ಕುಲಗೋಡ ಗ್ರಾಮದಲ್ಲಿ ವಯೋನಿವೃತ್ತರಿಗೆ ಹಾಗೂ ಸಾಧಕರಿಗೆ ನಾಗರಿಕ ಸನ್ಮಾನ
ಕುಲಗೋಡ: ತಮ್ಮ ಸೇವೆಯುದ್ದಕ್ಕೂ ಒಂದು ದಿನವು ಯಾರಲ್ಲೂ ಬೇಸರವನ್ನುಂಟು ಮಾಡದ ಶಿಕ್ಷಕ ಕಲ್ಲಪ್ಪ ಬಾಗಿಮನಿ. ಎರಡು ದಶಕಗಳ ಕಾಲ ಶಾಲಾ ಅಭಿವೃದ್ದಿಯಲ್ಲಿ ಮಾಡಿ. ಮಕ್ಕಳ ಹಾಗೂ ಗ್ರಾಮಸ್ಥರ ಮೆಚ್ಚಿನ ಪ್ರಧಾನ ಗುರುಗಳಾಗಿ ಸೇವೆ ಸಲ್ಲಿಸಿದ್ದಾರೆ ಎಂದು ಮೂಡಲಗಿ ಕ್ಷೇತ್ರ ಶಿಕ್ಷಣಾಧಿಕಾರಿ ಅಜೀತ್ ಮನ್ನಿಕೇರಿ ಹೇಳಿದರು.
ಇವರು ಮೂಡಲಗಿ ತಾಲೂಕಿನ ಕುಲಗೋಡ ಗ್ರಾಮದ ಸರಕಾರಿ ಕನ್ನಡ ಹೆಣ್ಣು ಮಕ್ಕಳ ಹಿರಿಯ ಪ್ರಾಥಮಿಕ ಶಾಲೆ ಆವರಣದಲ್ಲಿ ಇಂದು ಮುಂಜಾನೆ ಕುಲಗೋಡ ಗ್ರಾಮ ಪಂಚಾಯತಿ ಆಯೋಜಿಸಿದ ವಯೋನಿವೃತ್ತಿ ಹೊಂದಿದ ಶಿಕ್ಷಕರಿಗೆ ಹಾಗೂ ಸಾಧಕರಿಗೆ ನಾಗರೀಕ ಸನ್ಮಾನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ ನಿವೃತ್ತರಾದ ಶಿಕ್ಷಕರ ನಿವೃತ್ತ ಜೀವನ ಸುಖಕರವಾಗಿರಲ್ಲಿ. ಅವರ ನಡೆದ ಬಂದ ದಾರಿ ಹಿಂದಿನ ಪೀಳಿಗೆಗೇ ಮಾರ್ಗದರ್ಶನವಾಗಲ್ಲಿ ಎಂದು ಶುಭ ಹಾರೈಸಿದರು.
ಗ್ರಾಮದ ಮುಖಂಡರು ಹಾಗೂ ಗ್ರಾಪಂ ಸದಸ್ಯ ರಾದ ಬಸನಗೌಡ ಪಾಟೀಲ ಮಾತನಾಡಿ. ಬಾಗಿಮನಿ ಶಿಕ್ಷಕರು ಹುಟ್ಟಿನಿಂದ ಕಷ್ಟದಲ್ಲಿ ಬೆಳೆದು ಶಿಕ್ಷಣಕ್ಕಾಗಿ ಉಪವಾಸ ವನವಸ ಮಾಡಿ ಶಿಕ್ಷಣ ಕಲೆತು ಮುಂದೆ ಬಂದವರು. ಅದರ ಫಲವಾಗಿ ದೇವರು ಅವರ ಇಬ್ಬರು ಮಕ್ಕಳು ವೈಧ್ಯಕೀಯ ಶಿಕ್ಷಣದಲ್ಲಿದ್ದಾರೆ ಎಂದರು.
ಕಾರ್ಯಕ್ರಮದಲ್ಲಿ ವಯೋನಿವೃತ್ತಿ ಹೊಂದಿದ ಸ.ಕ.ಹೆ.ಮ.ಹಿ ಪ್ರಾಥಮಿಕ ಶಾಲೆಯ ಪ್ರಧಾನ ಗುರುಗಳಾದ ಶಿಕ್ಷಕರಾದ ಕಲ್ಲಪ್ಪ ಬಾಗಿಮನಿ ಹಾಗೂ ಕೇಳಕರ ಪ್ರೌಢ ಶಾಲೆಯ ಚಿತ್ರಕಲಾ ಶಿಕ್ಷರರಾದ ಗುರುಪಾದಪ್ಪ ಗಾಣಿಗೇರ. ಚನ್ನಪ್ಪ ತಿಪ್ಪಿಮನಿ. ಎಲ್.ಆರ್ ಪೂಜೇರಿ ಇವರಿಗೆ ಗ್ರಾ.ಪಂ ಹಾಗೂ ಗ್ರಾಮಸ್ಥರಿಂದ ನಾಗರೀಕ ಸನ್ಮಾನ ನಡೆಯಿತು. ಈ
ಸಂದರ್ಭದಲ್ಲಿ ಟಿ.ಎ.ಪಿ.ಎಮ್.ಎಸ್. ಅಧ್ಯಕ್ಷ ಅಶೋಕ ನಾಯಿಕ. ಬಸನಗೌಡ ಪಾಟೀಲ. ಸುಭಾಸ ವಂಟಗೋಡಿ. ಗ್ರಾಪಂ ಅಧ್ಯಕ್ಷೆ ಲಕ್ಷ್ಮೀ ಬಾಗಿಮನಿ. ಸತೀಶ ವಂಟಗೋಡಿ. ಭೀಮಶಿ ಪೂಜೇರಿ. ಶ್ರೀಪತಿ ಗಣಿ. ತಮ್ಮಣ್ಣಾ ದೇವರ. ಎಸ್.ಎ ನಾಡಗೌಡರ. ಆರ್.ಎಮ್ ಮಹಾಲಿಂಗಪೂರ. ಮೂಡಲಗಿ ತಾಲೂಕ ಶಿಕ್ಷಕರ ಸಂಘದ ಅಧ್ಯಕ್ಷ ಲಕ್ಷ್ಮಣ ಬಡಕಲ್ಲ. ರಮೇಶ ಬುದ್ನಿ. ಸಿಆರ್.ಪಿ ಸುರೇಶ ತಳವಾರ. ಪಿಡಿಓ ಸದಾಶಿವ ದೇವರ. ಶೋಭಾ ಪೂಜೇರಿ. ದತ್ತು ಕುಲಕರ್ಣಿ. ಹಾಗೂ ಸರ್ವ ಗ್ರಾಪಂ ಸದಸ್ಯರು ಹಾಗೂ ಸಿಬ್ಬಂದಿ ಹಾಗೂ ಗ್ರಾಮಸ್ಥರು ಇದ್ದರು.