ಶಿಸ್ತಿನ ಸಂಚಾರ ಸುಗಮ ಸಂಚಾರಕ್ಕೆ ಹಾದಿ
ಪಿಎಸ್‍ಐ ಗೋವಿಂದಗೌಡ
ಕುಲಗೋಡ: ಶಿಸ್ತಿನ ಸಂಚಾರ ಸುಗಮ ಸಂಚಾರಕ್ಕೆ ಹಾದಿ ಎಂಬುವದು ಜನರು ತಿಳಿಯಬೇಕು. ವಾಹನ ಚಾಲಕರು ಮತ್ತು ಪಾದಚಾರಿಗಳು ರಸ್ತೆ ಸುರಕ್ಷತೆಯ ಬಗ್ಗೆ ಉತ್ತಮ ಶಿಸ್ತು ಮತ್ತು ಜ್ಞಾನ ಬೆಳಸಿಕೊಳಬೇಕು. ಇಲ್ಲದಿದ್ದರೇ ಜೀವ ಹಾನಿಗೆ ದಾರಿಯಾಗುತ್ತೆ ಎಂದು ಕುಲಗೋಡ ಠಾಣೆಯ ಪಿಎಸ್‍ಐ ಗೋವಿಂದಗೌಡ ಪಾಟೀಲ ಹೇಳಿದರು.

ಇವರು ಮೂಡಲಗಿ ತಾಲೂಕಿನ ಕುಲಗೋಡ ಗ್ರಾಮದ ಬಸ್ ನಿಲ್ದಾಣದಲ್ಲಿ ಆಯೋಜಿಸಿದ ರಸ್ತೆ ಸುರಕ್ಷತಾ ಸಪ್ತಾಹ ಕುರಿತು ಮಾತನಾಡಿ ಇತ್ತಿಚಿನ ದಿನಗಳಲ್ಲಿ ರಸ್ತೆ ಅಪಘಾತಗಳು ಹೆಚ್ಚಾಗುತ್ತೀವೆ ಅದರಲ್ಲಿ ಕುಡಿದ ಮತ್ತಿನಲ್ಲಿ ಮತ್ತು ರಸ್ತೆ ನಿಯಮಗಳ ಉಲಂಘನೆಯಿಂದ ಸಂಭವಿಸಿದ್ದು ಅಧಿಕವಾಗಿವೆ. ರಸ್ತೆ ನಿಯಮ ಪಾಲಿಸಿ. ವಾಹನ ದಾಖಲಾತಿಗಳ ಸರಿವಾಗಿಟ್ಟುಕೊಳಿ. ಮಧ್ಯಪಾನ ಮಾಡಿ ವಾಹನ ಓಡಿಸಬೇಡಿ. ಹೆಲ್ಮಿಟ್ ಧರಿಒಸಿ ಎಂದರು.
ಸಂದರ್ಭದಲ್ಲಿ ನಿಲ್ದಾಣಾಧಿಕಾರಿ ಎ.ಬಿ ಜಮಾದಾರ. ಮಾಜಿ ಸೈನಿಕರಾದ ಮಾರುತಿ ಬಾಗಿಮನಿ. ಕಿಷ್ಟಪ್ಪ ಬಡಕಲ್ಲ. ರಾಜು ಹಾದಿಮನಿ. ಅಶೋಕ ಹಿರೇಮೇತ್ರಿ ಸಾರಿಗೆ ಸಂಸ್ಥೆಯ ಚಾಲಕ-ನಿರ್ವಾಹಕರು ಹಾಗೂ ಗ್ರಾಮಸ್ಥರು ಇದ್ದರು.
IN MUDALGI Latest Kannada News