Breaking News
Home / Uncategorized / ಲಯನ್ಸ್ ಕ್ಲಬ್‍ನ 100ನೇ ಅನ್ನದಾಸೋಹ

ಲಯನ್ಸ್ ಕ್ಲಬ್‍ನ 100ನೇ ಅನ್ನದಾಸೋಹ

Spread the love

ಮೂಡಲಗಿ: ಲಯನ್ಸ್ ಕ್ಲಬ್ ಮೂಡಲಗಿ ಪರಿವಾರದಿಂದ ಸ್ಥಳೀಯ ಸಮುದಾಯ ಆರೋಗ್ಯ ಕೇಂದ್ರದ ಸರ್ಕಾರಿ ಆಸ್ಪತ್ರೆಯ ಆವರಣದಲ್ಲಿ ರೋಗಿಗಳಿಗೆ 100ನೇ ಅನ್ನದಾಸೋಹವನ್ನು ಅ. 28ರಂದು ಮಧ್ಯಾಹ್ನ 12ಕ್ಕೆ ಏರ್ಪಡಿಸಿರುವರು.
ಅನ್ನದಾಸೋಹ ಕಾರ್ಯಕ್ರಮದ ಸಾನಿಧ್ಯವನ್ನು ಶಿವಬೋಧರಂಗ ಮಠದ ದತ್ತಾತ್ರಯಬೋಧ ಸ್ವಾಮಿಗಳು ವಹಿಸುವರು. ಅಧ್ಯಕ್ಷತೆಯನ್ನು ಲಯನ್ಸ್ ಕ್ಲಬ್ ಪರಿವಾರದ ಅಧ್ಯಕ್ಷ ಸಂಜಯ ಮೋಕಾಶಿ ವಹಿಸುವರು.
ಉದ್ಘಾಟನೆಯನ್ನು ಲಯನ್ಸ್ ಕ್ಲಬ್ ಡಿಸ್ಟ್ರೀಕ್ಟ್ ಗವರ್ನರ್ ಹುಬ್ಬಳ್ಳಿಯ ಉದ್ಯಮಿ ಮನೋಜ ಮಾನೇಕ ನೆರವೇರಿಸುವರು. ಮುಖ್ಯ ಅತಿಥಿಯಾಗಿ ಪುರಸಭೆ ಮುಖ್ಯಾಧಿಕಾರಿ ತುಕಾರಾಮ ಮಾದರ ಮತ್ತು ಅನ್ನದಾಸೋಹಿ ಸಾಯಿ ಪಿಯು ಕಾಲೇಜು ಅಧ್ಯಕ್ಷ ಪುಲಕೇಶ ಸೋನವಾಲಕರ ಭಾಗವಹಿಸುವರು ಎಂದು ಲಯನ್ ಪರಿವಾರದ ಕಾರ್ಯದರ್ಶಿ ಸೋಮಶೇಖರ ಹಿರೇಮಠ ಮತ್ತು ಖಜಾಂಚಿ ಕೃಷ್ಣ ಕೆಂಪಸತ್ತಿ ತಿಳಿಸಿರುವರು.


Spread the love

About inmudalgi

Check Also

ತೋಟಗಾರಿಕೆ ಮಹಾವಿದ್ಯಾಲಯದಲ್ಲಿ ಸೇವಾಲಾಲ ಜಯಂತಿ

Spread the love ಮೂಡಲಗಿ: ಅರಭಾವಿ ಕಿತ್ತೂರು ರಾಣಿ ಚನ್ನಮ್ಮ ತೋಟಗಾರಿಕೆ ಮಹಾವಿದ್ಯಾಲಯದಲ್ಲಿ ಸಂತ ಸೇವಾಲಾಲ ಅವರ 286 ನೇ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