
ಮೂಡಲಗಿ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಲಯನ್ಸ್ ಕ್ಲಬ್ ಮೂಡಲಗಿ ಪರಿವಾರದಿಂದ ಆಯೋಜಿಸಿದ್ದ ಅನ್ನದಾಸೋಹ ಕಾರ್ಯಕ್ರಮವನ್ನು ಲಯನ್ಸ್ ಜಿಲ್ಲಾ ಗವರ್ನರ ಗೋವಾದ ಜೈಮೋಲ್ ನಾಯಕ ಮತ್ತು ಕಾರ್ಯದರ್ಶಿ ಡಾ. ಕೀರ್ತಿ ನಾಯಕ ಚಾಲನೆ ನೀಡಿದರು.
‘ಅನ್ನದಾನ ಶ್ರೇಷ್ಠ ಕಾರ್ಯವಾಗಿದೆ’
ಮೂಡಲಗಿ: ‘ಹಸಿದವರಿಗೆ ಅನ್ನ ನೀಡುವುದು ಪುಣ್ಯದ ಕಾರ್ಯವಾಗಿದೆ’ ಎಂದು ಲಯನ್ಸ್ ಡಿಸ್ಟ್ರೀಕ್ಟ್ ಗವರ್ನರ್ ಗೋವಾದ ಜೈಮೋಲ್ ನಾಯಕ ಹೇಳಿದರು.
ಇಲ್ಲಿಯ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಲಯನ್ಸ್ ಕ್ಲಬ್ ಮೂಡಲಗಿ ಪರಿವಾರದ 106ನೇ ಅನ್ನದಾಸೋಹ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು ನಿಸ್ವಾರ್ಥದಿಂದ ಮಾಡುವ ಸಮಾಜ ಸೇವೆಯು ನಿಜವಾದ ಸಮಾಜ ಸೇವೆಯಾಗುತ್ತದೆ. ಸಮಾಜ ಸೇವಾ ಕಾರ್ಯವೇ ಲಯನ್ಸ್ ಕ್ಲಬ್ ಮುಖ್ಯ ಉದ್ದೇಶವಾಗಿದೆ ಎಂದರು.
ಮೂಡಲಗಿ ಲಯನ್ಸ್ ಕ್ಲಬ್ ಪರಿವಾರವು ಸರ್ಕಾರಿ ಆಸ್ಪತ್ರೆಯಲ್ಲಿ ಒಳ ಮತ್ತು ಹೊರ ರೋಗಿಗಳಿಗೆ ಅನ್ನದಾಸೋಹ ಕಾರ್ಯ ಮಾಡುವ ಮೂಲಕ ಶ್ಲಾಘನೀಯ ಕಾರ್ಯವಾಗಿದೆ ಎಂದರು.
ಲಯನ್ಸ್ ಕ್ಲಬ್ ಜಿಲ್ಲಾ ಕಾರ್ಯದರ್ಶಿ ಡಾ. ಕೀರ್ತಿ ಜೆ. ನಾಯಕ ಮಾತನಾಡಿ ಅನ್ನದಾಸೋಹವು ಪುಣ್ಯದ ಕಾರ್ಯವಾಗಿದೆ. ಈಗಾಗಲೇ 105 ಅನ್ನದಾಸೋಹ ಮಾಡಿರುವುದು ಹೆಮ್ಮೆಪಡುವಂತದ್ದು ಎಂದರು.
ಸಮುದಾಯ ಆರೋಗ್ಯ ಕೇಂದ್ರ ಮುಖ್ಯ ವೈದ್ಯಾಕಾರಿ ಡಾ. ಭಾರತಿ ಕೋಣಿ, ಲಯನ್ಸ್ ವಲಯ ಅಧ್ಯಕ್ಷ ಡಾ. ರಮೇಶ ಶೆಟ್ಟರ, ಈರಣ್ಣ ಕೊಣ್ಣೂರ, ಬಾಲಶೇಖರ ಬಂದಿ ಮಾತನಾಡಿದರು.
ಅನ್ನದಾಸೋಹ ಸೇವೆ ಮಾಡಿದ್ದ ಡಾ. ತಿಮ್ಮಣ್ಣ ಗಿರಡ್ಡಿ ಅವರನ್ನು ಅಭಿನಂದಿಸಿದರು. 400ಕ್ಕೂ ಅಧಿಕ ಜನರು ಅನ್ನದಾಸೋಹದಲ್ಲಿ ಭಾಗವವಹಿಸಿದ್ದರು.
ಲಯನ್ ಕ್ಲಬ್ ಮೂಡಲಗಿ ಪರಿವಾರ ಅಧ್ಯಕ್ಷ ವಿಶಾಲ ಶೀಲವಂತ, ಕಾರ್ಯದರ್ಶಿ ಗಿರೀಶ ಆಸಂಗಿ, ಖಜಾಂಚಿ ಡಾ. ಪ್ರಶಾಂತ ಬಾಬಣ್ಣವರ, ಡಾ. ಪ್ರಕಾಶ ನಿಡಗುಂದಿ, ವೆಂಕಟೇಶ ಸೋನವಾಲಕರ, ಈರಣ್ಣ ಕೊಣ್ಣೂರ, ಎನ್.ಟಿ. ಪಿರೋಜಿ, ಕೃಷ್ಣಾ ಕೆಂಪಸತ್ತಿ, ಶಿವಾನಂದ ಗಾಡವಿ, ಶ್ರೀಶೈಲ್ ಲೋಕನ್ನವರ, ಡಾ. ಎಸ್.ಎಸ್. ಪಾಟೀಲ, ಡಾ. ಯಲ್ಲಾಲಿಂಗ ಮುಳವಾಡ, ಡಾ. ಪ್ರಕಾಶ ನೇಸೂರ, ಡಾ. ಸೋಮಶೇಖರ ಹಿರೇಮಠ, ಡಾ. ಲಕ್ಷ್ಮಣ ಕಂಕಣವಾಡಿ, ಪ್ರಮೋದ ಪಾಟೀಲ, ಅಪ್ಪಣ್ಣ ಬಡಿಗೇರ, ಶಿವಬಸು ಈಟಿ, ಮಹಾಂತೇಶ ಹೊಸೂರ, ಶಿವಬಸು ಯರಝರ್ವಿ, ಸಂಗಮೇಶ ಕೌಜಲಗಿ, ಸೋಮು ಹಿರೇಮಠ, ಡಾ. ರವಿಚಂದ್ರ ಕಂಕಣವಾಡಿ ಇದ್ದರು.
IN MUDALGI Latest Kannada News