ಸರಕಾರದ ಆದೇಶ ಗಾಳಿಗೆ ತೂರಿದ ಮೂಡಲಗಿ ತಾಲೂಕಾ ಆಡಳಿತ – ರವಿವಾರದ ಸುದ್ದಿಗೆ ಎಚ್ಚೆತ ಅಧಿಕಾರಿಗಳು
ಸಂತೆ ,ಜಾತ್ರೆ ,ಸಭೆ, ಸಮಾರಂಭ ಬಂದ
ಕೊರೋನಾ ವೈರಸ್ ತಡಗಟ್ಟಲು ಸಾಕಷ್ಟು ಮುಂಜಾಗ್ರತ ಕ್ರಮ
ಮೂಡಲಗಿ ಕೊರೋನಾ ವೈರಸ್ ತಡೆಗಟ್ಟಲು ಸಂತೆ, ಜಾತ್ರೆ, ಸಭೆ ಸಮಾರಂಭ ಬಂದು ಮಾಡಿ ಕಟ್ಟುನಿಟ್ಟಿನ ಕ್ರಮ ಜರುಗಿಸುವಲ್ಲಿ ಸಾವ೯ಜನಿಕರು ಸಹಕರಿಸಬೇಕೆಂದು ಸಿ ಪಿ ಐ ವೆಂಕಟೇಶ ಮುರನಾಳ ಹೇಳಿದರು.
ಅವರು ಪುರಸಭೆ ಸಭಾಂಗಣದಲ್ಲಿ ಜರುಗಿದ ಕೋವಿಡ್ 19 ಕೊರೋನಾ ವೈರಸ್ ತಡೆಗಟ್ಟುವ ಮುಂಜಾಗ್ರತ ಕ್ರಮವಾಗಿ ವಿವಿಧ ಇಲಾಖಾಧಿಕಾರಿಗಳ ಮತ್ತು ಮುಖಂಡರ ಸಭೆಯಲ್ಲಿ ಮಾತನಾಡಿ , ಬೇರೆ ಜಿಲ್ಲೆ ಅಥವಾ ಹೋರ ರಾಜ್ಯಗಳಿಂದ ಬರುವ ಹೊಸ ವ್ಯಕ್ತಿಗಳ ಬಗ್ಗೆ ಮಾಹಿತಿ ನೀಡಬೇಕು ಜಾತ್ರೆ, ಸಂತೆ, ದನಗಳ ಪೇಟೆ, ಎ.ಪಿ.ಎಮ್ ಸಿ ಮಾರುಕಟ್ಟೆ ಬಂದ ಮಾಡುವ ಕಟ್ಟುನಿಟ್ಟಿನ ಕ್ರಮ ಜರುಗಿಸಲಾಗುವುದು. ಬಸ್ಸ ನಿಲ್ದಾಣದಲ್ಲಿ ಬರ ಹೋಗುವ ಪ್ರಯಾಣಿಕರಿಗಾಗಿ ಸ್ವಚ್ಛತೆ ಬಗ್ಗೆ ಜಾಗೃತಿ ಮೂಡಿಸುವದು. ಬೀದಿ ಬದಿಯ ವ್ಯಾಪಾರವನ್ನು ಸರಕಾರ ಮುಂದಿನ ಆದೇಶ ಬರುವರೆಗೆ ಈ ಮೇಲಿನ ಸೂಚನೆಗಳನ್ನು ಪಾಲಿಸಬೇಕು ಎಂದು ಸಭೆಯಲ್ಲಿ ಹೇಳಿದರು.
ಸಮುದಾಯ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿಗಳಾದ ಡಾ : ಭಾರತಿ ಕೋಣಿ ಮಾತನಾಡಿ ಕೊರೋನಾ ಲಕ್ಷಣಗಳ ಬಗ್ಗೆ ಮತ್ತು ಕೊರೋನಾ ನಿಯಂತ್ರಣ ಹೇಗೆ ಮಾಡ ಬೇಕೆಂದವನ್ನು ಸವಿಸ್ತಾರವಾಗಿ ಹೇಳಿದರು.
ತಹಶೀಲ್ದಾರ ಡಿ ಜೆ ಮಹಾತ ಮಾತನಾಡಿ ಬಯಲು ಶೌಚ, ಸಿಕ್ಕಲ್ಲೆ ಊಗಳುವದನ್ನು ಮಾಡದೆ ಸ್ವಚ್ಛತೆಯನ್ನು ಕಾಪಾಡಿ ಸುಳ್ಳು ವದಂತಿ, ಊಹಾಪೋಹಗಳಿಗೆ ಕಿವಿ ಕೊಡಬೇಡಿ ಎಂದರು.
ಡಾ : ತಿಮ್ಮಣ್ಣಾ ಗಿರಡ್ಡಿ ಮಾತನಾಡಿ ಕೊರೋನಾ ವೈರಸ್ ಬಗ್ಗೆ ಎಚರವಹಿಸಿಲು ಮತ್ತು ರೋಗ ತಡೆಗಟ್ಟಲು ಮುಂಜಾಗ್ರತೆಯ ಕ್ರಮ ಅನುಸರಿಸಲು ಹೇಳಿದರು.
ಆರೋಗ್ಯ ಅಧಿಕಾರಿ ಚಿದಾನಂದ ಮುಗಳಖೋಡ ಪ್ರಾಸ್ತಾವಿಕವಾಗಿ ಮಾತನಾಡಿ ತಹಶೀಲ್ದಾರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಸಾವ೯ಜನಿಕರ ಹಿತದೃಷ್ಟಿಯಿಂದ ಮೂಡಲಗಿ ಸಂತೆ, ದನಗಳಪೇಟೆ ಸಂತೆ, ಕುರಿ,ಮೇಕೆ , ಕೋಳಿ ಮತ್ತು ದನಗಳ ಮಾಂಸ ಮಾರಾಟ ಮಾಡಕೂಡದು ಮತ್ತು ಬೀದಿ ಬದಿಯ ವ್ಯಾಪಾರಸ್ಥರು ತಮ್ಮ ವಹಿವಾಟು ಬಂದ ಮಾಡಲು ಆದೇಶಿಸಿದರು.
ವೇದಿಕೆಯಲ್ಲಿ ಪುರಸಭೆ ಪುರಸಭೆ ಪ್ರಭಾರಿ ಮುಖ್ಯಾಧಿಕಾರಿ ಸಿ.ಬಿ.ಪಾಟೀಲ , ಶಿಕ್ಷಣ ಸಂಯೋಜಕ ಟಿ ಕರಿಬಸವರಾಜ, ಡಾ : ಪ್ರಶಾಂತ ಬಾಬಣ್ಣವರ , ಡಾ : ಖಣದಾಳೆ , ಡಾ : ಮಹೇಶ ಮುಳವಾಡ, ಡಾ : ಪ್ರಶಾಂತ ಬುದ್ನಿ , ಮುಖಂಡರಾದ ರವೀಂದ್ರ ಸಣ್ಣಕ್ಕಿ, ಜಯಾನಂದ ಪಾಟೀಲ, ಅನೇಕರು ಹಾಜರಿದ್ದರು.
ವರದಿ : ಈಶ್ವರ ಢವಳೇಶ್ವರ
ಮೂಡಲಗಿ