೃತ್ತ್ ಸಹಾಯಕ ಕೃಷಿ ಅಧಿಕಾರಿ, ಶ್ರೀ ವ್ಹಿ ಎಮ್ ಹೊಸೂರ ಇವರು ತಿಳಿಸಿದರು.
ಇವರು ಗೋಕಾಕ ತಾಲೂಕಿನ ಕೌಜಲಗಿ ಗ್ರಾಮದ ರಮೇಶ ದಾನನ್ನವರ ಇವರ ಹೊಲದಲ್ಲಿ ಶುಕ್ರವಾರ ಸಂಜೆ ಕೃಷಿ ಇಲಾಖೆಯ ಆತ್ಮ ಯೋಜನೆಯಡಿ ಗೋವಿನಜೋಳ ಬೆಳೆಯಲ್ಲಿ ಸಮಗ್ರ ಕೀಟ ನಿರ್ವಹಣೆ ಕುರಿತು ಕ್ಷೇತ್ರ ಪಾಠಶಾಲೆ ಕಾರ್ಯಕ್ರಮದಲ್ಲಿ ಮಾತನಾಡಿ ರೈತರು ಬೆಳೆಗಳಿಗೆ ರಾಸಾಯನಿಕ ಬಳಕೆ ನಿಲ್ಲಿಸಿ ಸಾವಯವ ಕೃಷಿಗೆ ಒತ್ತುನೀಡಬೇಕು, ನಮ್ಮನ್ನು ನಾವು ರಕ್ಷಿಸಿಕೊಳ್ಳಬೇಕು, ದೀರ್ಘ ಆಯುಷ್ಯವಂತರಾಗಬೇಕು ಎಂದರು.
ಕೃಷಿ ಇಲಾಖೆ ಆತ್ಮ ಯೋಜನೆ ಅಧಿಕಾರಿ ವಿನೋದ ಬಾಗಿಮನಿ ಹಿಂಗಾರು ಹಂಗಾಮಿನ ಬೆಳೆ ಸಮೀಕ್ಷೆ,ಇಲಾಖೆಯಲ್ಲಿ ರೈತರಿಗೆ ಸಿಗುವ ಸೌಲಭ್ಯಗಳ ಕುರಿತು ಮಾಹಿತಿಯನ್ನು ನೀಡಿದರು.
ಕಾರ್ಯಕ್ರಮದಲ್ಲಿ ಹಣಮಂತ ಕುಂದರಗಿ, ಯಲ್ಲಪ್ಪ ಸುನ್ನಾಳ, ಗಂಗಾಧರ ಲೋಕನ್ನವರ, ಬಸಪ್ಪ ದಳÀವಾಯಿ, ಬಸಪ್ಪ ದಾನನ್ನವರ, ಭೀಮಪ್ಪ ಯಡವನ್ನವರ, ರಮೇಶ ಹೊಸಮನಿ, ಲಕ್ಷ್ಮಣ ಕುಂದರಗಿ, ಭೀಮಪ್ಪ ಕುಂದರಗಿ, ರಮೇಶ ಸುನ್ನಾಳ. ಅಶೋಕ ಕುಲಗೋಡ. ಪುಂಡಲೀಕ ಕೋಟಿನತೋಟ, ಬಸಪ್ಪ ಹಣಗಂಡಿ, ರೈತರು ಹಾಗೂ ಗ್ರಾಮದ ಹಿರಿಯರು ಹಾಜರಿದ್ದರು.