ಮೂಡಲಗಿಯ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಆಯೋಜಿಸಿದ್ದ ಸ್ವಯಂ ಪ್ರೇರಿತ ರಕ್ತದಾನ ಶಿಬಿರವನ್ನು ತಾಲ್ಲೂಕು ಆರೋಗ್ಯಾಧಿಕಾರಿ ಡಾ. ಎಂ.ಎಸ್. ಕೊಪ್ಪದ ಅವರು ರಕ್ತದಾನ ಮಾಡಿರುವ ಸಂಜಯ ಮೋಕಾಶಿ ಅವರಿಗೆ ಪ್ರಮಾಣ ಪತ್ರ ನೀಡಿದರು.
———————————————–
ರಕ್ತದಾನ ಶ್ರೇಷ್ಠ ದಾನವಾಗಿದೆ
ಮೂಡಲಗಿ: ‘ರಕ್ತದಾನದಿಂದ ಒಂದು ಜೀವ ಉಳಿಸಿದ ಪುಣ್ಯವು ದಾನಿಗೆ ದೊರೆಯುತ್ತದೆ’ ಎಂದು ಮೂಡಲಗಿ, ಗೋಕಾಕ ತಾಲ್ಲೂಕು ಆರೋಗ್ಯಾಧಿಕಾರಿ ಡಾ. ಎಂ.ಎಸ್. ಕೊಪ್ಪದ ಹೇಳಿದರು.
ಇಲ್ಲಿಯ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಬೆಳಗಾವಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೇವೆಗಳು ಮತ್ತು ಲಯನ್ಸ್ ಕ್ಲಬ್ ಮೂಡಲಗಿ ಪರಿವಾರದಿಂದ ಆಯೋಜಿಸಿದ ಸ್ವಯಂ ಪ್ರೇರಿತ ರಕ್ತದಾನ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದ ಅವರು ರಕ್ತವನ್ನು ನೀಡುವುದರಿಂದ ಹೊಸ ಆರೋಗ್ಯ ಸುಧಾರಿಸುವುದು ಎಂದರು.
ಜಿಲ್ಲಾ ರಕ್ತ ಭಂಡಾರದ ವೈದ್ಯಾಕಾರಿ ಡಾ. ಆರ್.ಜಿ. ಪಾಟೀಲ ಮಾತನಾಡಿ ರಕ್ತದಾನದಿಂದ ಹೃದಯರೋಗ ತೊಂದರೆಯನ್ನು ದೂರಮಾಡುತ್ತದೆ, ದೇಹದಲ್ಲಿಯ ಕ್ಯಾಲರಿಗಳನ್ನು ಕಡಿಮೆ ಮಾಡುತ್ತದೆ, ರಕ್ತದಾನಿಯಲ್ಲಿ ಬದುಕುವ ಉತ್ಸಾಹವನ್ನು ಇಮ್ಮಡಿಸುತ್ತದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆವಹಿಸಿದ್ದ ಸಮುದಾಯ ಆರೋಗ್ಯ ಕೇಂದ್ರ ಮುಖ್ಯ ವೈದ್ಯಾಧಿಕಾರಿ ಡಾ. ಭಾರತಿ ಕೋಣಿ ಮಾತನಾಡಿ ಆರೋಗ್ಯ ಇಲಾಖೆಯಿಂದ ಪ್ರತಿ ವರ್ಷವೂ ರಕ್ತದಾನ ಶಿಬಿರವನ್ನು ಏರ್ಪಡಿಸುತ್ತಿದ್ದು, ಸಾರ್ವಜನಿಕರ ಸಹಕಾರ ನಮ್ಮೊಂದಿಗೆ ಇರಲಿ ಎಂದರು.
ಮೂಡಲಗಿ ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಬಸನಗೌಡ ಈಶ್ವರಪ್ಪಗೋಳ, ಗೋಕಾಕದ ರುದ್ರಪ್ಪ ಬಸ್ಸಾಪೂರ, ಮಲ್ಲವ್ವ ನಾಯಕ, ಬಾಲಶೇಖರ ಬಂದಿ ಮಾತನಾಡಿದರು.
ರಕ್ತದಾನ ಮಾಡಿದ 50 ದಾನಿಗಳಿಗೆ ಸ್ಥಳದಲ್ಲಿ ಪ್ರಮಾಣ ಪತ್ರಗಳನ್ನು ನೀಡಿದರು. ವಿರಳ ‘ಎ ಪಾಶಿಟಿವ್’ ರಕ್ತ ಗ್ರೂಪ್ ಹೊಂದಿದ್ದ ನೇಹಾಲ್ ಬಂದಿ ಅವರನ್ನು ಕಾರ್ಯಕ್ರಮದಲ್ಲಿ ಅಭಿನಂದಿಸಿದರು.
ಶಿಬಿರದಲ್ಲಿ ಲಯನ್ಸ್ ಪರಿವಾರದಿಂದ ಡಾ. ಸಚಿನ ಟಿ. ಅವರು ಅನ್ನದಾನ ಪ್ರಾಯೋಜನೆ ಮಾಡಿದ್ದರು.
ಲಯನ್ಸ್ ಕ್ಲಬ್ ಅಧ್ಯಕ್ಷ ಶ್ರೀಶೈಲ್ ಲೋಕನ್ನವರ, ಖಜಾಂಚಿ ಸುಪ್ರೀತ ಸೋನವಾಲಕರ, ವೆಂಕಟೇಶ ಸೋನವಾಲಕರ, ಸಂಜಯ ಮೋಕಾಶಿ, ಈರಣ್ಣ ಕೊಣ್ಣೂರ, ಡಾ. ಪ್ರಕಾಶ ನಿಡಗುಂದಿ, ಪುಲಕೇಶ ಸೋನವಾಲಕರ, ಮಹಾಂತೇಸ ಹೊಸೂರ, ಶಿವಾನಂದ ಗಾಡವಿ, ಡಾ. ಪ್ರಶಾಂತ ಬಾಬಣ್ಣವರ, ಡಾ. ಲಕ್ಷ್ಮಣ ಕಂಕಣವಾಡಿ, ಕಲ್ಮೇಶ ಗೋಕಾಕ, ಶಿವಲಿಂಗ ಪಾಟೀಲ, ಚೇತನ ನಿಶಾನಿಮಠ ಇದ್ದರು.