ತಮ್ಮ ಭರವಸೆಯ ಕಂಪನಿಯು ಭಾರತೀಯ ಜೀವ ವಿಮಾ ನಿಗಮ ಒಂದೇ-ಶಿವಪ್ರಕಾಶ
ಗುರ್ಲಾಪೂರ 14: ಭಾರತೀಯ ಜೀವ ವಿಮಾ ನಿಗಮವು ಇಂದು ದೇಶದ ಅತಿ ದೊಡ್ಡ ಸಾರ್ವಜನಿಕ ಉದ್ಯಮಿಯಾಗಿ ದೇಶದ ಆರ್ಥಿಕತೆಯ ಬೆನ್ನಲುಬುವಾಗಿ ಮುನ್ನುಗ್ಗುತ್ತಿದೆ ಎಂದು ಎಲ್.ಆಯ್.ಸಿಯ ರಾಯಬಾಗ ಶಾಖಾ ಮ್ಯಾನೇಜರ ಶಿವಪ್ರಕಾಶ ಹೇಳಿದರು.
ಅವರು ದಿ: 13 ರಂದು ಸ್ಥಳೀಯ ಶ್ರೀ ಮಲ್ಲಿಕಾರ್ಜುನ ರಂಗ ಮಂಟಪದಲ್ಲಿ 2018-19ನೇ ಸಾಲಿನ ವಿಮಾ ಗ್ರಾಮವೆಂದು ಘೋಷಿÀಸಿ 1 ಲಕ್ಷ ಚಕ್ ವಿತರಣೆ ಕಾರ್ಯಕ್ರಮದಲ್ಲಿ ಮಾತನಾಡುತ್ತಾ ಈಗಾಗಲೇ 63 ವರ್ಷ ಪೂರ್ಣ ಮಾಡಿರುವ ಎಲ್.ಆಯ್.ಸಿ ಸುಮಾರು 31 ಲಕ್ಷ ಕೋಟ ಆಸ್ತಿ ಹೊಂದಿದ್ದು 29 ಲಕ್ಷ ಕೋಟಿ ವಿಮಾ ಆಪತ್ತು ಮೊತ್ತ ಹೊಂದಿದೆ. ಕಳೆದ ಸಾಲಿನಲ್ಲಿ ಕೇಂದ್ರ ಸರಕಾರ ಮೂಲ ಬಂಡವಾಳಕ್ಕೆ 5% ರಂತೆ 2436ಕೋಟಿ ರೂ. ನೀಡಿದೆ. ಕಳೆದ ಸಾಲಿನ ಪಾಲಸಿದಾರರಿಗೆ 3,29,000ಕೋಟಿ ರೂ. ಗಳನ್ನು ಪಾವತಿಸಿ ಮುನ್ನುಗ್ಗುತ್ತಿದ್ದು ಸಾರ್ವಜನಿಕರ ಅನುಕೂಲಕ್ಕಾಗಿ ನಮ್ಮ ಸಂಸ್ಥೆಯು ಹಲವಾರು ಬದಲಾವಣೆಗಳನ್ನು ಮಾಡಿದೆ. ಹೆಚ್ಚಿನ ಲಾಭದ ಆಸೆಗಾಗಿ ಇತರ ಕಂಪನಿಗಳಲ್ಲಿ ಹಣ ತೊಡಿಗಿಸಿ ಮೋಸ ಹೋಗಬೇಡಿರಿ. ನಿಮ್ಮ ಬರವಸೆಯ ಕಂಪನಿಯು ಭಾರತೀಯ ಜೀವ ವಿಮಾ ನಿಗಮ ಒಂದೇ ಇದ್ದು ಗ್ರಾಮಸ್ಥರು ಸಹಕಾರ ನೀಡಿದರೆ ಇನ್ನೊಮ್ಮೆ ನಿಮ್ಮ ಗ್ರಾಮವು ವಿಮಾ ಗ್ರಾಮವಾಗುವುದರಲ್ಲಿ ಸಂದೇಹವಿಲ್ಲ ಎಂದು ಹೇಳಿದರು.
