ಸೋಕಿತರಿಗೆ ನೆರವಾದ ಜನಹಿತ ಟ್ರಸ್ಟ್
ನಿತ್ಯವೂ ಕುಲಗೋಡ ಕೋವಿಡ್ ಕೇಂದ್ರದ ರೋಗಿಗಳಿಗೆ ಮೂರು ಹೊತ್ತು ಊಟ ಉಪಹಾರ
ಕುಲಗೋಡ: ಕೋವಿಡ್ ಸೊಂಕಿತರು ಇದ್ದರೆ ಅದೇ ಕುಟುಂಬದ ಸದಸ್ಯರು ಊಟ ಉಪಹಾರವನ್ನು ಆಸ್ಪತ್ರೆ ಬಾಗಿಲಲ್ಲಿ ಇಟ್ಟು ಹೋಗುತ್ತಿರುವ ಹಾಗೂ ಮನೆಯಲ್ಲಿ ಸೊಂಕಿತರಿದ್ದರೆ ಅವರ ರೂಮ್ ಮುಂದೆ ಊಟ ಉಪಹಾರ ಇಡುತ್ತಿರುವ ಇಂದಿನ ದಿನಗಳಲ್ಲಿ ಮುಧೋಳ ಜನ ಹಿತ ಟ್ರಸ್ ಸೊಂಕಿತರ ಸ್ನೇಹಿಯಾಗಿ ಅವರು ಚಿಕಿತ್ಸೆ ಪಡೆಯುತ್ತಿರುವ ಸ್ಥಳಕ್ಕೆ ಹೋಗಿ ಊಟ ಉಪಹಾರ ನೀಡುವುದರ ಜೊತೆಗೆ ಶೀಘ್ರ ಗುಣಮುಖರಾಗಿ ನಮ್ಮ ಜತೆಗೆ ಬನ್ನಿ ಎನ್ನುವ ಸಿಹಿ ಮಾತು ರೋಗಿಯ ಅರ್ಧ ರೋಗ ಕಡಿಮೆ ಮಾಡುತ್ತಿದೆ ಇಂತಹ ರೋಗಿಗಳ ಆತ್ಮ ವಿಶ್ವಾಸ ಹೆಚ್ಚಿಸುವ ಕಾರ್ಯಮಾಡುತ್ತಿದ್ದಾರೆ. ಮುಧೋಳದ ಜನಹಿತ ಟ್ರಸ್ಟ್ ಸದಸ್ಯರು ಅದು ಯಾವುದೇ ಪ್ರಚಾರದ ಅಪೇಕ್ಷೆ ಇಲ್ಲದೆ ಮಾಡುತ್ತಿರುವ ಸೇವೆ ಸಾರ್ವತ್ರಿಕವಾಗಿ ಮೆಚ್ಚುಗೆಗೆ ಪಾತ್ರವಾಗಿದೆ.’
ಮೂಡಲಗಿ ತಾಲೂಕಿನ ಕುಲಗೋಡ ಗ್ರಾಮದಲ್ಲಿ ಮಾನ್ಯ ಶಾಸಕರಾದ ಬಾಲಚಂದ್ರ ಜಾರಕಿಹೊಳಿ ಇವರ ಕ್ಷೇತ್ರದ ಜನರ ಹಿತಕ್ಕಾಗಿ ಗ್ರಾಮದ ಎಸ್.ಸಿ.ಎಸ್.ಟಿ ಹಾಸ್ಟೇಲನಲ್ಲಿ 30 ಬೇಡಗಳ ಕೋವಿಡ್ ಸೆಂಟರ ತೆಗೆದಿದ್ದು 30 ಜನ ಸೋಂಕಿತರು ಆರೈಗೆಯಾಗುತ್ತಿದ್ದು ಕಳೆದ ವಾರದಿಂದ ಪ್ರತಿ ದಿನ ಉಪಹಾರ, ಮಧ್ಯಾಹ್ನ ಹಾಗೂ ರಾತ್ರಿ ರುಚಿಯಾದ ಹಾಗೂ ಸುಚಿಯಾದ ಊಟ ಪ್ರೂಟ್ಸ್ ಸಲಾಡ್ ಉಪಹಾರ ನೀಡುತ್ತಿರುವುದಾಗಿ ಸಂಸ್ಥೆಯ ಅಧ್ಯಕ್ಷ ರಾಜು (ನಾರಾಯಣ) ಯಡಹಳ್ಳಿ ಹೇಳಿದ್ದಾರೆ.
ಮುಂಜಾನೆ ಶುದ್ಧ ನೀರಿನ ಬಾಟಲ್, ಉಪ್ಪಿಟ್ಟು, ಅವಲಕ್ಕಿ ಸುಸಲಾ, ಚುರಮುರಿ ಸುಸಲಾ, ಶ್ಯಾವಗಿ ಉಪ್ಪಿಟ್ಟು ಪಲಾವ್, ಇಡ್ಲಿ, ಉಪಹಾರವಾಗಿ ನೀಡುತ್ತೇವೆ ಎಂದು ಗ್ರಾಮದ ಮುಖಂಡ ಬಸನಗೌನ ಪಾಟೀಲ ಹೇಳಿದ್ದಾರೆ.
