ಮಹಾಲಕ್ಷ್ಮೀ ಸೋಸೈಟಿಯ 31ನೇ ವಾರ್ಷಿಕ ಸರ್ವಸಾಧಾರಣ ಸಭೆ
ಮಹಾಲಕ್ಷ್ಮೀ ಸೊಸಾಯಿಟಿಗೆ 3.51ಕೋಟಿ ರೂ ನಿವ್ವಳ ಲಾಭ-ಮಲ್ಲಪ್ಪ ಗಾಣಿಗೇರ
ಮೂಡಲಗಿ: ಮಹಾಲಕ್ಷ್ಮೀ ಸೊಸಾಯಿಟಿಯ ಮೇಲೆ ಠೇವಣಿದಾರರು ಮತ್ತು ಸಾಲಗಾರರು ಇಟ್ಟಿರುವ ವಿಶ್ವಾಸದಿಂದ ಮತ್ತು ಆಡಳಿತ ಮಂಡಳಿ ಹಾಗೂ ಸಿಬ್ಬಂದಿ ವರ್ಗದವರು ನಿಶ್ವಾರ್ಥ ಸೇವೆಯಿಂದ ಸೊಸಾಯಿಟಿಯು ಹತ್ತು ಶಾಖೆಗಳನ್ನು ಹೊಂದಿ ಕಳೆದ ಆರ್ಥಿಕ ವರ್ಷದ ಅಂತ್ಯಂಕ್ಕೆ 3.51 ಕೋಟಿ ರೂ ಲಾಭ ಹೊಂದಿ ಪ್ರಗತಿ ಪಥದತ್ತ ಸಾಗಿದೆ ಎಂದು ಮಹಾಲಕ್ಷ್ಮೀ ಸೊಸಾಯಿಟಿಯ ಅಧ್ಯಕ್ಷ ಮಲ್ಲಪ್ಪ ಗು.ಗಾಣಿಗೇರ ಹೇಳಿದರು.
ಶುಕ್ರವಾರದಂದು ಜರುಗಿದ ಪಟ್ಟಣದ ಪ್ರತಿಷ್ಠಿತ ಸಹಕಾರಿ ಸಂಘಗಳಲ್ಲಿ ಒಂದಾದ ಶ್ರೀ ಮಹಾಲಕ್ಷ್ಮೀ ಅರ್ಬನ್ ಕೋ-ಆಪ್ ಕ್ರೆಡಿಟ್ ಸೊಸಾಯಿಟಿ ಸನ್ 2022-23 ನೇ ಸಾಲಿನ 31ನೇ ವಾರ್ಷಿಕ ಸರ್ವಸಾಧಾರಣ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ, ಸೊಸಾಯಿಟಿಯ ಹತ್ತು ಶಾಖೆಗಳಲ್ಲಿ ಈಗಾಗಲೇ ಎರಡು ಶಾಖೆಗಳ ಸ್ವಂತ ಕಟ್ಟಡ ಹೊಂದಿ ಇನ್ನೊಂದು ಶಾಖೆಗೆ ನಿವೇಶ ಖರೀದಿಸಲಾಗಿದೆ. ಸೊಸಾಯಿಟಿಯ ಪ್ರಗತಿಗೆ ಸಹಕರಿಸಿದ ಸರ್ವರಿಗೂ ಕೃತಜ್ಞತೆಗಳನ್ನು ಸಲ್ಲಿಸಿದ ಅವರು ಸೊಸಾಯಿಟಿಯು 2023 ರ ಮಾರ್ಚ ಅಂತ್ಯಕ್ಕೆ 116.72 ಕೋಟಿ ದುಡಿಯುವ ಬಂಡವಾಳವನ್ನು ಹೊಂದಿ ಹೆಚ್ಚು ಲಾಭ ಗಳಿಸಿದೆ ಎಂದರು
ಗೋಕಾಕ ಲೆಕ್ಕ ಪರಿಶೋಧಕ ಸೈದಪ್ಪ ಗದಾಡಿ ಮಾತನಾಡಿ, ಸೊಸಾಯಿಟಿಯ ಗ್ರಾಹಕರು ಅನಾವಶ್ಯಕ ಸಾಲಪಡೆಯ ಅವಶ್ಯಕವಾಗಿದಕ್ಕೆ ಸಾಲ ಪಡೆದು ಉಳಿತಾಯ ಮಾಡುವ ಪ್ರವೃತ್ತಿ ಬೆಳೆಸಿಕೊಂಡರೆ ಜೀವನದಲ್ಲಿ ಮುಂದಿನ ಪೀಳಿಗೆ ಒಳ್ಳೆಯದಾಗುತ್ತದೆ ಎಂದ ಅವರು ಉಳಿತಾಯ ಹೆಚ್ಚೆಚು ಆಗುವದರಿಂದ ಆರ್ಥಿಕ ಮಟ್ಟ ಹೆಚ್ಚಾಗುತ್ತದೆ, ಪ್ರತಿಯೋಬ್ಬರು ಆದಾಯ, ಉಳಿಕೆ, ಹುಡಿಕೆಯನ್ನು ಅಳವಡಿಸಿಕೊಳ್ಳಬೇಕೆಂದರು.