ಸಭೆಯ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಎಸ್.ಜಿ.ಹಂಚಿನಾಳ ಇವರು ಜೀವ ವಿಮಾ ನಿಗಮದಿಂದ ಪಾಲಸಿದಾರರಿಗೆ ಹಾಗೂ ಗ್ರಾಮಕ್ಕೆ ಆಗುವ ಲಾಭದ ಬಗ್ಗೆ ತಿಳಿಸಿದರು.
ಗ್ರಾಮಸ್ಥರ ಪರವಾಗಿ ಭಾರತೀಯ ಜೀವ ವಿಮಾ ನಿಗಮದ ರಾಯಬಾಗ ಶಾಖಾ ಅಧಿಕಾರಿಗಳಾದ ಶಿವಪ್ರಕಾಶ ಹಾಗೂ ಮಕರಂದ ಪಾಟೀಲ ಇವರಿಗೆ ಸತ್ಕಾರ ಮಾಡಿದರು ಹಾಗೂ ಜೀವ ವಿಮಾ ನಿಗಮದ ಪ್ರತಿನಿಧಿಯಾದ ವಿಮಾ ಗ್ರಾಮದ ರೂವಾರಿ ಲಕ್ಷ್ಮಣ ಗಾಣಿಗೇರ ಹಾಗ ಇನ್ನೋರ್ವ ಎಲ್.ಆಯ್.ಸಿ. ಪ್ರತಿನಿಧಿ ಲಕ್ಷ್ಮಣ ಮರಾಠೆ ಇವರನ್ನು ವಿಭಾಗಾಧಿಕಾರಿಗಳು ಸತ್ಕರಿಸಿದರು.
ಸಾನಿಧ್ಯ ರುದ್ರಯ್ಯಾ ಹಿರೇಮಠ, ಶಿವಾನಂದ ಹಿರೇಮಠ ಅರಂಜಯ ಉಪಾಧ್ಯಯ, ಗುರುನಾಥ ವಡೇಯರ ಹಾಗೂ ಆರ್.ಬಿ.ನೇಮಗೌಡರ, ಟಿ.ಡಿ.ಗಾಣಿಗೇರ, ಪುರಸಭೆ ಸದಸ್ಯರಾದ ಆನಂದ ಟಪಾಲದಾರ, ಖಾನಟ್ಟಿ ಗ್ರಾ.ಪಂ.ಸದಸ್ಯರಾದ ಮಹಾಲಿಂಗ ಮುಗಳಖೋಡ ಮತ್ತು ಆರ್.ಸಿ.ಸತ್ತಿಗೇರಿ, ಭೀಮಪ್ಪ ದೇವರಮನಿ, ಮಹಾದೇವ ಜಕಾತಿ, ಮಹಾದೇವ ರಂಗಾಪೂರ, ರೇವಪ್ಪ ಗಾಣಿಗೇರ, ಬಸಪ್ಪ ಗಾಣಿಗೇರ, ಸಂಗಪ್ಪ ಗಾಣಿಗೇರ, ರಾಮಪ್ಪ ಹಳ್ಳೂರ, ಪವನ ಬಡಿಗೇರ, ಸದಾಶಿವ ನೇಮಗೌಡರ ಅನೇಕರು ಉಪಸ್ಥಿತರಿದ್ದರು. ಜೀವ ವಿಮಾ ನಿಗಮದ ಪ್ರತಿನಿಧಿಯಾದ ಲಕ್ಷ್ಮಣ ಗಾಣಿಗೇರ ಸ್ವಾಗತಿಸಿದರು. ಶಿವಾನಂದ ಮರಾಠೆ ನಿರೂಪಿಸಿ ವಂದಿಸಿದರು.
ವರದಿ – ಮಹಾದೇವ ನಡುವಿನಕೇರಿ