ಮಧ್ಯಾಹ್ನ ಊಟಕ್ಕೆ ಎರಡು ಚಪಾತಿ, ವಿವಿಧ ಬಗೆಯ ಎರಡು ತರಹದ ಪಲ್ಯೆ, ಪಲಾವು ಅಧವಾ ಮಸಲಾ, ಜೀರಾ ರೈಸ್, ಸಾಂಬರ, ಸಲಾಡ್, ಶುದ್ಧ ನೀರಿನ ಬಾಟಲ್ ನೀಡಲಾಗುತ್ತಿದೆ.ರಾತ್ರಿ ಊಟಕ್ಕೆ ಎರಡು ಚಪಾತಿ, ವಿವಿಧ ಬಗೆಯ ಒಂದು ತರಹದ ಪಲ್ಯೆ, ಮೊಟ್ಟೆ, ಅನ್ನ ಸಾಂಬರ, ಉಪ್ಪಿನ ಕಾಯಿ ಸಲಾಡ್, ಶುದ್ಧ ನೀರಿನ ಬಾಟಲ್ ನೀಡಲಾಗುತ್ತಿದೆ ಎಂದು ಸುಭಾಸ ವಂಟಗೋಡಿ ವಿವರಿಸುತ್ತಿದ್ದಾರೆ.
ನಿತ್ಯವೂ: ಮುಂಜಾನೆ 7 ಕ್ಕೆ ಚಹಾ,ಹಾಲು.ಬಿಸ್ಕೆಟ್. 8:30 ಕ್ಕೆ ಉಪಹಾರ. ಮದ್ಯಾಹ್ನ 1 ಕ್ಕೆ ಊಟ. ಸಂಜೆ 4 ಕ್ಕೆ ಚಹಾ ಮತ್ತು ಬಿಸ್ಟೆಟ್, ಹಣ್ಣು, ಡೈಯ್ ಪ್ರೂಟ್ಸ. ರಾತ್ರಿ 8 ಕ್ಕೆ ಊಟ. ಹಾಗೂ ಪ್ರತಿ ಗಂಟೆಗೆ ಒಮ್ಮೆ ಬಿಸಿ ನೀರು ವೈವಸ್ಥೆ ಮಾಡಲಾಗಿದೆ.
ಜನಹಿತ ಟ್ರಸ್ಟ ಅಧ್ಯಕ್ಷ ರಾಜು ಯಡಹಳ್ಳಿ ಹೇಳಿಕೆ: ಬಾಲಚಂದ್ರ ಜಾರಕಿಹೊಳಿ ಇವರ ಆದೇಶದಂತೆ ಕೋವಿಡ್ ಸೆಂಟರಗಳಿಗೆ ಗ್ರಾಮಸ್ಥರ ಮತ್ತು ಆಧಿಕಾರಿಗಳ,ಜನಪ್ರತಿನಿಧಿಗಳ ಸಹಕಾರಿದಿಂದ ಕುಲಗೋಡ ಸೋಕಿಂತರ ಪಾಲನೆಗೆ ಮುಂದಾಗಿದ್ದು ಸೆಂಟರ ಇರುವವರೆಗೂ ನಿತ್ಯವೂ 500 ಹೆಚ್ಚು ಸೋಂಕಿತರಿಗೆ ಉಪಹಾರ,ಊಟದ ವ್ಯವಸ್ಥೆ ಮಾಡಲು ಜನಹಿತ ಟ್ರಸ್ಟ ಸಿದ್ದವಾಗಿದೆ. ಜನರು ಮನೆಯಲ್ಲಿ ಕ್ವಾರೆಂಟೈನ ಆಗದೆ ಕುಟುಂಬದ ಹಿತಗಾಗಿ ಸೆಂಟರಗಳಲ್ಲಿ ಔಷಧೋಪಚಾರ ಪಡೆಯಬೇಕು. ಶಾಸಕರ ಕರೋನ ಮುಕ್ತ ತಾಲೂಕಿಗೆ ಹೆಗಲಾಗಬೇಕು ಎಂದರು.
ಟ್ರಸ್ಟ್ ಹಾಗೂ ಸ್ನೇಹಿರಾದ ಬಸನಗೌಡ ಪಾಟೀಲ. ಸುಭಾಸ ವಂಟಗೋಡಿ, ತಮ್ಮಣ್ಣಾ ದೇವರ, ಜನಹಿತ ಟ್ರಸ್ಟ್ ಮುಖ್ಯಸ್ಥ ಶಂಕರ ಹಾದಿಮನಿ. ಶಿಕ್ಷಕರಾದ ಕೆ.ಬಿ ಬಾಗಿಮನಿ, ಎಸ್.ಎಸ್ ತಳವಾರ. ಹಾಗೂ. ಎಸ್.ಸಿ.ಎಸ್.ಟಿ ಹಾಸ್ಟೇಲ್ ಸಿಬ್ಬಂದಿ , ಆರೋಗ್ಯ ಇಲಾಖೆ ಕುಲಗೋಡ ಇದ್ದರು.