ಸೊಸಾಯಿಟಿಯ ಕಾನೂನು ಸಲಹೆಗಾರ ಎಸ್.ವಾಯ್.ಹೊಸಟ್ಟಿ ಮಾತನಾಡಿ, ಠೇವಣಿದಾರರು, ಸಾಲಗಾರರು ಮತ್ತು ಸಿಬ್ಬಂದಿ ವರ್ಗದವರಲ್ಲಿ ಸೊಸಾಯಟಿ ನಮ್ಮದು ಎಂದು ಮನಸ್ಸಿನಲ್ಲಿ ಇದ್ದರೆ ಸೊಸಾಯಟಿಯು ಪ್ರಗತಿ ಹೊಂದಲು ಸಾಧ್ಯ, ಸಾಲಗಾರರು ಸಮಯಕ್ಕೆ ಸರಿಯಾಗಿ ಸಾಲ ಮರು ಪಾವತಿ ಮಾಡಿಕೊಂಡು ಸಂಘದ ಬೆಳವಣಿಗೆಗೆ ಸಹಕರಿಸ ಬೇಕೆಂದರು.
ಹನಮಂತ ಪಾರ್ಶಿ ಮತ್ತು ಸಾಲಹಳ್ಳಿ ಶಾಖೆಯ ಎಸ್.ಎನ್.ಹೊಸಗೌಡ್ರ ಮಾತನಾಡಿದರು.
ಸೋಸೈಟಿ ಉಪಾಧ್ಯಕ್ಷ ಡಾ.ಪ್ರಕಾಶ ನಿಡಗುಂದಿ ವರದಿ ವಾಚಿಸಿದರು.ಎಚ್.ಬಿ.ಎಂದೇಸಾಯಿ ಅಢಾವೆ ಪತ್ರಿಕೆ, ಸುಭಾಸ ಪುಟ್ಟಿ ಲಾಭ-ಹಾನಿ ಪತ್ರಿಕೆ, ಅರ್ಜುನ ಗೋಕಾಕ ಅಂದಾಜು ಲಾಭ ಹಾನಿ ಪತ್ರಿಕೆ ಮಂಡಿಸಿದರು.
ಸಭೆಯಲ್ಲಿ ಸೊಸಾಯಿಟಿಯ ವಿವಿಧ ಶಾಖೆಯ ಸಲಹಾ ಸಮೀತಿಯ ಸದಸ್ಯರಾದ ಎಮ್.ಎಸ್.ತುಪ್ಪದ, ಬಿ.ಎಲ್.ಪಾಟೀಲ, ಎನ್.ಡಿ.ಇಟ್ನಾಳ, ಎಚ್.ಎಂ.ವಡ್ಡರ, ಎಸ್.ಬಿ.ಮೇಟಿ, ಸದಾಶಿವ ಕದಮ, ಎನ್.ಎ.ಶಾನವಾಡ, ಎಮ್.ಜಿ.ಪಾಟೀಲ ಹಾಗೂ ಪ್ರಧಾನ ಕಛೇರಿಯ ನಿರ್ದೇಶಕರಾದ ಮುತ್ತಪ್ಪ ಈರಪ್ಪನವರ, ಶಿವಬಸು ಖಾನಟ್ಟಿ, ಸಂತೋಷ ಪಾರ್ಶಿ, ಮಹಾದೇವ ಗೋಕಾಕ, ಸಚೀನ ಮುನ್ಯಾಳ, ಸಾಂವಕ್ಕ ಶೆಕ್ಕಿ, ಭಾರತಿ ಪಾಟೀಲ, ವಿದ್ಯಾಶ್ರೀ ಮುರಗೋಡ, ಗೌರವ್ವ ಪಾಟೀಲ, ಶೋಭಾ ಕದಂ ಮತ್ತಿತರರು ಇದ್ದರು.
ಪ್ರಧಾನ ಕಾರ್ಯದರ್ಶಿ ಚನ್ನಬಸಪ್ಪ ಬಗನಾಳ ಸ್ವಾಗತಿಸಿದರು, ಮಾರಾಟಾಧಿಕಾರಿ ಅರ್ಜುನ ಗಾಣಿಗೇರ ನಿರೂಪಿಸಿದರು, ವಿಜಯ ನಿಡಗುಂದಿ ವಂದಿಸಿದರು.